ನ್ಯೂಸ್

ತರಗತಿ ವೇಳೆ ವಿದ್ಯಾರ್ಥಿಗಳಿಂದ ಮಸಾಜ್​ ಮಾಡಿಸಿಕೊಂಡ Teacher; Video Viral

ಜೈಪುರ: ಶಾಲೆಗಳು ವಿದ್ಯಾರ್ಥಿಗಳ ಪಾಲಿಗೆ ದೇವಾಲಯವಿದ್ದಂತೆ ಶಿಕ್ಷಕರು (Teacher) ದೇವರಿದ್ದಂತೆ. ವಿದ್ಯಾರ್ಥಿಗಳಿಗೆ (Students) ತಿದ್ದಿ ಬುದ್ದಿ ಹೇಳಿ ಮಾದರಿಯಾಗಬೇಕಿರುವ ಶಿಕ್ಷಕರೇ ದಾರಿ ತಪ್ಪಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಕರ್ತವ್ಯಕಲೋಪದ ಫೋಟೋ (Photo) ಹಾಗೂ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಇದೀಗ ಇದೇ ರೀತಿಯ ನಾಚಿಕೆಗೇಡಿನ ಘಟನೆಯೊಂದು ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದ್ದು, ಶಿಕ್ಷಕಿಯ (Teacher) ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮಕ್ಕಳಿಗೆ ಪಾಠ ಹೇಳಿಕೊಡುವ ಬದಲು ಶಿಕ್ಷಕಿಯೊಬ್ಬರು ತರಗತಿಯೊಳಗೆ (ClassRoom) ವಿದ್ಯಾರ್ಥಿಗಳಿಂದ ಮಸಾಜ್​ (Massage) ಮಾಡಿಸಿಕೊಂಡಿರುವ ಘಟನೆ ನಡೆದಿದ್ದು, ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಶಿಕ್ಷಕಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ (Students Future) ಏನಾಗಬೇಡ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋ (Viral Video) ನೋಡುವುದಾದರೆ ತರಗತಿಯಲ್ಲಿ ನೆಲದ ಮೇಲೆ ಮಲಗಿಕೊಂಡಿರುವ ಶಿಕ್ಷಕಿಯೊಬ್ಬರು (Teacher) ವಿದ್ಯಾರ್ಥಿಗಳಿಂದ (Student) ಮಸಾಜ್‌ (Massage) ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವೇಳೆ ಬೇರೆ ಶಿಕ್ಷಕಿಯೊಬ್ಬರಿದದು, ಅವರು ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಕುಳಿತುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಶಿಕ್ಷಕಿಯ ನಡೆಗೆ ಕಿಡಿಕಾರಿರುವ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ತಪ್ಪು ಯಾರೇ ಮಾಡಿದ್ದರು ಅಂತಹವರನ್ನು ಸುಮ್ಮನೇ ಬಿಡುವ ಮಾತಿಲ್ಲ ಎಂದು ಹೇಳಿದ್ದಾರೆ.