ನವದೆಹಲಿ: ಕಾಂಗ್ರೆಸ್ 3 ರಾಜ್ಯಗಳಿಗೆ ಪಿಸಿಸಿ ಅಧ್ಯಕ್ಷರ ಆಯ್ಕೆಯನ್ನು ಪೂರ್ಣಗೊಳಿಸಿದೆ. ಪಟ್ಟಿ ಸಿದ್ಧವಾಗಿದ್ದು, ಶನಿವಾರ ಸಂಜೆ ಅಥವಾ ಭಾನುವಾರ ಬೆಳಗ್ಗೆ ಹೆಸರು ಪ್ರಕಟಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ‘ಹೋಟೆಲ್ಗೆ ಕರೆಸಿ ಬಟ್ಟೆ ಬಿಚ್ಚು ಎಂದ್ರು’: ನಿರ್ದೇಶಕ ರಂಜಿತ್ ಮೇಲೆ ಮತ್ತೊಬ್ಬ ನಟಿ ಲೈಂಗಿಕ ಕಿರುಕುಳ ಆರೋಪ
ಪಶ್ಚಿಮ ಬಂಗಾಳಕ್ಕೆ ದೀಪದಾಸ್ ಮುನ್ಷಿ, ಕೇರಳಕ್ಕೆ ಕೆ.ಸಿ.ವೇಣುಗೋಪಾಲ್ ಮತ್ತು ತೆಲಂಗಾಣ ಪಿಸಿಸಿ ಅಧ್ಯಕ್ಷರಾಗಿ ಮಹೇಶ್ ಕುಮಾರ್ ಗೌಡ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಬದಲಿಗೆ ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗಹ್ಲೋಟ್ ಮತ್ತು ದೀಪದಾಸ್ ಮುನ್ಷಿ ಬದಲಿಗೆ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಭಾಗೇಲ್ ತೆಲಂಗಾಣ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಲಿದ್ದಾರೆ ಎಂದು ವರದಿಯಾಗಿದೆ.