ನಿನ್ನೆ ತಾನೇ ಅಮ್ಮಂದಿರ ದಿನ ಆಚರಿಸಿದ್ದೇವೆ (ಮೇ 10). ಕೆಲವರು ಪ್ರೀತಿಯ ಅಮ್ಮನಿಗೊಂದು ಸರ್ಪ್ರೈಸ್ ಗಿಫ್ಟ್ ಕೊಟ್ಟು ವಿಷ್ ಮಾಡಿದ್ದಾರೆ. ಹಲವರು ಕೇಕ್ ಕತ್ತರಿಸಿ ಅಮ್ಮನ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಬಹುತೇಕರು ವಾಟ್ಸ್ಆ್ಯಪ್ ಸ್ಟೇಟಸ್, ಫೇಸ್ಬುಕ್ನಲ್ಲಿ ಅಮ್ಮನ ಫೋಟೋ ಹಾಕಿ 'ಮೈ ಹೀರೋ, ನನ್ನಮ್ಮ, ಜೀವ, ಪ್ರೀತಿಯ ಪ್ರತೀಕ, ಸಹನಾ ಮೂರ್ತಿ, ಮಿಸ್ ಯೂ ಅಮ್ಮ, ಲವ್ ಯೂ ಅಮ್ಮ, ಮೈ ಸ್ಟ್ರೆಂಥ್, ಸ್ಫೂರ್ತಿಯ ಬುತ್ತಿ...' ಹೀಗೆ ತಮಗೆ ತೋಚಿದ್ದನ್ನು ಬರೆದುಕೊಂಡಿದ್ದರು. ಇದಕ್ಕೆ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಕೂಡ ಹೊರತಾಗಿರಲಿಲ್ಲ. ಅವರು ತಾಯಿ ಬಗ್ಗೆ ಏನು ಹೇಳಿಕೊಂಡಿದ್ದಾರೆ ಎಂಬುದು ಇಲ್ಲಿದೆ ಓದಿ.
ಕರ್ನಾಟಕದ ಸಿಂಗಂ ಎಂದೇ ಗುರುತಿಸಿಕೊಂಡಿರುವ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಖಡಕ್ ಪೊಲೀಸ್ ಅಧಿಕಾರಿ. ಅವರ ಮಾತುಗಳು ಯುವಜನಾಂಗಕ್ಕೆ ಸ್ಫೂರ್ತಿದಾಯಕ. ಅವರ ಕರ್ತವ್ಯ ನಿಷ್ಠೆ, ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿ-ನೀತಿ ಇತರರಿಗೆ ಮಾದರಿ. ಹಾಗೆ ಅಮ್ಮಂದಿರ ದಿನದ ಪ್ರಯುಕ್ತ ಅವರು ತನ್ನ ತಾಯಿ ಜತೆ ಇರುವ ಫೋಟೋವನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. "Life doesn't come with a manual-it comes with a mother". 'ಹ್ಯಾಪಿ ಮದರ್ಸ್ ಡೇ' ಎಂದು ಒಂದೇ ಸಾಲಿನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿರಿ ತಾರೆಯರ ಅಮ್ಮಂದಿರ ದಿನ: ಅಮ್ಮ ನನ್ನ ಪಾಲಿನ ರಿಪೋರ್ಟರ್
ತಲೆಗೆ ಟವೆಲ್ ಸುತ್ತಿಕೊಂಡು ಹೊಲದಲ್ಲಿ ನಿಂತಿರುವ ತನ್ನ ಹೆಗಲ ಮೇಲೆ ತಾಯಿ ಕೈ ಹಾಕಿರುವ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ರವಿ ಡಿ. ಚನ್ನಣ್ಣನವರ್, 'ಜೀವನ ಬರೋದು ಕೈಪಿಡಿಯಿಂದಲ್ಲ, ಅದು ಅಮ್ಮನ ಜತೆ ಬರಲಿದೆ' ಎಂದಿದ್ದಾರೆ. ಈ ಫೋಟೋಗೆ ಸಾವಿರಾರು ಲೈಕ್ಸ್ ಬಂದಿವೆ. ತಾಯಿಗೆ ತಕ್ಕ ಮಗ, ಮಾತೃದೈವೋಭವ, ನಿಮ್ಮ ಮಾತು ಸ್ಫೂರ್ತಿದಾಯಕ, ಅಮ್ಮನಿಗೆ ಸರಿ ಸಾಟಿ ಯಾರಿಲ್ಲ, ನೀವೊಬ್ಬ ಸರಳ- ಸಜ್ಜನ ವ್ಯಕ್ತಿ... ಎಂದೆಲ್ಲ ಅಭಿಮಾನಿಗಳು ಕಮೆಂಟ್ಸ್ ಕೊಡುತ್ತಿದ್ದಾರೆ. ಧ್ಯಾಮಪ್ಪ ಚನ್ನಣ್ಣನವರ್ ಮತ್ತು ರತ್ನಮ್ಮ ದಂಪತಿ ಪುತ್ರ ರವಿ.
ಇದನ್ನೂ ಓದಿರಿ ಅಮ್ಮ ಒಂದು ಕ್ಷಣ ಕಾಣಲಿಲ್ಲ ಅಂದರೂ ಭಯವಾಗುತ್ತೆ