ಬಳ್ಳಾರಿ: ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಇಂದು ಮತದಾನ ನಡೆಯುತ್ತಿದೆ. ರೋಗಿ, ನವದಂಪತಿ, ವೃದ್ಧರು, ಯುವಕ, ಯುವತಿಯರು ಎಲ್ಲರೂ ಅತ್ಯಂತ ಉತ್ಸಾಹದಿಂದಲೇ ಮತ ಹಾಕುತ್ತಿದ್ದಾರೆ. ವಿಕಲಾಂಗ ಯುವಕ, ಯುವತಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ವಿಕಲಾಂಗ ಎಮ್ ಡಿ ಮುಸ್ತಫಾ ಅವರು ಮತದಾನ ಮಾಡುವ ಮೂಲಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಎರಡು ಕೈ ಇಲ್ಲದ ಇವರು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
ಕೊಳಗಲ್ಲು ಗ್ರಾಮದ ಮುಸ್ತಫಾ ಮತದಾನ ಮಾಡುವ ಮೂಲಕವಾಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಿಗೆ ಎರಡೂ ಕೈ ಇಲ್ಲದ ಕಾರಣ ಚುನಾವಣಾ ಅಧಿಕಾರಿಗಳು ಕಾಲು ಬೆರಳಿಗೆ ಮತದಾನದ ಶಾಹಿ ಹಾಕಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದಲ್ಲಿ, ಗುಂಡುಮುಣುಗು ನಿವಾಸಿ ಲಕ್ಷ್ಮೀದೇವಿ ವಿಕಲಾಂಗಳಾಗಿದ್ದಾಳೆ. ಯುವತಿಗೆ ಕೂಡಾ 2 ಕೈಗಳು ಇಲ್ಲ. ಆದರೆ ಈಕೆ ಮತದಾನ ತನ್ನ ಹಕ್ಕು ಎಂದು ಮತಗಟ್ಟೆಗೆ ಬಂದು ಮತಚಲಾಯಿಸಿದ್ದಾಳೆ. ಎರಡೂ ಕೈಗಳಿಲ್ಲ ಕಾರಣ ಕಾಲು ಬೆಳರಿಗೆ ಇಂಕನ್ನು ಹಾಕಲಾಗಿದೆ.