ನ್ಯೂಸ್

ಇಷ್ಟು ವರ್ಷವಾದ್ರು ನಟ ಪ್ರಭಾಸ್​ ಮದುವೆ ಆಗದಿರಲು ಇದೇ ಬಲವಾದ ಕಾರಣ! ಕಡೆಗೂ ಗುಟ್ಟು ರಟ್ಟು | Prabhas Marriage

ಮೋಹನ್​ ಶೆಟ್ಟಿ

Prabhas Marriage: ಟಾಲಿವುಡ್​ ರೆಬೆಲ್ ಸ್ಟಾರ್​ ನಟ ಪ್ರಭಾಸ್​ ಅಭಿನಯದ ಕಲ್ಕಿ 2898 ಎಡಿ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಕಂಡಿದ್ದು, ನಟನ ಸಿನಿ ಕರಿಯರ್​ಗೆ ಹೊಸ ಮೈಲಿಗಲ್ಲು ನೀಡಿತು. ಬಾಹುಬಲಿ, ಕಲ್ಕಿ, ಮಿರ್ಚಿ ಸೇರಿದಂತೆ ಹಲವಾರು ಬ್ಲಾಕ್​ಬಸ್ಟರ್​ ಹಿಟ್​ ಚಿತ್ರಗಳ ಮೂಲಕ ಇಂದು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್​ ಇನ್ನೂ ಏಕೆ ಮದುವೆಯಾಗಿಲ್ಲ, ದಾಂಪತ್ಯ ಜೀವನಕ್ಕೆ ಕಾಲಿಡಲು ಬಯಸ್ತಿಲ್ಲ ಎಂಬುದು ಅವರ ಅಭಿಮಾನಿಗಳನ್ನು ಬೆಂಬಿಡದೆ ಕಾಡುತ್ತಿರುವ ಪ್ರಶ್ನೆ.

ಮದುವೆ ಮಾತುಕತೆ

ಈ ಹಿಂದೆ ಮಂಗಳೂರಿನ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಜತೆ ಪ್ರಭಾಸ್​ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಇಡೀ ಟಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಬಾಹುಬಲಿ ಚಿತ್ರದಲ್ಲಿ ಇಬ್ಬರೂ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದು ಹಾಗೂ ಸಂದರ್ಶನಗಳಲ್ಲಿ ಒಬ್ಬರನೊಬ್ಬರು ನೋಡಿ ಮಾತನಾಡತ್ತಿದ್ದ ರೀತಿ ಅವರ ಫ್ಯಾನ್ಸ್​ಗಳಲ್ಲಿ ಮದುವೆಯ ಮುನ್ಸೂಚನೆ ನೀಡಿತ್ತು. ಆದ್ರೆ, ಅಂತಿಮವಾಗಿ ನಾವಿಬ್ಬರು ಒಳ್ಳೆಯ ಸ್ನೇಹಿತರು, ನಮ್ಮಿಬ್ಬರ ನಡುವೆ ಯಾವುದೇ ಮದುವೆ ಮಾತುಕತೆಯೂ ನಡೆದಿಲ್ಲ. ಇದೆಲ್ಲ ಕೇವಲ ವದಂತಿ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಇದು ನಟನ ಅಭಿಮಾನಿ ಬಳಗಕ್ಕೆ ಮತ್ತೆ ಬೇಸರ ತಂದೊಡ್ಡಿತು.

ಸ್ನೇಹಿತ ರವಿ ಘಟನೆ

45 ವರ್ಷ ವಯಸ್ಸಾದ್ದರೂ ಪ್ರಭಾಸ್​ ಏಕೆ ಮದುವೆಯಾಗ್ತಿಲ್ಲ? ಎಂಬ ಪ್ರಶ್ನೆಯನ್ನು ತಮ್ಮಲ್ಲೇ ಕೇಳಿಕೊಳ್ಳುತ್ತಿದ್ದ ಅವರ ಅಭಿಮಾನಿಗಳಿಗೆ ಇದೀಗ ಕಡೆಗೂ ಉತ್ತರ ಸಿಕ್ಕಿದೆ. ಈ ಹಿಂದೆ ಪ್ರಭಾಸ್​ ಅವರ ತಾಯಿ ಶಿವ ಕುಮಾರಿ ತಮ್ಮ ಪುತ್ರ ಮದುವೆಯಾಗಲು ಅತ್ತ-ಇತ್ತ ನೋಡ್ತಿರುವುದೇಕೆ? ದೃಢವಾಗಿ ನಿರ್ಧರಿಸದೆ ಇರಲು ಕಾರಣವೇನು ಎಂಬುದನ್ನು ತಿಳಿಸಿದ್ದರು. ಮದುವೆಯಿಂದ ದೂರ ಉಳಿದಿರುವ ಪ್ರಭಾಸ್​ಗೆ ಸ್ನೇಹಿತ ಕಂಡ ನೋವು, ದುಃಖವೇ  ಕಾರಣ ಎಂದಿದ್ದಾರೆ.

ಮದುವೆ ಸನ್ನಿಹಿತ

ರವಿ ಪ್ರಭಾಸ್​ನ ಆತ್ಮೀಯ ಸ್ನೇಹಿತ. ರವಿ ಪ್ರೀತಿಯಿಂದ ಬಹಳ ನೋವನ್ನು ಅನುಭವಿಸಿದ್ದರು. ಇದನ್ನು ಬಹಳ ಹತ್ತಿರದಿಂದ ನೋಡಿದ ಪ್ರಭಾಸ್​, ಪ್ರೀತಿ-ಪ್ರೇಮ ಸಂಬಂಧದಿಂದ ದೂರವಿದ್ದಾರೆ. ಅಷ್ಟಕ್ಕೂ ಪ್ರಭಾಸ್​ಗೆ ಮದುವೆ ಆಗಲು ಇಷ್ಟವಿಲ್ಲ  ಎಂಬ ಸಂಗತಿಯನ್ನು ಪ್ರಭಾಸ್​ ತಾಯಿ ಹಂಚಿಕೊಂಡಿದ್ದರು. ಇನ್ನು ರೆಬಲ್​ ಸ್ಟಾರ್ ಸಂಬಂಧಿಕರೊಬ್ಬರು ಮಾತನಾಡಿ, ಶೀಘ್ರವೇ ಪ್ರಭಾಸ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಖುಷಿ ಸಂಗತಿ ಹಂಚಿಕೊಂಡಿದ್ದಾರೆ. ಆದ್ರೆ, ಹುಡುಗಿ ಯಾರು ಎಂಬ ಮಾಹಿತಿಯನ್ನು ಮಾತ್ರ ಇಲ್ಲಿಯವರೆಗೂ ಬಿಟ್ಟುಕೊಟ್ಟಿಲ್ಲ,(ಏಜೆನ್ಸೀಸ್).