ಆಂಧ್ರಪ್ರದೇಶ: ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಖಡಕ್ ಪಾತ್ರಗಳ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಪವರ್ಸ್ಟಾರ್ ಪವನ್ ಕಲ್ಯಾಣ್(Pawan Kalyan), ಇದೀಗ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ. ಸದಾ ಜನರ ಮಧ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಡಿಸಿಎಂ ಆಗ್ಗಾಗೆ ಸುದ್ದಿಯಾಗುತ್ತೆಲೇ ಇರುತ್ತಾರೆ.
ಇದೀಗ ಅಭಿಮಾನಿಗಳ ಪ್ರಶ್ನೆಯೊಂದಕ್ಕೆ ಪವನ್ ಕಲ್ಯಾಣ್ ಸಂದರ್ಶನವೊಂದರಲ್ಲಿ ಉತ್ತರ ನೀಡುವುದರ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಪವನ್ ಅವರು ತಮ್ಮ ರಾಜಕೀಯ ಪ್ರಯಾಣವನ್ನು ಜನಸೇನಾ ಪಕ್ಷ ಕಟ್ಟುವ ಮೂಲಕ ಆರಂಭಿಸಿದರು. ಆದರೆ, ಇದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಯಾಕೆಂದರೆ, ಅಣ್ಣ ಚಿರಂಜೀವಿ ಪಕ್ಷ ಕಟ್ಟಿ ಸೋಲುಂಡಿದ್ದರು. ಇದು ಪವನ್ ಮನಸ್ಸಲ್ಲಿ ಹಾಗೇ ಉಳಿದಿತ್ತು. ಇದರ ನಡುವೆ ಹಲವರು ಚಿರಂಜೀವಿ ಹಾಗೇ ಪವನ್ ಕೂಡ ಮನೆಗೆ ಮರಳುತ್ತಾರೆ ಎಂದು ಟೀಕಿಸಿದ್ದರು. ಅಲ್ಲದೆ, ಪಕ್ಷ ಮುನ್ನೆಡೆಸುವ ಸಲುವಾಗಿ ಸಿನಿಮಾವನ್ನು ಮಾಡುವ ಪರಿಸ್ಥಿತಿ ಪವನ್ಗೆ ಒದಗಿ ಬಂದಿತ್ತು ಎಂದು ಅನೇಕ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಈ ದಂಪತಿಯಿಂದಲೇ ಸಿನಿಮಾ ನಿರ್ಮಾಣದ ನನ್ನ ಕನಸನ್ನು ತ್ಯಜಿಸಿದೆ; ಬಾಲಿವುಡ್ ಗಾಯಕ ಮಿಕಾ ಸಿಂಗ್ ಹೀಗೆಳಿದ್ದೇಕೆ? | Mika Singh
ಆದರೆ, ಅದು ಹಾಗೆ ಆಗಲಿಲ್ಲ. ಅವರ ಧೈರ್ಯಕ್ಕೆ ಮೆಚ್ಚಲೇಬೇಕು. ರಾಜಕೀಯ ಕ್ಷೇತದಲ್ಲಿ ಪವನ್ 10 ವರ್ಷಗಳ ಕಠಿಣ ಪರಿಸ್ಥಿತಿ ಎದುರಿಸಿ, ಇಂದು ಡಿಸಿಎಂ ಆಗಿ ಮೇಲೆ ಬಂದಿದ್ದಾರೆ. ಇವರ ಧೈರ್ಯ, ಸಾಧನೆಯನ್ನು ಸಾಮಾನ್ಯ ಜನರು ಸೇರಿದಂತೆ ಈ ದೇಶದ ಪ್ರಧಾನಿ ಹಾಗೂ ಪ್ರತಿಯೊಬ್ಬ ರಾಜಕಾರಣಿಗಳು ಮೆಚ್ಚಿಕೊಂಡು ಹೊಗಳುತ್ತಿದ್ದಾರೆ.
ಇದನ್ನೂ ಓದಿ: 1 ಇನ್ನಿಂಗ್ಸ್ನಲ್ಲಿ 400, ಒಂದು ಸೀಸನ್ನಲ್ಲಿ 1200 ರನ್! ಶತಕ ವೀರನ ಸಾಮರ್ಥ್ಯದ ಬಗ್ಗೆ ಮಾಜಿ ಆಯ್ಕೆಗಾರ ಗುಣಗಾನ
ಅಂದಗಾಹೆ ಅವರ ಅಭಿಮಾನಿಗಳು ಹೇಳುವ ಪ್ರಕಾರ ''ಪವನ್ ಕಲ್ಯಾಣ್ ಅವರು ಸಿನಿಮಾದ ಮೂಲಕ 'ಪವರ್ ಸ್ಟಾರ್' ಆಗಿ ಕಾಣಿಸಿಕೊಳ್ಳದಿರುವುದು ನಮಗೆ ಮಾತ್ರ ಬೇಸರವಿಲ್ಲ. ಸ್ವತ ಅವರಿಗೂ ಇದೆ. ಸಿನಿಮಾದ ಮೂಲಕ ಅಭಿಮಾನಿಗಳನ್ನು ಮತ್ತು ಚಿತ್ರ ರಸಿಕರನ್ನು ರಂಜಿಸಬಹುದು. ಆದರೆ, ರಾಜಕೀಯದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅವರ ಮನವಿಗಳಿಗೆ ಸ್ಪಂದಿಸಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದೇ ಪ್ರಶ್ನೆಯನ್ನು ಪವನ್ ಬಳಿ ಕೇಳಿದಾಗ ಪವನ್ ಕೊಟ್ಟ ಉತ್ತರ ಇದು. '' ನಾನು ರಾಜಕೀಯದಲ್ಲಿಯೇ ಉಳಿದಿಕೊಳ್ಳಲು ಬಯಸಿವೆ ಎಂದಿದ್ದಾರೆ.(ಏಜೆನ್ಸೀಸ್).