More

    ಕ್ರೀಡೆಗೂ ಸಿಕ್ಕಿತು ಕೈಗಾರಿಕಾ ಸ್ಥಾನಮಾನ

    ಐಜ್ವಾಲ್​: ಈಶಾನ್ಯ ಭಾರತದಲ್ಲಿರುವ ಎಂಟು ರಾಜ್ಯಗಳ ಪೈಕಿ ಮಿಜೋರಾಂನಲ್ಲಿ ಫುಟ್ಬಾಲ್ ಆಟಗಾರರ ದಂಡೇ ಇದೆ. ಎಲ್ಲರೂ ದೇಶದ ವಿವಿಧ ಕ್ಲಬ್​ಗಳಿಗಾಗಿ ಆಟ ಆಡುತ್ತಿದ್ದಾರೆ. ದೇಶದ ಕ್ರೀಡಾ ರಂಗದಲ್ಲಿ ವಿಶೇಷವಾಗಿ ಫುಟ್ಬಾಲ್​ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ ಕೂಡ. ಇದನ್ನು ಗಮನದಲ್ಲಿರಿಸಿಕೊಂಡಿರುವ ಮಿಜೋರಾಂ ರಾಜ್ಯ ಸರ್ಕಾರ ಈಗ ಕ್ರೀಡೆಗೂ ಕೈಗಾರಿಕಾ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ. ಕ್ರೀಡೋದ್ಯಮಕ್ಕೂ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿ ದೇಶದಲ್ಲೇ ಇದು ಮೊದಲ ಉಪಕ್ರಮವಾಗಿದೆ.

    ಇದನ್ನೂ ಓದಿ: ರೈತರ ಸಂಕಷ್ಟ ನಿವಾರಣೆಗೆ ಹೊಸ ಆಪ್ ಅನ್ನದಾತ

    ಉದ್ಯೋಗ ಸೃಜನೆ ಮತ್ತು ಕ್ರೀಡಾ ಮೌಲ್ಯ ಹೆಚ್ಚಿಸುವ ಸಲುವಾಗಿ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯನ್ನು ನಾವು ಬಯಸಿದ್ದೇವೆ. ಇದಕ್ಕಾಗಿ ನಾವು ಕ್ರೀಡೆಗೆ ಇಂಡಸ್ಟ್ರಿಯ ಸ್ಥಾನಮಾನ ನೀಡುತ್ತಿದ್ದೇವೆ. ಈ ನಡೆಯೊಂದಿಗೆ ಕ್ರೀಡಾಪಟುಗಳ ಮತ್ತು ಕ್ರೀಡಾ ಕ್ಷೇತ್ರದವರ ಬೇಡಿಕೆಗಳನ್ನು ನಾವು ಈಡೇರಿಸುವತ್ತ ಹೆಜ್ಜೆ ಇರಿಸಿದ್ದೇವೆ. ಮೇ 23ರಂದು ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
    | ಝೋರಮ್​ತಾಂಗ ಮುಖ್ಯಮಂತ್ರಿ

    ಮಿಜೋರಾಂ ಸರ್ಕಾರ ಹೊಸದಾಗಿ ಕೈಗಾರಿಕಾ ನೀತಿಯನ್ನು ರೂಪಿಸುತ್ತಿದ್ದು, ಇದರಲ್ಲಿ ಸ್ಪೋರ್ಟ್ಸ್​ ಕೂಡ ಒಂದು ಕೆಟಗರಿಯಾಗಿ ಸೇರ್ಪಡೆಯಾಗುತ್ತಿದೆ3. ಕ್ರೀಡಾ ಕ್ಷೇತ್ರದಲ್ಲಿ ಒಲವು ಹೊಂದಿರುವ ರಾಜ್ಯವಾಗಿ ಮಿಜೋರಾಂ ಗುರುತಿಸಲ್ಪಟ್ಟಿದೆ. ಫುಟ್ಬಾಲ್ ಕ್ಷೇತ್ರದಲ್ಲಿ ಗರಿಷ್ಠ ಆಟಗಾರರು ಇಲ್ಲಿಯವರೇ ಆಗಿದ್ದು, ದೇಶದ ವಿವಿಧ ಕ್ಲಬ್​ಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅದೇ ರೀತಿ, ಹಾಕಿಯಲ್ಲೂ ಈ ರಾಜ್ಯದ ಆಟಗಾರರ ಪಾಲು ಹೆಚ್ಚಿದೆ. ಇನ್ನು ವೇಟ್​ಲಿಫ್ಟಿಂಗ್​ನಲ್ಲೂ ಮಿಜೋರಾಂನವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಆಟಗಳಿಗೆ ಹೊರತಾಗಿ ಮಿಜೋರಾಂನಲ್ಲಿ ರೆಸ್ಲಿಂಗ್​, ಭಾರತದ ದೇಸಿ ಕ್ರೀಡೆಗಳಾದ ಕಾಲ್ಚೆತ್​ ಕಾಲ್​, ಇನ್ಸುಕ್ನರ್ವ, ಇನಾರ್ ಪಥಾಯಿ ಮುಂತಾದ ಆಟಗಳೂ ಜನಪ್ರಿಯ. ಇದರ ಬಗ್ಗೆ ಇಲ್ಲಿನವರಿಗೆ ಬಹಳ ಆಸಕ್ತಿ ಮತ್ತು ಇದಕ್ಕೆ ಸಂಬಂಧಿಸಿದ ಸ್ಪರ್ಧೆ, ಪಂದ್ಯಾಟಗಳು ನಡೆಯುತ್ತಲೇ ಇರುತ್ತವೆ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ

    ಕ್ರೀಡಾ ಸಚಿವ ಹೇಳುವುದೇನು?: ಮಿಜೋರಾಂನ ಕ್ರೀಡಾ ಸಚಿವ ರಾಬರ್ಟ್​ ರೊಮಾವಿಯ ರೋಯ್ಟೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕ್ರೀಡಾ ಹೂಡಿಕೆದಾರರು ಮತ್ತು ಪ್ರಾಯೋಜಕರಿಗೆ ಇದರಿಂದ ಪ್ರಯೋಜನವಾಗಲಿದೆ. ಆದರೆ, ಇದರ ಅಂತಿಮ ಫಲಾನುಭವಿಗಳು ಕ್ರೀಡಾಪಟುಗಳೇ ಆಗಿದ್ದಾರೆ. ಈ ಸ್ಥಾನಮಾನ ನೀಡಿರುವುದರಿಂದಾಗಿ ಕ್ರೀಡಾ ರಂಗದ ನಿರ್ವಹಣೆಗೆ ಒಂದು ಸರಿಯಾದ ಚೌಕಟ್ಟು ಸಿಗಲಿದೆ. ಕ್ರೀಡಾ ರಂಗದ ಸುಸ್ಥಿರ ಅಭಿವೃದ್ಧಿಯನ್ನೂ ಈ ಮೂಲಕ ನಾವು ನಿರೀಕ್ಷಿಸಬಹುದಾಗಿದೆ. ಇನ್ನು 2010 ರಿಂದಲೇ ಕ್ರೀಡಾ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ ನೀಡುವ ವಿಚಾರ ಚರ್ಚೆಯಲ್ಲಿದೆ. ಕ್ರೀಡೆ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಕೇಂದ್ರ ಸರ್ಕಾರ ಈ ವಿಷಯದಲ್ಲಿ ತನ್ನ ಪಾತ್ರವನ್ನು ಸೀಮಿತಗೊಳಿಸಿದೆ. ನಮ್ಮ ಸರ್ಕಾರ ಈ ವಿಚಾರವಾಗಿ ಕೂಲಂಕಷ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನವನ್ನೇ ತೆಗೆದುಕೊಂಡಿದೆ ಎಂದು ಹೇಳಿಕೊಂಡಿದ್ದಾರೆ.

    ಕೊನೆಗೂ ಬಯಲಾಯಿತು ವಾರಂಗಲ್ ಕೃಷಿ ಹೊಂಡದ 9 ಶವಗಳ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts