ನೆದರ್ಲ್ಯಾಂಡ್ಸ್: ಡಚ್ ಸೆಂಟ್ರಿಸ್ಟ್ ಪಕ್ಷ D66ರ ಯುವ ನಾಯಕ ರಾಬ್ ಜೆಟ್ಟನ್ (Rob Jetten) ನೆದರ್ಲ್ಯಾಂರ್ಡ್ಸ್ನಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ಮತ್ತೊಂದೆಡೆ, ಅವರು ಸಲಿಂಗಕಾಮಿ ಎಂಬ ಸಂಗತಿ ಹಲವರ ಅಚ್ಚರಿಗೂ ಕಾರಣವಾಗಿದೆ. 38ನೇ ವಯಸ್ಸಿನಲ್ಲಿ ದೇಶದ ಪ್ರಧಾನಿಯಾಗಲು ಎದುರುನೋಡುತ್ತಿರುವ ವ್ಯಕ್ತಿ ಬಗ್ಗೆ ಹರಿದಾಡುತ್ತಿರುವ ಹೊಸ ವಿಷಯಗಳು ಸದ್ಯ ಹಲವರ ಕುತೂಹಲ ಕೆರಳಿಸಿದೆ.
ದೇಶದ ಇತಿಹಾಸದಲ್ಲಿ ಅತ್ಯಂತ ಕಿರಿಯ ಪ್ರಧಾನಿಯಾಗಿ ಅವರು ಅಯ್ಕೆಯಾಗಿದ್ದಾರೆ. ಇದೇ ಅ.29ರಂದು ನಡೆದ ಚುನಾವಣೆಯಲ್ಲಿ ಅವರ ಪಕ್ಷವು ಭರ್ಜರಿ ಜಯ ಸಾಧಿಸಿತು. ಈ ಎಲೆಕ್ಷನ್ನಲ್ಲಿ ಗೆದ್ದ ಬಳಿಕ ಮಾಯನಾಡಿದ ಜೆಟ್ಟನ್, "ಡಚ್ ಸೆಂಟ್ರಿಸ್ಟ್ ಪಕ್ಷ D66 ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದಕ್ಕೆ ನಮಗೆ ಸಂತೋಷವಾಗಿದೆ. ಇದು ಪಕ್ಷಕ್ಕೆ ಐತಿಹಾಸಿಕ ಗೆಲುವು. ಅದೇ ಸಮಯದಲ್ಲಿ, ನನ್ನ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ನಾನು ಭಾವಿಸುವೆ" ಎಂದರು.
ಬಿರುಸಿನ ಸ್ಪರ್ಧೆಯಲ್ಲಿ, ಜೆಟ್ಟನ್ ಅವರು ಜನಪ್ರಿಯ ಗೀರ್ಟ್ ವೈಲ್ಡರ್ಸ್ ಪಾರ್ಟಿ ಫಾರ್ ಫ್ರೀಡಮ್ ವಿರುದ್ಧ 15,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಡಚ್ ಕೇಂದ್ರಿತ ರಾಜಕೀಯ ಪಕ್ಷವಾಗಿರುವ D66 ಈ ಬಾರಿಯ ಚುನಾವಣೆಯಲ್ಲಿ ಅಧಿಕ ಮತಗಳನ್ನು ಗಳಿಸಿತು.
ಜೆಟ್ಟನ್ ಅವರು ನೆದರ್ಲ್ಯಾಂಡ್ಸ್‌ನ ಆಗ್ನೇಯ ಭಾಗದಲ್ಲಿರುವ ಉಡೆನ್ ನಗರದಲ್ಲಿ ಜನಿಸಿದರು. ನಿಜ್ಮೆಗೆನ್‌ನ ರಾಡ್‌ಬೌಡ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆಡಳಿತದ ಬಗ್ಗೆ ಅಧ್ಯಯನ ಮಾಡಿದರು. ಜೆಟ್ಟನ್ ಆರಂಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡು, ನಂತರದಲ್ಲಿ ಹೋಟೆಲ್ ಉದ್ಯಮಕ್ಕೆ ಪ್ರವೇಶಿಸಲು ಬಯಸಿದ್ದರು. ಆದರೆ, ಅಂತಿಮವಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟರು.
ಇದನ್ನೂ ಓದಿ: ಮಹಿಳಾ ವಿಶ್ವಕಪ್ ಫೈನಲ್: ಸ್ಮೃತಿ, ಶೆಫಾಲಿ ಉತ್ತಮ ಆರಂಭ! 25 ಓವರ್ ಅಂತ್ಯಕ್ಕೆ 150ರ ಗಡಿದಾಟಿದ ಭಾರತ | IND vs SA Final
ರಾಬ್ ಜೆಟ್ಟನ್ ಒಲಿಂಪಿಕ್ ಕ್ರೀಡಾಪಟು ಮತ್ತು ಅರ್ಜೆಂಟೀನಾದ ಫೀಲ್ಡ್ ಹಾಕಿ ಆಟಗಾರರಾದ ನಿಕೊ ಕೀನನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ನವೆಂಬರ್ 2024ರಲ್ಲಿ ಘೋಷಿಸಿದ ಈ ಜೋಡಿ, ಮುಂದಿನ ವರ್ಷ ಸ್ಪೇನ್‌ನಲ್ಲಿ ವಿವಾಹವಾಗಲಿದ್ದೇವೆ ಎಂದು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).