CM Rekha Gupta: ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವ ವೇಳೆ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ದಾಳಿ ನಡೆದ ಸುಮಾರು ಹದಿನೈದು ದಿನಗಳ ಬಳಿಕ ಜನ್ ಸುನ್ವಾಯಿ ಕಾರ್ಯಕ್ರಮವನ್ನು ಪುನರಾರಂಭಿಸಿದ್ದಾರೆ.
ಬೀದಿನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದ ನೀಡಿದ ನಂತರ, ಶ್ವಾನಪ್ರೇಮಿಯೊಬ್ಬ ನ್ಯಾಯಾಲಯದ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ, ಸಿಎಂ ಗುಪ್ತಾ ಮೇಲೆ ಹಲ್ಲೆ ನಡೆಸಿದ್ದ, ಆ ಕಾರಣದಿಂದ ಸ್ವಲ್ಪ ದಿನ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು.
ಬುಧವಾರ (ಸೆಪ್ಟೆಂಬರ್ 3) ಬೆಳಿಗ್ಗೆ 8 ಗಂಟೆಗೆ ಜನ್ ಸುನ್ವಾಯಿ ಕಾರ್ಯಕ್ರಮವನ್ನು ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಆರಂಭಿಸಿದ್ದು, ನಗರದ ವಿವಿಧ ಭಾಗಗಳಿಂದ ಆಗಮಿಸಸಿದ್ದ ಜನರು ಮುಖ್ಯಮಂತ್ರಿ ಬಳಿ ತಮ್ಮ ಕುಂದುಕೊರತೆಗಳನ್ನು ನಿವೇದಿಸಿಕೊಂಡರು. ಭದ್ರತಾ ಕ್ರಮಗಳಲ್ಲಿ ಪೊಲೀಸರು ಲೋಹ ಶೋಧಕಗಳ ಮೂಲಕ ವ್ಯಕ್ತಿಗಳನ್ನು ತಪಾಸಣೆ ನಡೆಸುವುದು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡುವುದು ಸೇರಿತ್ತು.
ಸಭೆಯ ಆವರಣದಲ್ಲಿ ಯಾವುದೇ ಮೊಬೈಲ್ ಫೋನ್‌ಗಳು, ಕ್ಯಾಮೆರಾಗಳು ಮತ್ತು ಕನ್ನಡಕಗಳನ್ನು ತರಲು ಅನುಮತಿ ನೀಡಲಿಲ್ಲ ಎಂದು ತಿಳಿದುಬಂದಿದೆ. ಕಚೇರಿಯಲ್ಲಿನ ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಉಪ ಪೊಲೀಸ್ ಆಯುಕ್ತ ರಾಜಾ ಬಂಥಿಯಾ ಸ್ವತಃ ಹಾಜರಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಹಿರಿಕಾಟಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಆಗಸ್ಟ್ 20 ರಂದು ಗುಜರಾತ್‌ನ ರಾಜ್‌ಕೋಟ್ ಮೂಲದ ರಾಜೇಶ್ ಸಕ್ರಿಯಾ ಎಂದು ಗುರುತಿಸಲಾಗಿದ್ದು, ಜನ್ ಸುನ್ವಾಯಿ ಕಾರ್ಯಕ್ರಮದಲ್ಲಿ ಸಿಎಂ ಗುಪ್ತಾ ಅವರ ಮೇಲೆ ಹಲ್ಲೆ ನಡೆಸಿದ್ದರು. ಸಕ್ರಿಯಾ ಒಬ್ಬ ಶ್ವಾನ ಪ್ರೇಮಿಯಾಗಿದ್ದು , ದೆಹಲಿ-ಎನ್‌ಸಿಆರ್‌ನ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶದಿಂದ ಅವರು ತೊಂದರೆಗೀಡಾಗಿದ್ದರು ಎಂದು ಅವರ ಕುಟುಂಬ ಹೇಳಿಕೊಂಡಿದೆ.
ಇತ್ತೀಚೆಗೆ ಸಿಎಂ ಗುಪ್ತಾ ಅವರು ಜಾನ್ ಸುನ್ವಾಯಿ ಕಾರ್ಯಕ್ರಮದಲ್ಲಿ ಗೊತ್ತುಪಡಿಸಿದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಮೇಲಧಿಕಾರಿಗಳು ಆದೇಶಿಸಿದ್ದರು, ನಿಯೋಜನೆಗೊಂಡ ಅಧಿಕಾರಿ ಹಾಜರಾಗಲು ಸಾಧ್ಯವಾಗದಿದ್ದರೆ, ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಪೂರ್ವಾನುಮತಿ ಪಡೆಯಬೇಕು, ಅನುಮತಿಯಿಲ್ಲದೆ ಗೈರುಹಾಜರಾದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಎಂಒ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.(ಏಜೆನ್ಸೀಸ್)