ಮೇಷ: ಕಾರ್ತಿಕ ಮಾಸದಲ್ಲಿ ಮೇಷ ರಾಶಿಯವರಿಗೆ ಶಿವಪಾರ್ವತಿ ಸಹಿತ ಕಾರ್ತಿಕೇಯನನ್ನು ಪೂಜೆ ಮಾಡುವ ಸಂದರ್ಭ ಒದಗಿಬಂದಿದೆ. ಮೇಷಾಧಿಪತಿ ಕಾರ್ತಿಕೇಯನೇ. ಶನಿಯು ವಕ್ರತ್ವ ಕಳೆದುಕೊಂಡು ಏಕಾದಶಕ್ಕೆ ಬರಲಿದ್ದು ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸುವುದು ಅಗತ್ಯ. 29.3.25ರವರೆಗೂ ಕೆಲಸವನ್ನು ಸಾಧಿಸಿಕೊಂಡು ದೋಷಾರೋಪದಿಂದ ಬಿಡುಗಡೆ ಹೊಂದಿ, ಚೈತನ್ಯ, ಸಾಮರ್ಥ್ಯ, ಕೀರ್ತಿ ಉಳಿಸಿಕೊಳ್ಳಬಹುದು. ಶನಿ ಬದಲಾವಣೆಗೆ ಮುನ್ನ ದೇವತಾ ಹರಕೆ ತೀರಿಸಿಕೊಂಡು ದೈವಾನುಗ್ರಹ ಪಡೆಯಿರಿ.
ಮೇಷ: 29.3.25ರಿಂದ ಏಕಾದಶಕ್ಕೆ ಶನಿ, ಮೇ ತಿಂಗಳಲ್ಲಿ ಗುರು ಬದಲಾವಣೆಗೊಂಡು ದ್ವಿತೀಯಕ್ಕೆ ಬರುತ್ತಾರೆ. ದೈವ ಭಕ್ತರಾಗಿ ಮೌನಧರಿಸಿದರೆ ಇಷ್ಟಾರ್ಥ ಸಿದ್ದಿ ಪಡೆದು ರಾಜಯೋಗವನ್ನು ಅನುಭವಿಸಬಹುದು. ಅನ್ಯರನ್ನು ಹಿಯಾಳಿಸುವುದನ್ನು ನಿಲ್ಲಿಸಿ ನೀವು ಸಂಪಾದನೆ ಮಾಡಿದ ದೈವಪುಣ್ಯವನ್ನು ನೀವೇ ಅನುಭವಿಸಿ.
ಮಿಥುನ: 9ನೇ ಮನೆಯ ಶನಿಯು ಮಾ.29ರಿಂದ ಬದಲಾವಣೆಗೊಂಡು ದಶಮಕ್ಕೆ ಬರುತ್ತಾನೆ. ಗುರುವಿನ ಮನೆಯಾದ್ದರಿಂದ, ನಿಮಗೆ ಅನುಕೂಲಕರವಾದ ಸಮಯ ಬರುವುದು. ಮೇ 2025ರಲ್ಲಿ ಗುರು ಲಗ್ನಕ್ಕೆ ಬಂದಾಗ ಶುಭಫಲವನ್ನು ಕಾಣುವಿರಿ.
ಕಟಕ: ಯುಗಾದಿಯಿಂದ ಅಷ್ಟ್ಟು ಶನಿಯಿಂದ ಬಿಡುಗಡೆ ಹೊಂದುವ ಕಾಲ. ನೀವು ಮಾಡಿದ ಪೂರ್ವಪುಣ್ಯದ ಬಾಗಿಲು ತೆರೆದು ಒಳ್ಳೆಯ ಆರೋಗ್ಯ ಭಾಗ್ಯ ಕೊಡಲು ಸದಾಕಾಲ ಉಮಾಮಹೇಶ್ವರನನ್ನು ಪೂಜೆ ಮಾಡಬೇಕೆಂಬ ನಿಯಮವಿದೆ. ಶನಿಯು ಈಶ್ವರನ ಸೃಷ್ಟಿ. ಅನೇಕ ಸತ್ಪಲ ನೀಡಿ, ಶಾಂತಿ, ಸೌಖ್ಯವನ್ನು ಕೊಡುತ್ತಾನೆ.
ಸಿಂಹ: ದಶಮದಲ್ಲಿ ಗುರುವು, ಸಪ್ತಮ ಶನಿಯು ತಾತ್ಕಾಲಿಕವಾಗಿದ್ದು ಶನಿಯು ಮೀನರಾಶಿಗೆ ಬಂದಾಗ ಅಷ್ಟಮದಲ್ಲಿ ಇದ್ದರೂ, ಬಾಧೆಯು ವಿಪರೀತವಾಗಿರುವುದಿಲ್ಲ. ಸೋಮವಾರ ಏಕಾನ್ನ ವ್ರತ, ಈಶ್ವರನಿಗೆ ಬಿಲ್ವಾರ್ಚನೆ ಮಾಡಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಯಾರೊಂದಿಗೂ ದುಡ್ಡಿನ ವ್ಯವಹಾರ ಬೇಡ. ಸೂರ್ಯ ನಾರಾಯಣನ ಪ್ರಾರ್ಥನೆ ಅಗತ್ಯ.
ಕನ್ಯಾ: 6ನೇ ಮನೆಯ ಶನಿಯು 29ನೇ ಮಾರ್ಚ್ 2025ರವರೆಗೆ ಒಳ್ಳೆಯ ಫಲ ನೀಡುತ್ತಾನೆ. ಸಪ್ತಮಕ್ಕೆ ಜರುಗಿದಾಗ ಆರೋಗ್ಯದಲ್ಲಿ ವ್ಯತ್ಯಯವನ್ನು ಕಂಡರೂ, 9ರ ಗುರುವು ರಕ್ಷಣೆ ನೀಡುವುದರಲ್ಲಿ ಸಂದೇಹವಿಲ್ಲ. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ. ದಕ್ಷಿಣಾಮೂರ್ತಿ ಪ್ರಾರ್ಥನೆ ಹಾಗೂ ನಿತ್ಯವೂ ದಕ್ಷಿಣಾಮೂರ್ತಿ ಅಷ್ಟೋತ್ತರ, ಸ್ತೋತ್ರ ಪಾರಾಯಣ ಮಾಡಿ.
ತುಲಾ: ಶನಿಯು ಪಂಚಮ ಸ್ಥಾನ ಬಿಟ್ಟು ಷಷ್ಠಕ್ಕೆ ಬಂದ ಕೂಡಲೇ ವಿಶೇಷ ಫಲ, ಸುಖ, ಕಾರ್ಯದಲ್ಲಿ ಜಯ ಕೊಟ್ಟೇಕೊಡುತ್ತಾನೆ. ಪೂರ್ವ ಜನ್ಮದ ಪುಣ್ಯವು ಹರಿದು ನಿಮ್ಮನ್ನು ಯಾರೂ ಮುಟ್ಟಲು ಅಸಾಧ್ಯ. ತುಲಾ ರಾಶಿಯವರಿಗೆ ಶನಿಯು ವಿಶೇಷ ಫಲವನ್ನು ಕೊಡುವನು. ನಿಮ್ಮ ಬೆೆಳವಣಿಗೆಯ ಒಂದು ನಕ್ಷೆಯನ್ನು ಸಿದ್ಧಪಡಿಸಿಕೊಂಡರೆ ಮತ್ತಷ್ಟು ಮೇಲಕ್ಕೂ ಬೆಳೆಯಬಹುದು. ಒಳ್ಳೆಯ ಸ್ಥಾನವನ್ನು ಪಡೆಯಲು ಪ್ರಯತ್ನಿಸಿ. ಶನಿ ಅಷ್ಟೋತ್ತರ ಪಠಿಸಿ. ಸಾಯಂಕಾಲದಲ್ಲಿ ಶಿವಧ್ಯಾನ ಮಾಡಲು ಮರೆಯದಿರಿ.
ವೃಶ್ಚಿಕ: ಲಗ್ನದಲ್ಲಿ ರವಿ-ಬುಧ ಇರುವುದರಿಂದ ಕಾರ್ಯಕ್ಷೇತ್ರದಲ್ಲಿ ಬೆಳಕನ್ನು ತೋರಿಸಿ ಧನ ಲಾಭ ತರುವುದರಲ್ಲಿ ಸಂದೇಹವಿಲ್ಲ. ಸಪ್ತಮದಲ್ಲಿ ಗುರುವಿರುವುದರಿಂದ ಸುಖ ಸಂತೋಷ ಸಮೃದ್ಧಿಯು ಉಂಟಾಗುವುದು. ಆರೋಗ್ಯ ಧನ ಸ್ಥಿರವಾಗಿರಲು ಗುರುವನ್ನು ಪ್ರಾರ್ಥಿಸಿ ಚಂಡಿಕೆಯನ್ನು ಪೂಜಿಸಿ. ಸಾಧ್ಯವಾದಲ್ಲಿ ಚಂಡಿಕಾ ಹವನ, ಸುಹಾಸಿನಿ ಪೂಜೆಯನ್ನು ಮಾಡಿರಿ.
ಧನಸ್ಸು: ಗುರುಬಲವಿಲ್ಲದಿರುವುದರಿಂದ ಶನಿಯು ತೃತೀಯದಲ್ಲಿದ್ದರೂ ಏನೂ ಫಲವನ್ನು ಕೊಡನು. ಶನಿಯು ನ.15ರಿಂದ ನೇರ ಸಂಚಾರಕ್ಕೆ ಬಂದು ಸ್ವಕ್ಷೇತ್ರದಲ್ಲಿ ಇರುವು ದರಿಂದ ಕಾರ್ಯದಲ್ಲಿ ಜಯ, ಅಭಿಷ್ಟಗಳು ಪೂರ್ಣಗೊಳ್ಳುವ ಸುಸಮಯ ಬಂದೇ ಬರುತ್ತದೆ. ಬಂದದ್ದು ಉಳಿಸಿಕೊಂಡರೆ, ಜನ್ಮದಾತರ ಸೇವೆ ಮಾಡಿದರೆ ಶಿವ ಪಾರ್ವತಿಯೇ ಸಂತುಷ್ಟರಾಗುತ್ತಾರೆ.
ಮಕರ: ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ, ಕೂಗಿದರೂ ದನಿ ಕೇಳಲಿಲ್ಲವೇ? ನಿಮ್ಮ ಜೀವನವು ಸ್ಪಷ್ಟವಾಗಿ, ಸಂತೃಪ್ತವಾಗಬೇಕಾದರೆ ಮೇಲಿನ ವಾಕ್ಯದಂತೆ ಮನಸಾರೆ ಹರಿಯನ್ನು ಪ್ರಾರ್ಥಿಸಿ. ಅಭೀಷ್ಟ ಸಿದ್ಧಿಸುವ, ಶನಿ ಸಂಚಾರ ಮುಗಿಯುವ ಕಾಲ. ನೀವು ಕೇಳಿದ ವರವನ್ನು ಕೊಟ್ಟು ಎತ್ತರಕ್ಕೆ ಬೆಳೆಸಿ, ಆರೋಗ್ಯ, ಐಶ್ವರ್ಯ ಸುಖ, ಸಂತೋಷ ಕೊಡುತ್ತಾನೆ. ದೈವ ಪ್ರಾರ್ಥನೆ ಬೇಕೇ ಬೇಕು. ನಿತ್ಯ ಗುರುಚರಿತ್ರೆ ಪಾರಾಯಣ ಮಾಡಿ, ದುರ್ಗಾಷ್ಟೋತ್ತರ ಪಠಿಸಿ.
ಕುಂಭ: ಕುಂಭ ರಾಶಿಯವರಿಗೆ ನಗುವೂ ಬರುತ್ತದೆ. ದುಃಖವೂ ಉಂಟಾಗುತ್ತದೆ. ಶನಿಯು ಸ್ವಕ್ಷೇತ್ರಕ್ಕೆ ಬಂದು 5 ವರ್ಷ ಕಷ್ಟಕಾಲ ಕಳೆದು ಸಂತೋಷ ನೀಡುತ್ತಾನೆ. ಆಸೆಗೆ ಮಿತಿಯಿರಲಿ. ಮನುಷ್ಯನು ಹಂತಹಂತವಾಗಿ ಬೆಳೆಯಬೇಕು. ದೈವಬಲ ಸಂಪಾದಿಸಿಕೊಂಡರೆ ನಿಮ್ಮನ್ನು ಯಾರೂ ಮುಟ್ಟಲಾರರು. ಧನಾಕಾಂಕ್ಷಿಗಳಿಗೆ ಧನವನ್ನು, ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಅತಿಶಯವಾದ, ಹೊಳೆಯನ್ನೇ ಹರಸುತ್ತಾನೆ. ಗಣಪತಿಯನ್ನು ಆರಾಧನೆ ಮಾಡಿರಿ.
ಮೀನ: ದ್ವಾದಶ ಶನಿಯು ದಾಟಿ ಜನ್ಮಕ್ಕೆ ಬರುವ ಕಾಲ. ಶೇ. 50 ಕಷ್ಟ ಕಾರ್ಪಣ್ಯ ಕಡಿಮೆಯಾಗಿ ನಿಮ್ಮನ್ನು ನೀವು ಕಾಪಾಡಿಕೊಂಡರೆ ಚೈತನ್ಯ ದೊರೆಯುವುದು. ಗುರು ಮನೆಯಲ್ಲಿ ಶನಿಯು ಬರುವುದರಿಂದ ಗುರುವಿನ ಅಧಿಪತ್ಯ ಇರುತ್ತದೆ. ಮೀನು ನೀರನ್ನು ಬಿಟ್ಟರೆ ಬದುಕಲಾರದು. ಮೀನ ರಾಶಿಯವರು ದೈವವನ್ನು ಬಿಟ್ಟರೆ ಕಷ್ಟವನ್ನು ಮೈಮೇಲೆ ಹಾಕಿಕೊಂಡಂತೆ. ಶನಿ, ಗುರು ರಾಶಿಗೆ ಬಂದಾಗ ಅನಂತವಾಗಿ ಗುರು ದತ್ತಾತ್ರೇಯನನ್ನು, ಪ್ರತಿ ಬಹುಳ ಚತುರ್ದಶಿಯಂದು ಕೇದಾರೇಶ್ವರ ವ್ರತಕಥೆ ಓದಿ. ಸ್ಥಿರವಾದ ಜೀವನ ನಡೆಸಬಹುದು.