ಜಿನೇವಾ: ಕರೊನಾ COVID19 ವೈರಸ್ನ ಮೂಲ ಪತ್ತೆ ಹಚ್ಚುವ ವಿಷಯದಲ್ಲಿ ಅಂತಾರಾಷ್ಟ್ರೀಯ ಪರಿಣತರ ಜತೆಗೆ ಕೆಲಸ ಮಾಡುವ ಮುಕ್ತ ಮನಸ್ಸನ್ನು ಚೀನಾ ಪ್ರದರ್ಶಿಸಿದೆ. ಅದು ಮೆಚ್ಚತಕ್ಕ ವಿಷಯ. ವೈರಸ್ನ ಮೂಲ ಪತ್ತೆ ಮಾಡುವ ಪರಿಣತರ ತಂಡದಲ್ಲಿ ಎಲ್ಲ ರಾಷ್ಟ್ರದ ಪರಿಣತರೂ ಸರಿಯಾದ ಪ್ರಮಾಣದಲ್ಲಿ ಇರಬೇಕಾದ್ದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ಹೇಳಿದೆ.
ಇದನ್ನೂ ಓದಿ: ಎಲ್ಎಸಿಯಲ್ಲಿದ್ದಾರೆ ಚೀನಾದ 5,000 ಯೋಧರು..
ಡಬ್ಲ್ಯುಎಚ್ಒ ಹೆಲ್ತ್ ಎಮರ್ಜೆನ್ಸೀಸ್ ಪ್ರೋಗ್ರಾಮ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೈಕೆಲ್ ರಿಯಾನ್ ಜಿನೇವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ನಾವು ಚೀನಾದಲ್ಲಿರುವ ನಮ್ಮ ಸಹೋದ್ಯೋಗಿಗಳ ಜತೆಗೆ ನಿತ್ಯವೂ ಮಾತುಕತೆ ನಡೆಸುತ್ತೇವೆ. ವೈರಸ್ನ ಮೂಲ ಪತ್ತೆ ಹಚ್ಚುವ ವಿಚಾರದಲ್ಲಿ ಅಗತ್ಯ ಸೈಂಟಿಫಿಕ್ ತನಿಖೆಯನ್ನು ನಾವು ಒಟ್ಟಾಗಿ ಮಾಡುತ್ತಿದ್ದೇವೆ. ಚೀನಾದ ಅಧಿಕಾರಿಗಳು, ಜಗತ್ತಿನ ಎಲ್ಲ ಸರ್ಕಾರಗಳು ಮತ್ತು ನಾವು ಎಲ್ಲರೂ ವೈರಸ್ನ ಹುಟ್ಟು ಮತ್ತು ಮೂಲ ಅರಿಯುವ ಕುರಿತು ಬಹಳ ಕಾತರರಾಗಿದ್ದೇವೆ. ಈ ವಿಚಾರವಾಗಿ ನಿರಂತರವಾಗಿ ಚೀನಾದಿಂದ ಸಂದೇಶಗಳು ಲಭಿಸುತ್ತಿದ್ದು, ಅಲ್ಲಿಂದ ಬರುತ್ತಿರುವ ಮುಕ್ತ ಮನಸ್ಸಿನ ಸಹಕಾರ ನಮ್ಮ ಇನ್ನಷ್ಟು ಸಂದೇಹಗಳನ್ನು ನಿವಾರಿಸುವುದಕ್ಕೆ ಪೂರಕ ವಾತಾವರಣ ನಿರ್ಮಿಸಿದೆ ಎಂದು ಹೇಳಿದ್ದಾಗಿ ಕ್ಸಿನ್ಹುವಾ ವರದಿ ಮಾಡಿದೆ.
ಇದನ್ನೂ ಓದಿ: ಕ್ರೀಡೆಗೂ ಸಿಕ್ಕಿತು ಕೈಗಾರಿಕಾ ಸ್ಥಾನಮಾನ
ಹೀಗಾಗೀ ಈ ಕುರಿತ ಚರ್ಚೆಗಳನ್ನು ನಾವು ಮುಂದುವರಿಸುವುದಕ್ಕೆ ಬಯಸಿದ್ದೇವೆ. ನಮ್ಮ ಸೈಂಟಿಫಿಕ್ ಮಿಷನ್ಗೆ ಇದುವರೆಗೆ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ಆದರೆ ಶೀಘ್ರವೇ ವಿವಿಧ ದೇಶಗಳ ಎಲ್ಲ ರೀತಿಯ ಪರಿಣತರನ್ನು ಒಳಗೊಂಡಂತೆ ಒಂದು ತಂಡ ರಚಿಸಿ ಆ ಕೆಲಸ ಶುರುಮಾಡುತ್ತೇವೆ. ಸೈಂಟಿಫಿಕ್ ಜರ್ನಲ್ಗಳಲ್ಲಿ ಪ್ರಕಟವಾಗುತ್ತಿರುವ ಅಧ್ಯಯನ ವರದಿಗಳ ಪೈಕಿ ಕರೊನಾ ವೈರಸ್ಗೆ ಸಂಬಂಧಿಸಿದ್ದು ಹೆಚ್ಚಾಗಿ ಚೀನಾದ್ದೇ ಇದೆ. ಚೀನಾ ಹಾಗೂ ಇತರೆ ರಾಷ್ಟ್ರಗಳ ಸಂಸ್ಥೆಗಳ ಸಹಕಾರ, ಸಹಯೋಗದ ಅಧ್ಯಯನಗಳೂ ಇದರಲ್ಲಿ ಸಾಕಷ್ಟಿವೆ ಎಂದು ಅವರು ಹೇಳಿದರು.