ನವದೆಹಲಿ: ಪ್ರಮುಖ ಇನ್ ಸ್ಟಂಟ್ ಮ್ಯಾನೇಜಿಂಗ್ ಆಪ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಅನುಕೂಲ ಕಲ್ಪಿಸಲು ಇತ್ತೀಚೆಗೆ ವಾಟ್ಸಾಪ್ ಚಾನೆಲ್ಸ್, ಸಿಂಗಲ್ ಡಿವೈಸ್ನಲ್ಲಿ ಮಲ್ಟಿಪಲ್ ವಾಟ್ಸಾಪ್ ಅಕೌಂಟ್ಗಳನ್ನು ಬಳಸುವ "ಮಲ್ಟಿ ಅಕೌಂಟ್ ಫ್ಯೂಚರ್" ಕುರಿತು ಪ್ರಕಟಿಸಿತ್ತು. ಮುಂದುವರಿದು "ವ್ಯೂ ಒನ್ಸ್" ತಂದಿದ್ದು, ಈಗ ಮೆಟಾ ಮಾಲೀಕತ್ವದ ವಾಟ್ಸ್ಆಪ್ ಅದೇ ಮಾದರಿ "ವಾಯ್ಸ್ ನೋಟ್" ಅಪ್ಡೇಟ್ ತರಲು ಯೋಚಿಸುತ್ತಿದೆ.
ವೀ ಬೀಟಾ ಇನ್ಫೋ ವರದಿಯ ಪ್ರಕಾರ... ಬಳಕೆದಾರರ ಭದ್ರತೆಗಾಗಿ ವಾಯ್ಸ್ ನೋಟ್ಸ್ ಪರಿಚಯಿಸಲು ವಾಟ್ಸ್ ಆಪ್ ಕಾರ್ಯೋನ್ಮುಖವಾಗಿದೆ. ಈ ಅಪ್ಡೇಟ್ ಬಳಕೆಗೆ ಬಂದರೆ ವಾಯ್ಸ್ ರೆಕಾರ್ಡ್ಗಳು ಮೊಬೈಲ್ಗಳಲ್ಲಿ ಸ್ಟೋರೇಜ್ ಆಗದಂತೆ ತಡೆಯುತ್ತದೆ.
ಉದಾಹರಣೆಗೆ 'ಎ' ಎಂಬ ವಾಟ್ಸಾಪ್ ಬಳಕೆದಾರ 'ಬಿ' ಎಂಬ ಮತ್ತೊಬ್ಬ ಬಳಕೆದಾರನಿಗೆ ಆಡಿಯೋ ಫೈಲ್ ಒಂದನ್ನು ಕಳೂಹಿಸುತ್ತಾನೆ. ಸಾಧಾರಣವಾಗಿ ಅಂತಹ ವಾಯ್ಸ್ ಫೈಲ್ಸ್ ಮೊಬೈಲ್ನಲ್ಲಿ ಸ್ಟೋರೇಜ್ ಆಗುವುದರ ಜತೆಗೆ ಅನೇಕ ಭದ್ರತಾ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಇದನ್ನು ತಡೆಯಲು ವಾಯ್ಸ್ ನೋಟ್ಸ್ ಹೆಸರಲ್ಲಿ ಮೆಸೇಜ್ ಅಪ್ಲಿಕೇಶನ್ ಪರಿಚಯಿಸುತ್ತಿದೆ. ಇದರೊಂದಿಗೆ ವಾಟ್ಸಾಪ್ನಲ್ಲಿ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಆಡಿಯೋ ಫೈಲ್ಸ್ ಒಮ್ಮೆ ಓಪನ್ ಮಾಡಿದರೆ ಸಾಕು, ಬಳಿಕ ಅವು ತನ್ನಂತಾನೇ ಕಣ್ಮರೆಯಾಗುತ್ತವೆ.
ವ್ಯೂ ಒನ್ಸ್ನಂತೆಯೇ: 'ವ್ಯೂ ಒನ್ಸ್' ಕುರಿತು ವಾಟ್ಸ್ ಆಪ್ ಬಳಕೆದಾರರಿಗೆ ತಿಳಿದ ಸಂಗತಿಯೇ. ಇದರಡಿ ಯಾರಾದರೂ ಕಳೂಹಿಸಿದ ಫೋಟೋ, ವೀಡಿಯೋವನ್ನು ಒಮ್ಮೆ ವೀಕ್ಷಿಸಿದ ಬಳಿಕ ಅವು ಅವಷ್ಟಕ್ಕೆ ಅವು ಅದೃಶ್ಯವಾಗುತ್ತವೆ. ಅದೇ ರೀತಿ ವಾಯ್ಸ್ ನೋಟ್ ಅಪ್ಡೇಟ್ ಬರಲಿದೆ.