ನ್ಯೂಸ್

ತಿಂಡಿ ತಯಾರಿಸಲು ವ್ಯಕ್ತಿ ಮಾಡುತ್ತಿರುವ ಕೆಲಸ ವೈರಲ್​​​​; ವಿಡಿಯೋ ನೋಡಿ ನೆಟ್ಟಿಗರು ಗರಂ | Train Video Viral

ರೈಲಿನಲ್ಲಿ ಪ್ರಯಾಣಿಸುವಾಗ ಟೀ...ಟೀ.., ಗರಮ ಗರಮ್​​ ಭೇಲ್​​ ಹೀಗೆ ಬೇರೆ ಬೇರಿ ತಿಂಡಿಯನ್ನು ಮಾರುತ್ತಾ ಬರುವವರನ್ನು ನೋಡಿರುತ್ತೇವೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿ ರೈಲಿನಲ್ಲಿ ಈ ರೀತಿಯ ತಿಂಡಿ ಖರೀದಿಸಿ ತಿಂದಿರುವವರಿಗೆ ಶಾಕ್​​​ ಆಗಬಹುದು. ಎಲ್ಲೆಡೆ ಇದೇ ರೀತಿ ನಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ಇನ್ಮುಂದೆ ಖರೀದಿಸುವ ಮುನ್ನ ಎಚ್ಚರದಿಂದ ಇರುವುದು ಮುಖ್ಯವಾಗುತ್ತದೆ.

ವೈರಲ್​ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ರೈಲಿನ ಜಾಯಿಂಟ್‌ನಲ್ಲಿ ಅಂದರೆ ಎರಡು ಕೋಚ್‌ಗಳ ನಡುವಿನ ಸ್ಥಳದಲ್ಲಿ ರೈಲಿನ ವಾಶ್ ರೂಮ್​ ಬಳಿ ಕುಳಿತಿರುವುದನ್ನು ಕಾಣಬಹುದು. ನೆಲದ ಮೇಲೆ ಸಣ್ಣ ಪ್ಲಾಸ್ಟಿಕ್ ಹಾಳೆ ಹಾಸಿ ಅದರ ಮೇಲೆ ಈರುಳ್ಳಿ ಮತ್ತು ತಿಂಡಿಗೆ ಬೇಕಿರುವ ಇತರ ಪದಾರ್ಥಳನ್ನು ಕತ್ತರಿಸುತ್ತಿದ್ದಾನೆ. ಸಮೀಪದಲ್ಲಿ ಒಂದು ಬಕೆಟ್ ಇದ್ದು, ಅದರಲ್ಲಿ ಬೇಳೆ ಇತ್ಯಾದಿಗಳು ಗೋಚರಿಸುತ್ತವೆ. ಇದರಿಂದ ವ್ಯಕ್ತಿಯು ರೈಲಿನಲ್ಲಿ ತಿರುಗಾಡುವಾಗ ಬಿಸಿಬೇಳೆ ಅಥವಾ ಬೆಂಡೆಕಾಯಿ, ಬೇಲ್ ಇತ್ಯಾದಿಗಳನ್ನು ಮಾರಾಟ ಮಾಡಬಹುದೆಂದು ಅಂದಾಜಿಸಲಾಗಿದೆ. ಆದರೆ ಅದರ ಮಸಾಲಾವನ್ನು ತಯಾರಿಸುವ ಈ ಪ್ರಕ್ರಿಯೆಯು ತುಂಬಾ ಅನೈರ್ಮಲ್ಯವಾಗಿದೆ. ಆದರೆ ಈ ವಿಡಿಯೋ ಎಲ್ಲಿಂದ ಮತ್ತು ಯಾವ ರೈಲಿನಿಂದ ಬಂದಿದೆ ಎಂದು ತಿಳಿದುಬಂದಿಲ್ಲ.

18 ಸೆಕೆಂಡ್​​ ಇರುವ ಈ ವಿಡಿಯೋವನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ರೈಲಿನಲ್ಲಿ ಪ್ರಯಾಣಿಸುವಾಗ ತಪ್ಪಾಗಿಯೂ ಸಹ ಈ ತಿಂಡಿ ತಿನ್ನಬೇಡಿ, ರೈಲಿನಲ್ಲಿ ಏನನ್ನೂ ತಿನ್ನಬೇಡಿ, ಇನ್ನು ಮುಂದೆ ರೈಲಿನಲ್ಲಿ ಆಹಾರದ ರುಚಿ ನೋಡುವುದನ್ನು ನಿಲ್ಲಿಸಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​​​​)