ನ್ಯೂಸ್

ಮೇ.5ರಿಂದ ಈ ಐಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಸೇವೆ ಸ್ಥಗಿತ! ಹೀಗಿದೆ ಕಾರಣ | WhatsApp

ಮೋಹನ್​ ಶೆಟ್ಟಿ

WhatsApp: ಸಾಮಾಜಿಕ ಜಾಲತಾಣಗಳ ಪೈಕಿ ದಿನನಿತ್ಯ ಹಾಗೂ ಅತಿ ಹೆಚ್ಚು ಬಳೆಕೆಯಾಗುವ ವ್ಯಾಟ್ಸ್​ಆ್ಯಪ್​ ಇದೀಗ ಒಂದಷ್ಟು ಐಫೋನ್ ಸರಣಿಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ. ಅಸಲಿಗೆ ಇದರ ಹಿಂದಿರುವ ಕಾರಣವೇನು? ಯಾವ ಸಿರೀಸ್​ಗಳಲ್ಲಿ ವಾಟ್ಸ್​ಆ್ಯಪ್​ ಸ್ಥಗಿತ ಎಂಬುದರ ವಿವರ ಹೀಗಿದೆ ಗಮನಿಸಿ.

ಇದೇ ಮೇ 5, 2025ರಿಂದ ನಿಮ್ಮ ಐಫೋನ್​ಗಳ್ಲಿ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕೆ ಕಾರಣ, ಮುಂದಿನ ತಿಂಗಳಿನಿಂದ ಮೆಟಾ ಮಾಲೀಕತ್ವದ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್​ಆ್ಯಪ್​ ಐಓಎಸ್​ನ ಹಳೆಯ ಆವೃತ್ತಿಗಳನ್ನು ಹೊಂದಿರುವ ಕೆಲವೇ ಕೆಲವು ಐಫೋನ್ ಸಿರೀಸ್​ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ. ಅಧಿಕೃತ ಘೋಷಣೆಯ ಪ್ರಕಾರ, WhatsApp iOS 15.1 ಅಥವಾ ಅದರ ಮುಂದಿನ ಅಪ್ಡೇಟ್​ ವರ್ಶನ್​ ಹೊಂದಿರುವ ಐಫೋನ್​ಗಳಿಗೆ ಮಾತ್ರ ವಾಟ್ಸ್​ಆ್ಯಪ್ ತನ್ನ ಸೇವೆಯನ್ನು ಮುಂದುವರಿಸಲಿದೆ.

ನಿಮ್ಮ ಐಫೋನ್ ಸಿರೀಸ್​ಗಳನ್ನು ಇದಕ್ಕೆ ನವೀಕರಿಸದಿದ್ದರೆ ಶೀಘ್ರದಲ್ಲೇ ವಾಟ್ಸ್​ಆ್ಯಪ್ ಸೇವೆಯನ್ನು ಆನಂದಿಸಲು ಸಾಧ್ಯವಿಲ್ಲ. ಇದು ಬಹುತೇಕರ ದೈನಂದಿನ ಕೆಲಸಕ್ಕೆ ದೊಡ್ಡ ಬ್ರೇಕ್ ನೀಡಲಿದೆ. ಕೆಲಸ ನಿಮಿತ್ತ ಸಂದೇಶ, ಕರೆ, ವಿಡಿಯೋ ಕರೆ ಸೇರಿದಂತೆ ಹಲವಾರು ಸೇವೆಗಳನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ವಾಟ್ಸ್​ಆ್ಯಪ್​ನ ಯಾವುದೇ ನೋಟಿಫಿಕೇಶನ್​ ಅಥವಾ ಇನ್ನಿತರ ಮಾಹಿತಿಗಳನ್ನು ಪಡೆಯಲು ಆಗುವುದಿಲ್ಲ.

ಯಾವ ಐಫೋನ್‌ ಸಿರೀಸ್​ಗೆ ಇದರ ಪರಿಣಾಮ?

1. ಐಫೋನ್ 5s

2. ಐಫೋನ್ 6

3. ಐಫೋನ್ 6 ಪ್ಲಸ್​​

ಆ್ಯಪಲ್​ ಈ ಹಳೆಯ ಐಫೋನ್​ಗೆ ಸಾಫ್ಟ್‌ವೇರ್ ಅಪ್ಡೇಟ್​ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ. ಈ ರೀತಿ ಸ್ಥಗಿತಗೊಳಿಸಿದರೆ ಹಳೆ ವರ್ಶನ್​ ಐಫೋನ್ ಬಳಕೆದಾರರು ಏನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ನಿಮ್ಮ ಬಳಿಯಿರುವ ಐಫೋನ್​ ಸಿರೀಸ್​ಗಳು ಈ ಪಟ್ಟಿಗೆ ಸೇರಿದ್ದರೆ, ಐಫೋನ್ 13, 14 ನಂತರ ಸಿರೀಸ್​ ಫೋನ್​ಗಳನ್ನು ಖರೀದಿ ಮಾಡುವುದು ಸೂಕ್ತ ಎನ್ನಲಾಗಿದೆ. ಇದು ಸರಳ ಹಾಗೂ ಸುಲಭ ಪರಿಹಾರ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).