More

    ತಾರೆಯರ ಅಮ್ಮಂದಿರ ದಿನ: ಒಂದು ಕ್ಷಣ ಕಾಣಲಿಲ್ಲ ಅಂದರೂ ಭಯವಾಗುತ್ತೆ

    ಬೆಂಗಳೂರು: ನಾನು ತುಂಬಾ ಸಾಫ್ಟ್, ಜಾಸ್ತಿ ಮಾತಾಡುವುದಿಲ್ಲ, ತುಂಬ ರಿಸರ್ವ್ ಅಂತ ಎಲ್ಲಾ ಹೇಳ್ತಾರೆ. ನಾನು ಹೀಗಿದ್ದೀನಿ ಎಂದರೆ, ಅದಕ್ಕೆ ಕಾರಣ ಅಮ್ಮ. ಇವೆಲ್ಲಾ ಅಮ್ಮನ ಗುಣಗಳೇ. ನಾನು ಮತ್ತು ಅಮ್ಮ ಬಹಳ ಸಮಯ ಕಳೆಯುತ್ತೀವಿ. ಅಮ್ಮ ನನಗಿಂಥ ಚಿಕ್ಕವರು ಅನ್ನೋ ತರಹ ನಾನ್ಯಾವತ್ತೂ ಅವರನ್ನ ಟ್ರೀಟ್ ಮಾಡ್ತೀನಿ. ಏಕೆಂದರೆ, ಅವರು ಸಾಫ್ಟ್ ಅಷ್ಟೇ ಅಲ್ಲ, ಬಹಳ ಮುಗ್ಧೆ ಕೂಡಾ. ಇನ್ನು ಅವರು ನನಗಿಂಥ ಬಹಳ ಸಣ್ಣ. ಹಾಗಾಗಿ ಅವರು ಕಾಣಿಸಲಿಲ್ಲ ಎಂದರೆ ನನಗೆ ತುಂಬಾ ಗಾಬರಿ ಆಗತ್ತೆ.

    ಒಮ್ಮೆ ಶೂಟಿಂಗ್​ನಲ್ಲಿ, ನಾನು ಶಾಟ್​ನಲ್ಲಿ ಬಿಜಿಯಾಗಿದ್ದೆ. ಅಮ್ಮ ಅಲ್ಲೇ ಓಡಾಡುತ್ತಿದ್ದರು. ಸ್ವಲ್ಪ ಹೊತ್ತು ಅವರು ಕಾಣಲಿಲ್ಲ. ಬಹಳ ಭಯವಾಗಿಬಿಟ್ಟಿತು. ಅಮ್ಮ ವಾಪಸ್ಸು ಬಂದ ಮೇಲೆ ಬಹಳ ಖುಷಿಯಾಯಿತು. ನಾನು ಹೈಸ್ಕೂಲಿಗೆ ಬಂದ ನಂತರ ಅಮ್ಮನ ಜತೆಗೆ ಅಷ್ಟೊಂದು ಕ್ಲೋಸ್ ಆಗಿದ್ದು. ಆದರೆ, ಚಿಕ್ಕಂದಿನಲ್ಲಿ ಅವರು ನನ್ನ ಪ್ಲೇಸ್ಕೂಲ್​ಗೆ ಡ್ರಾಪ್ ಮಾಡುತ್ತಿದ್ದುದು ಸಹ ನನ್ನ ನೆನಪಿನಲ್ಲಿ ಬಲವಾಗಿ ಉಳಿದಿದೆ. ಅವರು ಸ್ಕೂಲಿಗೆ ಬಿಡುವಾಗ ನಾನು ತುಂಬಾ ಅಳುತ್ತಿದ್ದೆ. ಚಿಕ್ಕಂದಿನಲ್ಲಿ ನನ್ನನ್ನು ಸಂಭಾಳಿಸುವುದೇ ಅವರಿಗೆ ಕಷ್ಟವಾಗುತಿತ್ತು. ಒಂದು ಹಂತದಲ್ಲಿ ನಾನು ಬದಲಾದೆ. ಅಮ್ಮನ ತರಹವೇ ಆಗಿ ಹೋದೆ.

    | ಐಶಾನಿ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts