ನ್ಯೂಸ್

Weather Forecast| ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಭಾರೀ ಮಳೆ; Yellow Alert​ ಘೋಷಣೆ

ಬೆಂಗಳೂರು: ವಾರಗಟ್ಟಲ್ಲೇ ಬಿಡುವು ಪಡೆದಿದ್ದ ಮಳೆ (Rain) ನವರಾತ್ರಿ ಶುರುವಾದಾಗಿನಿಂದಲೂ ಎಡಬಿಡದೆ ಸುರಿಯುತ್ತಿದ್ದು, ರಾಜ್ಯದ ಅರ್ಧ ಭಾಗದಷ್ಟು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಹವಾಮಾನ ಇಲಾಖೆ (Weather Forecast) ಯೆಲ್ಲೋ ಅಲರ್ಟ್ (Yellow Alert)​ ಘೋಷಿಸಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನ  ಬಹುತೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 6 ರಿಂದ 8ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ((Yellow Alert)​ ಘೋಷಿಸಿದ್ದು, ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ.

ಅದರಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather Forecast) ತಿಳಿಸಿದೆ.

ಕಳೆದ ಕೆಲ ವಾರಗಳ ಹಿಂದೆ ಬಿಡುವು ಪಡೆದಿದ್ದ ಮಳೆ ಮತ್ತೊಮ್ಮೆ ಗುಡುಗು, ಸಿಡಿಲನೊಂದಿಗೆ ಅಬ್ಬರಿಸುತ್ತಿದ್ದು, ಈ ತಿಂಗಳಾಂತ್ಯದವರೆಗೂ ಸುರಿಯುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಈ ಬಗ್ಗೆ ವರದಿ ಮಾಡಲಿದ್ದು, ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.