ಪಾಟ್ನಾ: ನಿನ್ನೆ ( ಮಂಗಳವಾರ ನ 12) ಅಂತ್ಯವಾದ ಬಿಹಾರ ವಿಧಾನಸಭಾ ಚುನಾವಣೆ (Bihar Exit Poll)ನಿತೀಶ್ ಕುಮಾರ್ ಮತ್ತು ಅವರ ಜೆಡಿಯು ಪಾಲಿಗೆ ಮತ್ತೊಂದು ಅವಕಾಶ ಎನ್ನಲಾಗಿದೆ. ಈ ಬಾರಿ ನಿತೀಶ್ರನ್ನು ಅಧಿಕೃತವಾಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡದಿದ್ದರೂ, ಎನ್‌ಡಿಎ ಮೈತ್ರಿಕೂಟಕ್ಕೆ ಅವರದ್ದೇ ನೇತೃತ್ವವಿತ್ತು.
ಚುನಾವಣಾ ಪೂರ್ವ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಸಮಾನ ಸ್ಥಾನಗಳನ್ನು ಪಡೆದುಕೊಂಡಿದ್ದು, ಆಕ್ಸಿಸ್ ಮೈ ಇಂಡಿಯಾ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ನಿತೀಶ್ ನೇತೃತ್ವದ ಜೆಡಿಯು ಬಿಜೆಪಿಗಿಂತ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದಿದ್ದು, ತಾನು ಸ್ಪರ್ಧಿಸಿದ 101 ಸ್ಥಾನಗಳಲ್ಲಿ 56-62 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದ್ದು, ಇತ್ತ ಸಮಾನ ಸ್ಥಾನ ಹಂಚಿಕೊಂಡಿರುವ ಬಿಜೆಪಿ 50-56 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.
ಭವಿಷ್ಯವಾಣಿಯ ಪ್ರಕಾರ ಜೆಡಿಯು ಶೇ 55.4% ರಿಂದ 61.4% ಮತ ಪಡೆಯುವ ಸಾಧ್ಯತೆ ಇದ್ದರೆ, ಇತ್ತ ಬಿಜೆಪಿ ಶೇ 49.5% ರಿಂದ 55.4% ಪಡೆಯಲಿದೆ ಎಂದು ಸಮೀಕ್ಷಾ ಸಂಸ್ಥೆ ಅಭಿಪ್ರಾಯಪಟ್ಟಿದೆ. ಈ ಭವಿಷ್ಯವಾಣಿ ನಿಜವಾದರೆ, ಕಳೆದ 2020 ರ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಜೆಡಿಯುಗೆ ಇದು ಮಹತ್ವದ ತಿರುವಾಗಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ, ನಿತೀಶ್ರ ಪಕ್ಷವನ್ನು ಹಿಂದಿಕ್ಕಿ ಹೆಚ್ಚು ಸ್ಥಾನಗಳಿಸಿತ್ತು. 2020 ರಲ್ಲಿ ಜೆಡಿಯು 115 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದಾಗ್ಯೂ, ಜೆಡಿಯು 43ರಲ್ಲಿ ಗೆಲುವು ಸಾಧಿಸಿದ್ದರೆ, ಇತ್ತ ಬಿಜೆಪಿ 74 ಸ್ಥಾನ ಗಳಿಸುವ ಮೂಲಕ ಮೈತ್ರಿಕೂಟದಲ್ಲಿ ಮೇಲುಗೈ ಸಾಧಿಸಿತ್ತು.
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್‌ಗಳು ಎನ್‌ಡಿಎಗೆ ಮುನ್ನಡೆ ನೀಡಿದ್ದು. 121-141 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ, ಈ ಕಡೆ ಮಹಾಘಟಬಂಧನ್ 98-118 ಸ್ಥಾನಗಳನ್ನು ಪಡೆಯಬಹುದು ಎಂದಿದೆ. ಸಮೀಕ್ಷೆಗಳು ನಿಜವೇ ಆದರೆ ನಿತೀಶ್, ದಾಖಲೆಯ 10 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ:ದೆಹಲಿ ಕಾರು ಸ್ಫೋಟ; ಭದ್ರತಾ ಲೋಪದ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಅಮಿತ್ ಶಾಗೆ ಕಾಂಗ್ರೆಸ್ ಒತ್ತಾಯ| Congress
2025 ರ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಿತು. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ, 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, 2 ನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಈಗ ಬಿಡುಗಡೆಯಾಗಿರುವ ಎಂಟು ಸಮೀಕ್ಷೆಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದು. ದೈನಿಕ್ ಭಾಸ್ಕರ್ ಸಮೀಕ್ಷೆಯು ಎನ್‌ಡಿಎ 145 ರಿಂದ 160 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದೆ, ಇತ್ತ ಮ್ಯಾಟ್ರಿಜ್ 147 ರಿಂದ 167 ಸ್ಥಾನಗಳ ಭವಿಷ್ಯ ನುಡಿದಿದೆ.
ಸಮೀಕ್ಷಾ ಸಂಸ್ಥೆಗಳು ಎನ್‌ಡಿಎ ಮಹಾಘಟಬಂದನ್ದೈನಿಕ್ ಭಾಸ್ಕರ್ 145-160 73-91ಚಾಣಕ್ಯ ಸ್ಟ್ರ್ಯಾಟರ್ಜೀಸ್ 130-138 100-108ಮ್ಯಾಟ್ರಿಜ್ 147-167 70-90ಪಿ-ಮಾರ್ಕ್ 142-162 80-98ಪೀಪಲ್ ಇನ್ಸೈಟ್ 133-148 87-102ಟಿಐಎಫ್ ರೀಸರ್ಚ್ 145-163 76-95ಡಿವಿ ರೀಸರ್ಚ್ 137-152 83-98ಜೆವಿಸಿ 135-150 88-103
ಬಿಹಾರದಲ್ಲಿ ಎನ್‌ಡಿಎ, ಮಹಾಘಟಬಂಧನ್ ಮತ್ತು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ, ಪ್ರಚಾರವು ತೀವ್ರ ತುರುಸಿನಿಂದ ಕೂಡಿತ್ತು. ಎನ್‌ಡಿಎ ತನ್ನ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಎದುರಿಸಿ, ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ, ಆರ್‌ಜೆಡಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜಂಗಲ್ ರಾಜ್ ಆಡಳಿತ ನಡೆಯಲಿದೆ ಎಂದು ಎಚ್ಚರಿಸಿದ್ದರು.(ಏಜೆನ್ಸೀಸ್)