More

    ತಾರೆಯರ ಅಮ್ಮಂದಿರ ದಿನ: ಅಮ್ಮ ನನ್ನ ಪಾಲಿನ ರಿಪೋರ್ಟರ್

    ಬೆಂಗಳೂರು: ಪ್ರತಿ ಹಂತದಲ್ಲೂ ನನ್ನನ್ನು ಸಪೋರ್ಟ್ ಮಾಡುತ್ತಲೇ ಬಂದವರು ನನ್ನಮ್ಮ. ಇವತ್ತು ನಾನು ಏನಾಗಿದ್ದೀನೋ, ಅದಕ್ಕೆ ಕಾರಣ ಅವರು. ಅವರಿಂದ ನಾನು ಕಲಿಯುವುದು ಸಾಕಷ್ಟು ಇದೆ. ಅವರ ತಾಳ್ಮೆ, ಪಾಸಿಟಿವ್ ವ್ಯಕ್ತಿತ್ವ, ಸಹಾಯ ಮಾಡುವ ರೀತಿ ಇವೆಲ್ಲಾ ನಮಗೆ ದೊಡ್ಡ ಸ್ಪೂರ್ತಿ. ಹಾಗಾಗಿ ಅವರು ನನ್ನ ಪಾಲಿನ ವೆರಿ ಇಂಪಾರ್ಟೆಂಟ್ ಪರ್ಸನ್. ಅಷ್ಟೇ ಅಲ್ಲ, ಅವರು ನನ್ನ ಪಾಲಿನ ರಿಪೋರ್ಟರ್ ಸಹ.

    ಏಕೆಂದರೆ, ನಾನು ನ್ಯೂಸ್ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ, ಅಮ್ಮ ಸುದ್ದಿ ಓದುವುದಷ್ಟೇ ಅಲ್ಲ, ಎಲ್ಲವನ್ನೂ ಹೇಳುತ್ತಾರೆ. ನನ್ನ ಸಾಮಾನ್ಯ ಜ್ಞಾನ ಇಂಪೂ›ವ್ ಆಗಿದ್ದೇ ಅವರಿಂದ. ನಾವಿಬ್ಬರೂ ಬಹಳ ಸಮಯ ಒಟ್ಟಿಗೇ ಕಳೆಯುತ್ತೇವೆ. ಬರೀ ಸುದ್ದಿಯಷ್ಟೇ ಅಲ್ಲ, ಆಧ್ಯಾತ್ಮಿಕವಾಗಿಯೂ ತುಂಬಾ ತಿಳಿದುಕೊಂಡಿದ್ದಾರೆ. ಅವರು ನನ್ನ ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದರೆ, ನನ್ನ ಕಣ್ಣು ನೋಡಿ ನನ್ನ ಮನಸ್ಥಿತಿ ಹೇಳುತ್ತಾರೆ. ಅವರ ಮಗಳಾಗಿ ಹುಟ್ಟುವುದಕ್ಕೆ ನಾನು ಬಹಳ ಪುಣ್ಯ ಮಾಡಿದ್ದೆ.

    | ರಾಧಿಕಾ ನಾರಾಯಣ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts