ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಷಾ ಹೈದರಾಬಾದ್ಗೆ ಭೇಟಿ ನೀಡಿದ್ದಾರೆ, ಈ ವೇಳೆ ಅವರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಮೂಲಕ ಸ್ವಾಗತಿಸಿದೆ.
ಸಿಐಎಸ್‌ಎಫ್ ರೈಸಿಂಗ್ ಡೇ ಪರೇಡ್ನಲ್ಲಿ ಅಮಿತ್ ಷಾ ಭಾಗವಹಿಸಲಿದ್ದು, ನಿರ್ಮಾ ಜಾಹಿರಾತಿನ ಪೋಸ್ಟರ್ನಲ್ಲಿ ಬಿಜೆಪಿ ನಾಯಕರಾದ ನಾರಾಯಣ ರಾಣೆ, ಸುವೇಂದು ಅಧಿಕಾರಿ, ಹಿಮಂತ ಬಿಸ್ವ ಶರ್ಮಾ, ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಫೋಟೋಗಳು ಕಂಡುಬಂದಿವೆ.
ನಿರ್ಮ ಜಾಹಿರಾತಿನಲ್ಲಿರುವ ಬಾಲಕಿಯ ಫೋಟೋಗೆ ಮೇಲೆ ಉಲ್ಲೇಖಿಸಿರುವ ಬಿಜೆಪಿ ನಾಯಕರ ಫೋಟೋ ಜೋಡಿಸಲಾಗಿದ್ದು, ಈ ನಾಯಕರೆಲ್ಲರೂ ಬಿಜೆಪಿ ಸೇರಿದ ಮೇಲೆ ಭ್ರಷ್ಟಾಚಾರ ಮುಕ್ತರಾಗಿದ್ದಾರೆ ಎಂದು ಬಿಆರ್ ಎಸ್ ವ್ಯಂಗ್ಯವಾಡಿದೆ. ಈ ರೀತಿಯ ಪೋಸ್ಟರ್ ಹಾಕುವ ಮೂಲಕ ಅಮಿತ್ ಷಾ ಅವರನ್ನು ಬಿಆರ್ ಎಸ್ ಸ್ವಾಗತಿಸಿದೆ.
ಬಿಜೆಪಿ ನಾಯಕರನ್ನೊಳಗೊಂಡ ವಾಷಿಂಗ್ ಪೌಡರ್ ಬ್ರಾಂಡ್ ನ ಮತ್ತೊಂದು ಪೋಸ್ಟರ್ ಹಾಕಿದ್ದು, ಅದರಲ್ಲಿ ಹಿಮಂತ ಬಿಸ್ವ ಶರ್ಮಾ, ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಟೈಡ್ ಡಿಟರ್ಜೆಂಟ್ ನ ಮಾದರಿಯ ಜಾಹಿರಾತಿನಲ್ಲಿ ಎಷ್ಟೇ ರೈಡ್ಗಳಾದರೂ ತೆಲಂಗಾಣ ಸಿಎಂ ಪುತ್ರಿ ಕವಿತಾ ಅವರ ಬಣ್ಣ ಬದಲಾಗಿಲ್ಲ ಎಂದು ಹೇಳಿದೆ.