ಆಂಧ್ರಪ್ರದೇಶ: "ನಮ್ಮ ತೆಲುಗು ಚಲನಚಿತ್ರೋದ್ಯಮವು (Tollywood) ಬಾಲಿವುಡ್ ಮತ್ತು ಹಾಲಿವುಡ್‌ನೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದೆ. ಮುಂಬರುವ ದಿನಗಳಲ್ಲಿ ನಾವು ಹಾಲಿವುಡ್‌ನೊಂದಿಗೆ ಭಾರೀ ಪೈಪೋಟಿ ಕೊಡಲು ಮುಂದಾದರೆ ಖಂಡಿತ ನಮಗೆ ಹೊಚ್ಚ ಹೊಸ ಆವಿಷ್ಕಾರಗಳು ಬೇಕೇ ಬೇಕು" ಎಂದು ಮಾಜಿ ಸಚಿವ, ಬಿಆರ್‌ಎಸ್ ಶಾಸಕ ಹರೀಶ್ ರಾವ್ ಅಭಿಪ್ರಾಯಿಸಿದ್ದಾರೆ.
ಇದನ್ನೂ ಓದಿ: 13 ಸಾವಿರ ಅಡಿ ಎತ್ತರದಲ್ಲಿ ಮಹಾಕುಂಭದ ಧ್ವಜ ಹಾರಿಸಿದ ಹುಡುಗಿ; Viral Video ನೋಡಿ ಪ್ರಶಂಸಿದ ನೆಟ್ಟಿಗರು
ಹೈದರಾಬಾದ್‌ನಲ್ಲಿ ಡಾ. ಮಲ್ಲೇಶ್ವರ್ ಕಲ್ಪರ ವಿಎಫ್ಎಕ್ಸ್ ಮತ್ತು ಎಐ ತಂತ್ರಜ್ಞಾನದ ಹೊಸ ಶಾಖೆಯನ್ನು ಪ್ರಾರಂಭಿಸಿದರು. ಶುಕ್ರವಾರ (ಜ.10) ಸಂಜೆ ಪ್ರಸಾದ್ ಲ್ಯಾಬ್ಸ್‌ನಲ್ಲಿ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಭಾಗವಾಗಿದ್ದ ಮಾಜಿ ಸಚಿವ ಹರೀಶ್ ರಾವ್ ಮಾತನಾಡಿ, "ಆಧುನಿಕ ತಂತ್ರಜ್ಞಾನ ವಿಎಫ್ಎಕ್ಸ್ ಮತ್ತು ಎಐ ಬಹಳ ಅವಶ್ಯಕವಾಗಿದೆ. ಬಜೆಟ್ ಅನ್ನು ಕಡಿತಗೊಳಿಸಲು ಹಾಗೂ ಪ್ರೇಕ್ಷಕರನ್ನು ಆಕರ್ಷಿಸಲು ಈ ತಂತ್ರಜ್ಞಾನದ ಮೊರೆ ಹೋಗುವುದು ಅಗತ್ಯ. ಚಿತ್ರೀಕರಣ ಮತ್ತು ದೃಶ್ಯದ ಕ್ವಾಲಿಟಿ ಹೆಚ್ಚಿಸಲು ಇವು ಸಹಕಾರಿ" ಎಂದು ಹೇಳಿದರು.
"ಪ್ರಸ್ತುತ ಕಾಲಘಟ್ಟದಲ್ಲಿ ಇಡೀ ಜಗತ್ತು ಕೃತಕ ಬುದ್ಧಿಮತ್ತೆಯ ಹಿಂದೆ ವೇಗವಾಗಿ ಓಡುತ್ತಿದೆ. ಅಮೆರಿಕದಿಂದ ಭಾರತಕ್ಕೆ ಆಗಮಿಸಿ, ಇದನ್ನು ಇಲ್ಲಿ ಸ್ಥಾಪಿಸಿರುವ ಮಲ್ಲೇಶ್ವರ್ ಮತ್ತಷ್ಟು ಎತ್ತರಕ್ಕೆ ಬೆಳೆದು, ಚಲನಚಿತ್ರೋದ್ಯಮದ ಬೆಳವಣಿಗೆಗೆ ತಮ್ಮ ಕೈಲಾದಷ್ಟು ಶ್ರಮಿಸಬೇಕೆಂದು ನಾನು ಬಯಸುವೆ. ಆರ್‌ಆರ್‌ಆರ್‌ನಂತಹ ಚಿತ್ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವುದು ತೆಲುಗು ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ಟಾಲಿವುಡ್ಗೆ ಇಂತಹ ತಂತ್ರಜ್ಞಾನ ಬಂದಿರುವುದು ಶ್ಲಾಘನೀಯ" ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿಆರ್‌ಎಸ್ ಶಾಸಕ ಹರೀಶ್ ರಾವ್, ನಿರ್ದೇಶಕರಾದ ಶ್ರೀನು ವೈಟ್ಲ, ಕರುಣಾ ಕುಮಾರ್, ಪ್ರಸಿದ್ಧ ನಿರ್ಮಾಣ ಕಂಪನಿ ಪೀಪಲ್ ಮೀಡಿಯಾ ಫ್ಯಾಕ್ಟರಿಯ ನಿರ್ದೇಶಕಿ ವಂದನಾ, ನಟರಾದ ವಿಕ್ರಾಂತ್ ರೆಡ್ಡಿ ಮತ್ತು ರಘು ಕುಂಚೆ ಉಪಸ್ಥಿತರಿದ್ದರು,(ಏಜೆನ್ಸೀಸ್).