ನ್ಯೂಸ್

ಈ ರಾಶಿಯವರು ದೇವರ ಪಾಲಿಗೆ ಬಿಟ್ಟರೆ ಶ್ರೇಯೋವಂತರಾಗಿ ಬದುಕುತ್ತೀರ: ವಾರಭವಿಷ್ಯ

ಮೇಷ: ಮೇಷರಾಶಿಗೆ ಉದಯ ಸೂರ್ಯನಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದರೆ, ಜೀವನವು ಉದಯವಾಗಿ, ಪ್ರತಿಭಾವಂತರಾಗಿ, ಪ್ರಕಟಿತಗೊಳ್ಳುವಿರಿ. ತಾಳ್ಮೆ ವಹಿಸಿದರೆ, ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಏಕಾದಶದಲ್ಲಿ ಶನಿಯಿದ್ದರೂ ಶನಿಯ ಸ್ಥಾನ-ಮಾನಗಳನ್ನು ನೋಡಿದರೂ, ಮೇಷ ರಾಶಿಯವರಿಗೆ ವಿಶೇಷವಾಗಿ ಸುಬ್ರಹ್ಮಣ್ಯನ ಅನುಗ್ರಹ ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಿ. ಷಣ್ಮುಖನು 12 ತೋಳುಳ್ಳವನು ನಿಮ್ಮನ್ನು ಕಾಪಾಡಿ ಇಚ್ಚೆಗಳನ್ನು ಪೂರ್ಣಗೊಳಿಸಿ, ಆರೋಗ್ಯ ಕೊಟ್ಟು, ಜೀವನಕ್ಕೆ ಹೊಸದಾದ ಮೆರುಗನ್ನು ನೀಡುತ್ತಾನೆ.

ವೃಷಭ: ಲಗ್ನದಲ್ಲೇ ಗುರುವಿದ್ದಾಗ ನಾಲಿಗೆಯು ಹೊರಳಿದಂತೆಲ್ಲಾ ಮಾತನಾಡಬಾರದು. ನೀರು ಕದಡಿ ಹೋದರೆ, ಕುಡಿಯಲು ಯೋಗ್ಯವಲ್ಲ. ಮಾತು ಮೃತ್ಯುವನ್ನು ಸಹಾ ತರುತ್ತದೆ. ಅವಕಾಶ ತಪ್ಪಿಸು ತ್ತದೆ. ಮಾರ್ಗ ಚೆನ್ನಾಗಿದ್ದರೆ ಎಲ್ಲವೂ ಅರಸಿ ಬರುವ ಕಾಲ. ಮೇ ನಂತರ ದ್ವಿತೀಯ ಗುರುವು ಒಳ್ಳೆಯ ಅವಕಾಶ ನಿಮ್ಮ ಪಾಲಿಗೆ ತರಲಿದ್ದಾನೆ. ಸಹನೆ ಸಹಕಾರವಿರಲಿ. ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ.

ಮಿಥುನ: ಮಿಥುನ ರಾಶಿಯವರಿಗೆ ಗುರುಬಲ ಇಲ್ಲ. ಶನಿಬಲವಿದ್ದರೂ ಮಾರ್ಗದರ್ಶನ ನೀಡಲು ಗುರುವಿಲ್ಲದಿದ್ದರೆ ಗುರಿ ಹೇಗೆ ಮುಟ್ಟಲು ಸಾಧ್ಯ? ಅನನ್ಯವಾಗಿ ಗುರುಪ್ರಾರ್ಥನೆ ಬೇಕು. ಅದರ ಜತೆಯಲ್ಲಿಯೇ ಹಯಗ್ರೀವ ದೇವರ ಅನುಷ್ಠಾನವೂ ಬೇಕು. ಬಾಳು ಬೆಳಗಬೇಕಾದರೆ ಮನುಷ್ಯ ಮೈಬಗ್ಗಿಸಿ ಕೆಲಸ ಮಾಡಬೇಕು. ದೇವರ ಪಾಲಿಗೆ ಬಿಟ್ಟರೆ ಶ್ರೇಯೋವಂತರಾಗಿ ಬದುಕುತ್ತೀರ.

ಕಟಕ: ಏಕಾದಶ ಸ್ಥಾನೇ ಸ್ಥಿತೇ ಗುರುಃ, ಧನ-ಕನಕ ವಸ್ತು ವಾಹನ ಲಭ್ಯವಾಗುತ್ತದೆ. ಮನೋಇಚ್ಛೆ ಪೂರ್ಣವಾಗಿ, ಬಯಸದೇ ಇರುವ ಭಾಗ್ಯ ಒದಗಿ ಬಂದು, ಉಮಾಶಂಕರನೇ ನಿಮ್ಮನ್ನು ಉದ್ಧರಿಸಿ ಕಾಪಾಡುತ್ತಾನೆ. ಎಂದೆಂದಿಗೂ ಭಾಗ್ಯವನ್ನು ತಂದುಕೊಡುವ ಗಿರಿಜಾ ರಮಣನನ್ನು ಪೂಜಿಸಿ.

ಸಿಂಹ: ಮಕರದಲ್ಲಿ ಸೂರ್ಯನಿರುವುದರಿಂದ ಆರರ ಸೂರ್ಯನು ಶನಿ ಮನೆಯಲ್ಲಿ ಇರುವುದರಿಂದ ಜೀವನದಲ್ಲಿ ಕೆಲವೊಂದು ಅಡ್ಡಿಗಳು ಬಂದರೂ ಧೃತಿಗೆಡದೆ ತೇಜೋಮಯರಾದ ಸಿಂಹ ರಾಶಿಯಲ್ಲಿ ಹುಟ್ಟಿದ ನೀವು ಸೂರ್ಯಮಂಡಲವನ್ನು ಪೂಜಿಸಿ, ಸೂರ್ಯಾಷ್ಟಕ ಪಠಿಸಿ. ಕೆಂಪು ಬಟ್ಟೆಯಲ್ಲಿ ಗೋಧಿಯನ್ನು ಇಟ್ಟು ದಾನ ಕೊಡಿ. ನಿಮ್ಮ ಈಡೇರಿಕೆಗಳು ತನ್ನಿಂದ ತಾನೇ ನಡೆಯುತ್ತವೆ.

ಕನ್ಯಾ: ಕನ್ಯಾ ರಾಶಿಯವರಿಗೆ, ಗುರು, ಶನಿ ಗ್ರಹಗಳ ಭಾದೆಯಿಲ್ಲದಿದ್ದರೂ, ಲಗ್ನದಲ್ಲಿ ಕೇತು, ಸಪ್ತಮದಲ್ಲಿ ರಾಹುವಿದ್ದು, ಕೆಲವು ಆತಂಕ ಸೃಷ್ಟಿಯಾಗುತ್ತದೆ. ಮಹಾಗಣಪತಿಯನ್ನು ಪೂಜಿಸಿ. ಅರಳು - ಕಬ್ಬು ಬೆಲ್ಲ- ಎಳ್ಳು ಮಿಶ್ರಣ ಮಾಡಿ ಗಣಪನ ಮುಂದೆ ಇರಿಸಿದರೆ ವಿಘ್ನಗಳು ದೂರವಾಗಿ ಒಳ್ಳೆಯದನ್ನೆ ಪಡೆಯುತ್ತೀರಿ.

ತುಲಾ: ಅತ್ಯಂತ ಆನಂದದಾಯಕ ಸಮಯ ನಿಮ್ಮನ್ನು ಬಂದು ಸೇರುತ್ತದೆ. ಪಂಚಮ ಶನಿಯು ಕಡೆಯ ಭಾಗದಲ್ಲಿದ್ದು ಯಾವುದಕ್ಕೂ ಚಿಂತಿಸದಿರಿ. ಭಾಗ್ಯಚಕ್ರ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ. ಮಾಡುವ ಕೆಲಸದಲ್ಲಿ ಅಧಿಕ ಲಾಭವು, ಯಾರೂ ನಿಮ್ಮನ್ನು ಮುಟ್ಟಲು ಅಸಾಧ್ಯ ಎಂಬ ರೀತಿಯಲ್ಲಿ ನಿಮ್ಮ ಜೀವನವು ಮುಂದೆ ಸಾಗುತ್ತದೆ. ದುರ್ಗೆಯನ್ನು ಪೂಜಿಸಿ ಆನಂದವಾಗಿರಿ.

ವೃಶ್ಚಿಕ: ಬೆಳೆಯು ಬಂದಾಗ ಅದರಿಂದ ಆನಂದಪಟ್ಟು, ಆರ್ಥಿಕ ಸುಸ್ಥಿತಿಯನ್ನು ಕಾಪಾಡಿಕೊಂಡು ಇಲ್ಲದಿದ್ದವರಿಗೆ ಕೊಟ್ಟು, ಕಾಪಾಡುವುದು ಮನುಷ್ಯನ ಧ್ಯೇಯವಾಗಿರಬೇಕು. ಶನಿಯು ಪಂಚಮಕ್ಕೆ ಹೋಗಲಿದ್ದಾನೆ. ಬಾಂಧವ್ಯಗಳು ಉತ್ತಮವಾಗಿರಲು ಎಲ್ಲರನ್ನು ಎಲ್ಲವನ್ನೂ ನಗುಮುಖದಿಂದ ಎದುರಿಸಿ. ಎಲ್ಲವನ್ನೂ ತೂಗಿಸಿಕೊಂಡು ಹೋಗುವುದು ನಿಮ್ಮ ಮಾರ್ಗವಾಗಿರಲಿ.

ಧನಸ್ಸು: ಸೋಮಾರಿತನವನ್ನು ದೂರಮಾಡಿ, ಬೇಕಾದ್ದನ್ನು ಪಡೆಯಬೇಕು. ಮುಕ್ಕಣ್ಣನೊಬ್ಬನು ಸಿಟ್ಟಾದರೆ ಎಲ್ಲರಿಗೂ ಮಣ್ಣು ಮುಕ್ಕಿಸುತ್ತಾನೆ. ಮನುಷ್ಯನಿಗೂ ಮಣ್ಣಿಗೂ ಸಂಬಂಧವಿದೆ. ದೈರ್ಯದಿಂದ ಮುನ್ನುಗ್ಗಿ ರಾಜಯೋಗವನ್ನು ಅನುಭವಿಸುವ ಕಾಲ. ನಿಮ್ಮನ್ನು ತಡೆಯುವವರು ಯಾರೂ ಇಲ್ಲ. ದುರ್ಗಾ ಜಪ ಮಾಡಿ. ಚತುರ್ದಶಿ ಯ ದಿನ ಹೆಣ್ಣುಮಕ್ಕಳಿಗೆ ಅರಿಶಿಣ ಕುಂಕುಮ ಕೊಟ್ಟು ಸತ್ಕರಿಸಿ.

ಮಕರ: ಸೂರ್ಯನು ರಾಶಿಯಲ್ಲೇ ಇದ್ದು, ಅಮೋಘವಾದ ಬೆಳಕನ್ನು ಇರಿಸಿ, ಮನಸ್ಸಿಗೆ ಪ್ರಾಮಾಣಿಕ ಯೋಚನೆಯನ್ನು ಕೊಡುತ್ತಾನೆ. ಧೈರ್ಯವು ಇರಬೇಕು. ಯಾವುದೇ ವಿಚಾರಗಳಲ್ಲಿ ನಾನು ಏನನ್ನೂ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸವನ್ನು ಗಳಿಸಿ ಮುನ್ನುಗ್ಗಿ ಶನಿ ಪ್ರಾರ್ಥನೆ ಮುಂದುವರಿಸಿ.

ಕುಂಭ: ದ್ವಾದಶದಲ್ಲಿ ಸೂರ್ಯನು ಶನಿಯ ಮನೆಯಲ್ಲಿದ್ದು, ನಿಮ್ಮ ಜೀವನ ಶೈಲಿಯೇ ನಿಮ್ಮನ್ನು ಕಾಪಾಡುತ್ತದೆ. ರಾಮಂ ರಾಮೇತಿ ಎಂದು ಶ್ರೀರಾಮನನ್ನು ಪೂಜಿಸಿದರೆ, ಎಲ್ಲವೂ ದೊರೆಯುತ್ತದೆ. ಮನುಷ್ಯನಿಗೆ ಅಲ್ಪ ಕಷ್ಟ ಬಂದರೂ ಸಹಿಸಲಾಗುವುದಿಲ್ಲ. ಅದಕ್ಕಾಗಿ ದೈವಬಲ ಬೆಳೆಸಿಕೊಂಡು ಶ್ರೀರಾಮನನ್ನು ಪೂಜಿಸಿ, ಪ್ರಾರ್ಥಿಸಿ.

ಮೀನ: ಲಗ್ನದಲ್ಲಿ ರಾಹು, ದ್ವಾದಶದಲ್ಲಿ ಶನಿಯಿದ್ದು, ಕೆಲಸಗಳು ನಿಂತಲ್ಲೇ ನಿಂತಿವೆ. ನಿಂತ ನೀರು ಕುಡಿಯಲು ಯೋಗ್ಯವಲ್ಲ. ಅದರಂತೆ ಮನ ಸಂಕಲ್ಪ ಇಟ್ಟು ಮುನ್ನುಗ್ಗಿ. ಅದೇ ಸತ್ ಸಂಕಲ್ಪವಾಗಿ ನಿಮ್ಮ ದಾರಿಯಾವುದೆಂದು ನಿಮಗೆ ತಿಳಿಯುತ್ತದೆ. ಧೈರ್ಯವಿರಲಿ, ಮನಃಶಾಂತಿ ಸಿಗಲಿ. ಶನೈಶ್ಚರ ಅಷ್ಟೋತ್ತರ ಪಠಿಸಿ.