ನ್ಯೂಸ್

ಪುಸ್ತಕ ಓದುತ್ತಾ ಗರ್ಬಾಗೆ ಸ್ಟೆಪ್ಸ್​​​; ಹುಡುಗನ ವರ್ತನೆಗೆ ನೆಟ್ಟಿಗರು ಹೇಳಿದ್ದು ಹೀಗೆ.. | Viral Video

Webdesk - Kavitha Gowda

ನವರಾತ್ರಿ ಆರಂಭವಾದ ಕೂಡಲೇ ಎಲ್ಲೆಡೆ ಭಕ್ತಿಯ ವಾತಾವರಣ ಮೂಡುತ್ತದೆ. ದುರ್ಗಾ ಪೂಜೆಯ ಮಂಟಪಗಳು, ಮಾತೆಯ ವಿಗ್ರಹಗಳು ಮತ್ತು ಮುಖ್ಯವಾಗಿ ಅದರಲ್ಲೂ ಉತ್ತರ ಭಾ ರತದ ಭಾಗದಲ್ಲಿ ಗರ್ಬಾ ನೃತ್ಯದ ವಿಡಿಯೋಗಳು ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಸದ್ಯ ಗರ್ಬಾ ವಿಡಿಯೋವೊಂದು ವೈರಲ್(Viral Video)​ ಆಗುತ್ತಿದೆ. ಇದಕ್ಕೆ ಕಾರಣ ಕೂಡ ತುಂಬಾ ಆಸಕ್ತಿದಾಯಕವಾಗಿದೆ.

ವೈರಲ್​​​ ವಿಡಿಯೋದಲ್ಲಿ ಹುಡುಗನೊಬ್ಬ ಗುಂಪಿನಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದಾನೆ. ಆದರೆ ಆತ ದಾಂಡಿಯಾ ಹಿಡಿಯುವ ಬದಲಿಗೆ ಕೈಯಲ್ಲಿ ಪುಸ್ತಕ ಹಿಡಿದು ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಆಶ್ಚರ್ಯ ಎಂದರೆ ಅವರ ಪ್ರತಿಯೊಂದು ಹೆಜ್ಜೆಯೂ ಅವರ ಸಹಚರ ನೃತ್ಯಗಾರರೊಂದಿಗೆ ಹೊಂದಿಕೆಯಾಗುತ್ತಿದೆ.

ಗಂಗೂಬಾಯಿ ಕಾಠಿವಾಡಿ ಸಿನಿಮಾದ 'ಧೋಳಿದಾ' ಹಾಡಿಗೆ ಗರ್ಬಾ ನೃತ್ಯ ಮಾಡುತ್ತಿರುವುದನ್ನು ನಾವು ನೋಡಬಹುದು. ಕುರ್ತಾ ಮತ್ತು ಜೀನ್ಸ್‌ನಲ್ಲಿ ಹುಡುಗನು ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾನೆ. ಈ ವಿಡಿಯೋವನ್ನು ಓದುವ ಮಕ್ಕಳು ಎಲ್ಲಿ ಬೇಕಾದರೂ ಅಧ್ಯಯನ ಮಾಡುತ್ತಾರೆ ಎಂಬ ಶೀರ್ಷಿಕೆ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಇದುವರೆಗೂ ಈ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದಾರೆ.ಆತ CA ವಿದ್ಯಾರ್ಥಿ ಇರಬೇಕು, ನವೆಂಬರ್​ನಲ್ಲಿ ಬರುವ ಪರೀಕ್ಷೆಗೆ ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ, ಅಧ್ಯಯನ ನಿಲ್ಲಬಾರದು, ಇಂತಹ ಮಕ್ಕಳೆ ಅಧ್ಯಯನ ಮಾಡಿದ ನಂತರವೂ ವಿಫಲರಾಗುತ್ತಾರೆ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.