ಈ ದಂಪತಿಯಿಂದಲೇ ಸಿನಿಮಾ ನಿರ್ಮಾಣದ ನನ್ನ ಕನಸನ್ನು ತ್ಯಜಿಸಿದೆ; ಬಾಲಿವುಡ್​ ಗಾಯಕ ಮಿಕಾ ಸಿಂಗ್ ಹೀಗೆಳಿದ್ದೇಕೆ? | Mika Singh

Untitled design (52)
Published on

ಮುಂಬೈ: ಬಾಲಿವುಡ್​ ಗಾಯಕ ಮಿಕಾ ಸಿಂಗ್(Mika Singh) ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್​ಹಿಟ್​​​ ಹಾಡುಗಳನ್ನು ನೀಡಿದ್ದಾರೆ. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 2020ರಲ್ಲಿ ಬಿಡುಗಡೆಯಾದ 'ಡೇಂಜರಸ್' ವೆಬ್ ಸರಣಿಯನ್ನು ಮಿಕಾ ಸಿಂಗ್ ಸಹ-ನಿರ್ಮಾಣ ಮಾಡಿದ್ದಾರೆ. ಮಿಕಾ ಸಿಂಗ್​ ಈ ವೆಬ್​ ಸರಣಿ ಚಿತ್ರೀಕರಣದಲ್ಲಿ ಅನುಭವಿಸಿದ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮಿಕಾ ಸಿಂಗ್​​​ ಬಿಪಾಶಾ ಮತ್ತು ಕರಣ್‌ನಿಂದಾಗಿ ಸಾಕಷ್ಟು ಹಣ ವ್ಯರ್ಥವಾಯಿತು. ಮೂರು ತಿಂಗಳ ಚಿತ್ರೀಕರಣವನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಆಗಿದ್ದ ಈ ಇಬ್ಬರಿಂದಲೇ. ಅವರಿಬ್ಬರ ವರ್ತನೆಯಿಂದಾಗಿ ಎಂದಿಗೂ ಯಾವುದೇ ಸಿನಿಮಾವನ್ನು ನಿರ್ಮಿಸಬಾರದೆಂದು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ವೆಬ್​​ ಸರಣಿಯಲ್ಲಿ ಕರಣ್ ಮತ್ತು ಹೊಸ ಹುಡುಗಿ ನಟಿಸಬೇಕು ಎಂದು ನಾನು ಆರಂಭದಲ್ಲಿ ಬಯಸಿದ್ದೆ. ನನ್ನ ಬಜೆಟ್​ಗೆ ಅನುಗುಣವಾಗಿ ವೆಬ್​​ ಸೀರಿಸ್​​ ಅನ್ನು ನಿರ್ಮಿಸಲು ಆಲೋಚಿಸಿದ್ದೆ. ಆದರೆ ಆದರೆ ಬಿಪಾಶಾ ಬಸು ನಾವಿಬ್ಬರೂ ಈ ಸರಣಿಯ ಭಾಗವಾಗಬಹುದು ಎಂದು ಹೇಳುತ್ತಾ, ಬಜೆಟ್ ಅಡಿಯಲ್ಲಿ ಬಂದರು. ಆದರೆ ಅನುಭವವು ಬಹಳ ಕೆಟ್ಟದಾಗಿತ್ತು ಎಂದಿದ್ದಾರೆ. ಶೂಟಿಂಗ್ ಸಮಯದಲ್ಲಿ ಬಿಪಾಶಾ ಮತ್ತು ಕರಣ್ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದರು. ಈ ದಂಪತಿ ಕಾರಣದಿಂದಾಗಿ ಚಿತ್ರೀಕರಣದ ವೇಳಾಪಟ್ಟಿಯನ್ನು ವಿಸ್ತರಿಸಬೇಕಾಗಿತ್ತು. ಇದು ಸಾಕಷ್ಟು ಹಣವನ್ನು ಖರ್ಚು ಮಾಡಿಸಿತು ಎಂದು ಹೇಳಿದರು.

ನಾನು 50 ಜನರ ತಂಡವನ್ನು ಒಂದು ತಿಂಗಳ ವೇಳಾಪಟ್ಟಿಗಾಗಿ ಲಂಡನ್‌ಗೆ ಕರೆದೊಯ್ದಿದ್ದೆ. ಆದರೆ ಅಂದುಕೊಂಡಿದ್ದಕ್ಕಿಂತ ಎರಡು ತಿಂಗಳ ಕಾಲ ಶೂಟಿಂಗ್ ಮುಂದುವರಿಯಿತು. ಕರಣ್ ಮತ್ತು ಬಿಪಾಶಾ ಸಾಕಷ್ಟು ಡ್ರಾಮಾ ಸೃಷ್ಟಿಸಿದರು. ಅವರು ಮದುವೆಯಾಗಿರುವ ದಂಪತಿ ಆದ್ದರಿಂದ ನಾನು ಅವರಿಗಾಗಿ ಒಂದು ಕೋಣೆಯನ್ನು ಕಾಯ್ದಿರಿಸಿದ್ದೆ. ಆದರೆ ಅವರು ಬೇಡ ಪ್ರತ್ಯೇಕ ಕೊಠಡಿಗಳು ಬೇಕು ಎಂದರು. ಅವರು ಹೇಳಿದ್ದು ನನಗೆ ಅರ್ಥವಾಗಲಿಲ್ಲ. ನಂತರ ಬೇರೆ ಹೋಟೆಲ್‌ಗೆ ಶಿಫ್ಟ್ ಮಾಡುವಂತೆ ಒತ್ತಾಯಿಸಿದರು. ನಾವೂ ಅದನ್ನೇ ಮಾಡಿದೆವು ಎಂದು ತಿಳಿಸಿದರು.

ಹೋಟೆಲ್ ಕೊಠಡಿಗಳ ಹೊರತಾಗಿ, ಇಬ್ಬರೂ ದೃಶ್ಯಗಳನ್ನು ಚಿತ್ರೀಕರಿಸುವಾಗ ಒಂದಲ್ಲಾ ಒಂದು ಸಮಸ್ಯೆ ಸೃಷ್ಟಿಸುತ್ತಿದ್ದರು ಎಂದು ಮಿಕಾ ಹೇಳಿದರು. ನಾವು ಸ್ಟಂಟ್ ದೃಶ್ಯವನ್ನು ಚಿತ್ರೀಕರಿಸುವಾಗ ಕರಣ್ ಅವರ ಕಾಲು ಮುರಿಯಿತು. ಚಿತ್ರದ ಡಬ್ಬಿಂಗ್ ವೇಳೆಯೂ ಸಮಸ್ಯೆ ಸೃಷ್ಟಿಸಿದ್ದರು, ಕೆಲವೊಮ್ಮೆ ಗಂಟಲು ನೋವು ಮತ್ತು ಕೆಲವೊಮ್ಮೆ ಇತರ ವಿಷಯಗಳಿಗೆ ಸಮಸ್ಯೆಯಾಗುತ್ತಲೆ ಇತ್ತು. ಇಬ್ಬರೂ ಕ್ಷಮೆಯನ್ನು ಹೇಳುತ್ತಿದ್ದರು ಎಂದು ಹೇಳಿದರು.

ಇಷ್ಟೇ ಅಲ್ಲ ಸ್ಕ್ರಿಪ್ಟ್‌ನ ಬೇಡಿಕೆಯಿದ್ದರೂ ಬಿಪಾಶಾ ಮತ್ತು ಕರಣ್ ಕಿಸ್ಸಿಂಗ್​​ ದೃಶ್ಯವನ್ನು ಮಾಡಲು ನಿರಾಕರಿಸಿದರು. ಅವರಿಗೆ ಮೊದಲೆ ತಿಳಿದಿತ್ತು, ಆ ಕಾರಣದಿಂದಲೇ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸ್ಕ್ರಿಪ್ಟ್‌ನಲ್ಲಿ ಚುಂಬನದ ದೃಶ್ಯವಿದೆ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು. ಅವರು ಪತಿ-ಪತ್ನಿಯಾಗಿದ್ದರೂ ತೆರೆಯ ಮೇಲೆ ಚುಂಬನದ ದೃಶ್ಯ ಮಾಡುವುದಿಲ್ಲ ಎಂದು ಹೊಸ ಸಮಸ್ಯೆ ತಂದರು. ಅಂತಹ ಕೆಟ್ಟ ಅನುಭವವು ಚಲನಚಿತ್ರ ನಿರ್ಮಾಣವನ್ನು ಸಂಪೂರ್ಣವಾಗಿ ತೊರೆಯುವಂತೆ ಒತ್ತಾಯಿಸಿತು ಎಂದು ಗಾಯಕ ಮಿಕಾ ಸಿಂಗ್​​​ ಹೇಳಿದರು. ಸಿನಿಮಾ ಮಾಡಬೇಕೆಂದರೆ ಹೊಸಬರಿಗೆ ಅವಕಾಶ ಕೊಡಿ ಎಂದು ನಿರ್ಮಾಪಕರಿಗೆ ಸಲಹೆ ನೀಡಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net