ಚೆನ್ನೈ: ಇತ್ತೀಚಿನ ವರ್ಷಗಳಲ್ಲಿ ಖ್ಯಾತ ನಟ-ನಟಿಯರಿಗೆ ಸಂಬಂಧಿಸಿದ ಸುದ್ದಿಗಳು ಆಗಿಂದಾಗೆ ಸದ್ದು ಮಾಡುತ್ತಿರುತ್ತವೆ. ಅದೇ ರೀತಿ ತಮಿಳು, ಮಲಯಾಳಿ ಚಿತ್ರಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಖ್ಯಾತಿ ಗಳಿಸಿರುವ ಖ್ಯಾತ ನಟಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ (Private Video) ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ನಟಿ ಪ್ರಜ್ಞಾ ನಾಗ್ರಾ (Pragya Nagra) ಅವರದ್ದು ಎನ್ನಲಾದ ವಿಡಿಯೋಗಳ (Video) ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ಹರಿದಾಡುತ್ತಿದ್ದು, ಈ ವಿಡಿಯೋಗಳ ಅಸಲಿಯತ್ತು ಇನ್ನೂ ತಿಳಿದುಬಂದಿಲ್ಲ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಪ್ರಜ್ಞಾ ನಾಗ್ರಾ ಅವರ ಹೆಸರು ಚರ್ಚೆಯಲ್ಲಿದ್ದು, ಸದ್ಯ ನಟಿಗೆ ಸಂಬಂಧಿಸಿದ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಆಗುತ್ತಿದೆ.
ನಟಿ ಪ್ರಜ್ಞಾ ಅವರದ್ದು ಎನ್ನಲಾದ ವೀಡಿಯೊದ (Video) ಮೂಲ ಸ್ಪಷ್ಟವಾಗಿಲ್ಲ. ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ. ಯಾರೋ ಕಿಡಿಗೇಡಿಗಳು ಮಾರ್ಫಿಂಗ್ ಮಾಡಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇತ್ತ ಅಶ್ಲೀಲ ವಿಡಿಯೋ (Video) ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಈ ಸ್ಕ್ರೀನ್ ಶಾಟ್‌ಗಳಲ್ಲಿನ ಫೋಟೋಗಳನ್ನು ಬ್ಲರ್ ಮಾಡಲಾಗಿದ್ದು, ಅವು ಆ ನಟಿಯದ್ದೇ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಆಕ್ಷೇಪಿಸಿದ್ದಾರೆ. ಇದು ನಟಿಯ ಹೆಸರನ್ನು ಹಾಳು ಮಾಡಲು ಯಾರೋ ಮಾಡಿರುವ ಸಂಚು ಎಂದೂ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವರು ಈಗೆಲ್ಲ ಡೀಪ್ ಫೇಕ್ ಜಮಾನ. ಇದು ಕೂಡ ಡೀಪ್ ಫೇಕ್ ಆಗಿರಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.
ಪ್ರಜ್ಞಾ ನಾಗ್ರಾ (Pragya Nagra) ನಅವರು ಮೂಲತಃ ಹರಿಯಾಣದ ಅಂಬಾಲಾ ಜಿಲ್ಲೆಯ ಪಂಜಾಬಿ ಕುಟುಂಬದವರು. ದೆಹಲಿಯಲ್ಲಿ ಶಿಕ್ಷಣ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಮಾಡೆಲಿಂಗ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ಜಾಹೀರಾತುಗಳಲ್ಲಿ ಮಿಂಚಿದ್ದರು. 2022ರಲ್ಲಿ ಬಿಡುಗಡೆಯಾದ ವರಲಾರು ಮುಕ್ಕಿಯಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಆ ಬಳಿಕ ಮಲಯಾಳಂ ಚಿತ್ರಗಳಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ.