ನ್ಯೂಸ್

ಇಲ್ಲಿ ಮೊಸಳೆ ಸತ್ತಾಗ ಇಡೀ ಗ್ರಾಮವೇ ಕಣ್ಣೀರಿಟ್ಟಿತ್ತು; ಅಂತ್ಯಕ್ರಿಯೆಗೆ ಎಷ್ಟು ಜನ ಸೇರಿದ್ರು ಗೊತ್ತಾ| crocodile

ಗಂಗಾರಾಮ್ : ಛತ್ತೀಸ್‌ಗಢದ ಗಂಗಾರಾಮ್​ನಲ್ಲಿ ಸುಮಾರು 130 ವರ್ಷಗಳ ಕಾಲ ಬಾವಾ ಮೊಹ್ತಾರಾ ಪ್ರದೇಶದಲ್ಲಿ ಜನರೊಂದಿಗೆ ಹೊಂದಿಕೊಂಡು ಬದುಕಿದ್ದ ಮೊಸಳೆಯೊಂದು 2019 ರಲ್ಲಿ ಸಾವನ್ನಪ್ಪಿತು. ಇನ್ನೂ ಆ ಮೊಸಳೆಗೆ ಅಂತ್ಯ ಸಂಸ್ಕಾರ ಮಾಡುವ ಮೂಲಕ ಒಂದು ಸ್ಮಾರಕವನ್ನು ಸಹ ನಿರ್ಮಿಸಿದರು ಎಂದು ಹೇಳಲಾಗಿದೆ.

ದೇಶದ ಕೆಲವೆಡೆ ಕೆಲವೇ ಸಮುದಾಯಗಳು ಮೊಸಳೆಗಳಿಗೆ ಹತ್ತಿರದಲ್ಲಿ ವಾಸಿಸುತ್ತವೆ ಮತ್ತು ಅವುಗಳ ಬಗ್ಗೆ ಪರಸ್ಪರ ಗೌರವವನ್ನು ಹೊಂದಿವೆ ಎಂದು ತಿಳಿದುಬಂದಿದೆ.

ಮೊಸಳೆ ಸತ್ತಾಗ ಸುಮಾರು 500 ಜನರು ಅಂತ್ಯಕ್ರಿಯೆಗೆ ಭಾಗಿಯಾಗಿದ್ದರಂತೆ, ಟ್ರ್ಯಾಕ್ಟರ್‌ನಲ್ಲಿ ಹಾರ ಹಾಕಿ ಮೆರವಣಿಗೆ ಮಾಡಿ ಅದರ ಅಂತ್ಯ ಸಂಸ್ಕಾರ ನೆರವೇರಿಸಿದ್ದರು ಎಂದು ಹೇಳಲಾಗಿದೆ. ಇನ್ನೂ ವಾಸ್ತವವಾಗಿ, ಅನೇಕ ಶೋಕತಪ್ತ ಮನೆಗಳು ಆ ದಿನ ಅಡುಗೆಯನ್ನೇ ಮಾಡಿರಲಿಲ್ಲ ಎನ್ನಲಾಗಿದೆ.

ಮಕ್ಕಳ ಮೇಲೆ ಅಥವಾ ಕೊಳದ ಅಂಚಿನಲ್ಲಿ ಬಟ್ಟೆ ಒಗೆಯುವಾಗ ಮಹಿಳೆಯರ ಮೇಲೆ ಆ ಮೊಸಳೆ ಯಾರಿಗೂ ದಾಳಿ ಮಾಡುವುದಿಲ್ಲ ಎಂದು ಅಲ್ಲಿನ ಜನ ನಂಬಿದ್ದರು. ಆ ಗ್ರಾಮದ ನಿವಾಸಿಗಳು ಮೊಸಳೆಗೆ ಮೊಹ್ತಾರಾ ಎಂಬ ಹೆಸರಿಟ್ಟಿದ್ದರು.

ಮೊಸಳೆ ದಾಳಿಗಳು ನಿಸ್ಸಂದೇಹವಾಗಿ ಭಯಾನಕವಾಗಿರುತ್ತವೆ. ಆದರೆ, ಒಂದು ಪ್ರಾಣಿ ಉದ್ದೇಶಪೂರ್ವಕವಾಗಿ ಮನುಷ್ಯರನ್ನು ಬೇಟೆಯಾಡಲು ಸೆಳೆಯುತ್ತವೆ ಎಂಬುದನ್ನು ನಂಬಲು ಅಸಾಧ್ಯವಾಗಿದೆ. ಇದೊಂದು ತಪ್ಪು ಮಾಹಿತಿ ಎಂದು ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ಏಜೆನ್ಸೀಸ್)