ಭಾರತದ ಸಿಹಿತಿಂಡಿಗಳಲ್ಲಿ ಜಿಲೇಬಿಗೆ ಉನ್ನತ ಸ್ಥಾನವಿದೆ. ಅದನ್ನು ತಯಾರಿಸುವುದು ಸುಲಭ ಹಾಗೂ ಗರಿಗರಿಯಾಗಿ ರುಚಿಯಾಗಿರುವುದರಿಂದ ಇದನ್ನು ಇಷ್ಟ ಪಡದವರೆ ಇಲ್ಲ. ಅಂದ್ಹಾಗೆ ಭಾರತದಲ್ಲಿ ಇಷ್ಟು ಜನಪ್ರಿಯವಾಗಿರುವ ಜಿಲೇಬಿಯನ್ನು ವಿದೇಶಿಯರು ಇಷ್ಟಪಟ್ಟು ತಿನ್ನುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ಇದನ್ನು ಓದಿ: ರೀಲ್ನಲ್ಲಿ ರಿಯಲ್ ಆಗಿ ಕೈ-ಕೈ ಮಿಲಾಯಿಸಿದ ರಾಮ-ರಾವಣ ಪಾತ್ರಧಾರಿ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ | Viral Video
ವೈರಲ್ ವಿಡಿಯೋದಲ್ಲಿ ಭಾರತ ಪ್ರವಾಸದಲ್ಲಿರುವ ರಷ್ಯಾದ ಮಾರಿಯಾ ಚುಗುರೋವಾ ಅವರು ಜಿಲೇಬಿ ತಿನ್ನುತ್ತಿರುವುದನ್ನು ನೋಡಬಹುದು. ಅವರು ಜಿಲೇಬಿ ಸ್ಟಾಲ್ಗೆ ಹೋಗಿ 20 ರೂಪಾಯಿಗೆ ಜಿಲೇಬಿ ಖರೀದಿಸುತ್ತಾರೆ. ಬಳಿಕ ಒಂದು ಬೈಟ್ ತಿಂದು ಸಂತೋಷದಿಂದ ಬಹಳ ಚೆನ್ನಾಗಿದೆ, ಸಿಹಿಯಾಗಿದೆ ಎಂದು ಪ್ರತಿಕ್ರಿಯಿಸುವುದನ್ನು ನೋಡಬಹುದು.
ಬಳಿಕ ಅವರು ಸುತ್ತಮುತ್ತಲಿನ ಜನರಿಗೆ ಜಿಲೇಬಿ ಹಂಚಲು ಹೋಗುತ್ತಾರೆ. ಜಿಲೇಬಿಯನ್ನು ತೆಗೆದುಕೊಳ್ಳಲು ಇತರರು ನಿರಾಕರಿಸುತ್ತಾರೆ. ತಾಯಿಯೊಂದಿಗೆ ಕುಳಿತಿದ್ದ ಮಗುವೊಂದು ಜಿಲೇಬಿ ತೆಗೆದುಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.
1 ನಿಮಿಷದ ಈ ವಿಡಿಯೋವನ್ನು ಹಂಚಿಕೆಯಾದಗಿನಿಂದ ಇದುವರೆಗೂ 8.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 65 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚಿಕೊಂಡಿದ್ದಾರೆ. ವಿಡಿಯೋ ನೋಡಿ ಜಿಲೇಬಿಯನ್ನು ಪ್ರಯತ್ನಿಸಿದ್ದಕ್ಕಾಗಿ ರಷ್ಯಾದ ಮಹಿಳೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಒಮ್ಮೆ ಮೊಸರಿನೊಂದಿಗೆ ಜಿಲೇಬಿಯನ್ನು ಪ್ರಯತ್ನಿಸಿ ನೋಡಿ ನೀವು ಅದನ್ನು ಆನಂದಿಸದಿದ್ದರೆ ನನಗೆ ತಿಳಿಸಿ, ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಿದೆ, ನೀವು ನಿಜವಾಗಿಯೂ ಬಹಳ ಒಳ್ಳೆಯವರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.