ನ್ಯೂಸ್

India | ನಮ್ಮ ಪ್ರದೇಶವನ್ನು ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ: ಪಾಕ್​ಗೆ ಭಾರತ, ಅಫ್ಘಾನಿಸ್ತಾನ ಜಂಟಿ ಎಚ್ಚರಿಕೆ

India: ಭಾರತ ಮತ್ತು ಅಫ್ಘಾನಿಸ್ತಾನ ಸಾಮೂಹಿಕವಾಗಿ ಪಾಕಿಸ್ತಾನವನ್ನು ಟೀಕಿಸಿದ್ದು, ತನ್ನ ಪ್ರದೇಶವನ್ನು ಯಾರ ವಿರುದ್ಧವೂ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಶುಕ್ರವಾರ (ಸೆಪ್ಟೆಂಬರ್​,10) ಹೇಳಿದ್ದಾರೆ.

ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್​ ಜತೆ ಮಾತನಾಡಿದ ಮುತ್ತಕಿ, ಅಮೆರಿಕದ ಆಕ್ರಮಣದ ಸಮಯದಲ್ಲಿ, ಅನೇಕ ಏರಿಳಿತಗಳು ಇದ್ದವು. ಅದರೆ, ನಾವು ಎಂದಿಗೂ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಲಿಲ್ಲ ಮತ್ತು ಯಾವಾಗಲೂ ಭಾರತದೊಂದಿಗಿನ ಉತ್ತಮ ಸಂಬಂಧವನ್ನು ಗೌರವಿಸುತ್ತೇವೆ. ಅಲ್ಲದೆ, ಯಾವುದೇ ಪಡೆಗಳು ನಮ್ಮ ಪ್ರದೇಶವನ್ನು ಇತರರ ವಿರುದ್ಧ ಬೆದರಿಸಲು ಅಥವಾ ಬಳಸಲು ನಾವು ಅನುಮತಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚಿನ ಭೂಕಂಪದ ಸಮಯದಲ್ಲಿ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ನೀಡಿದ್ದಕ್ಕಾಗಿ ಭಾರತಕ್ಕೆ ಮುತ್ತಕಿ ತಮ್ಮ ಹೇಳಿಕೆಯಲ್ಲಿ ಧನ್ಯವಾದ ಅರ್ಪಿಸಿದರು. ಅಲ್ಲದೆ, ನಮ್ಮ ಕಷ್ಟ ಸಮಯದಲ್ಲಿ ಮೊದಲು ಭಾರತ ಪ್ರತಿಕ್ರಿಯೆ ನೀಡುತ್ತದೆ. ಅಫ್ಘಾನಿಸ್ತಾನವು ಭಾರತವನ್ನು ತನ್ನ ಆಪ್ತ ಸ್ನೇಹಿತ ಎಂದು ಪರಿಗಣಿಸುತ್ತದೆ. ಭಾರತದೊಂದಿಗೆ ಕಾಬೂಲ್ ಪರಸ್ಪರ ಗೌರವ, ವ್ಯಾಪಾರ ಮತ್ತು ಜನರಿಂದ ಜನರ ಸಂಬಂಧಗಳ ಆಧಾರದ ಮೇಲೆ ಸಂಬಂಧವನ್ನು ಬಯಸುತ್ತದೆ ಎಂದು ಮುತ್ತಕಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಸಾರ್ವಭೌಮತ್ವಕ್ಕೆ ಭಾರತ ಸಂಪೂರ್ಣವಾಗಿ ಬದ್ಧ- ಜೈಶಂಕರ್

ಪಾಕಿಸ್ತಾನವನ್ನು ಪರೋಕ್ಷವಾಗಿ ಟೀಕಿಸಿದ ವಿದೇಶಾಂಗ ಸಚಿವ ಜೈಶಂಕರ್, ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಅಲ್ಲದೆ, ಪ್ರಾದೇಶಿಕ ಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವಕ್ಕಾಗಿ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಜೈಶಂಕರ್​ ಒತ್ತಿ ತಿಳಿಸಿದ್ದಾರೆ.

ತಮ್ಮ ಹೇಳಿಕೆಯಲ್ಲಿ, ಕಾಬೂಲ್‌ನಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಲಿದೆ ಎಂದು ಜೈಶಂಕರ್ ಘೋಷಿಸಿದರು.

ಮುಂದುವರೆದು ಮಾತನಾಡಿದ ಜೈಶಂಕರ್​, ನಮ್ಮ ಎರಡೂ ರಾಷ್ಟ್ರಗಳು ಎದುರಿಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ಬೆದರಿಕೆಯ ಅಪಾಯದಲ್ಲಿವೆ. ಅಲ್ಲದೆ, ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಎದುರಿಸಲು ನಾವು ಪ್ರಯತ್ನಗಳನ್ನು ಸಮನ್ವಯಗೊಳಿಸಬೇಕು. ಭಾರತದ ಭದ್ರತಾ ಕಾಳಜಿಗಳ ಬಗ್ಗೆ ನಿಮ್ಮ ಸೂಕ್ಷ್ಮತೆಯನ್ನು ನಾವು ಪ್ರಶಂಸಿಸುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)