ನ್ಯೂಸ್

ವಾಟರ್​ ಪೈಪ್​​ನಲ್ಲಿ ನೀರು ಬರ್ತಿದ್ಯಾ?; ತಿಳಿಯಲು ಮಾಡಿದ ಜುಗಾಡ್​​ ಟ್ರಿಕ್ ವೈರಲ್​​ | Viral Video​​​

ಇಸ್ಲಾಮಾಬಾದ್​​: ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ದುಃಖ ತರಿಸಬಹುದು, ಮತ್ತೆ ಕೆಲವೊಂದು ಎಂಟರ್​ಟೈನ್​ಮೆಂಟ್​ ನೀಡಬಹುದು, ಇನ್ನು ಕೆಲವು ನಗೆಗಡಲಲ್ಲಿ ನಿಮ್ಮನ್ನು ತೇಲಿಸುಬಹುದು. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್( Viral Video​​​)​ ಆಗುತ್ತಿದೆ. ಅದು ವಾಟರ್​ ಸಪ್ಲೈ ಪೈಪ್​​ನಿಂದ ನೀರು ಬರುತ್ತಿದೆ ಎಂದು ತಿಳಿಯಲು ಮಾಡಿರುವ ಜುಗಾಡ್​ ಟ್ರಿಕ್​​​​ ಅನ್ನು ನೋಡಬಹುದು.

ವೈರಲ್​ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಾತನಾಡುತ್ತಾ ಡೆಮೊ ತೋರಿಸುವುದನ್ನು ನೋಡಬಹುದು. ನೀರು ಸರಬರಾಜು ಪೈಪ್​ನಲ್ಲಿ ಕೊಳವೆ ಮಾದರಿಯ ಒಂದನ್ನು ಸಿಂಪಡಿಸಿದ್ದಾರೆ. ಅದು ಬಾರಿ ಸೌಂಡ್​​ ಮಾಡುವುದನ್ನು ನೀವು ಕಾಣಬಹುದು. ನೀರು ಬರುವ ಮುನ್ನ ಪೈಪ್​​​​​ಗೆ ಅಳವಡಿಸಿರುವ ಈ ಕೊಳವೆಯೂ ಸೌಂಡ್​ ಮಾಡುತ್ತದೆ ಎಂದು ಆ ಮಹಿಳೆ ವಿವರಿಸಿದ್ದಾರೆ. ಒತ್ತಡದಿಂದಾಗಿ ರಿಂಗಿಂಗ್ ಪ್ರಾರಂಭವಾಗುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಅಂದ್ಹಾಗೆ ಈ ವಿಡಿಯೋವನ್ನು ಜುಲೈನಲ್ಲಿ ಶೇರ್​ ಮಾಡಲಾಗಿದೆ. ಈ ವಿಡಿಯೋ ಪಾಕಿಸ್ತಾನದ್ದು ಎನ್ನಲಾಗಿದೆ. ನೀರು ಬರುವುದನ್ನು ಕಾಯುವುದು ಈಗ ಮುಗಿದಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇದುವರೆಗೂ ಈ ವಿಡಿಯೋ 52 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ.

ವಿಡಿಯೋ ನೋಡಿದ ನೆಟ್ಟಿಗರು ನಾಸಾದಿಂದ 1.5 ಕೋಟಿ ಮಿಸ್ಡ್ ಕಾಲ್‌ಗಳನ್ನು ಸ್ವೀಕರಿಸಲಾಗಿದೆ, ದುಃಖಕರ ವಿಷಯವೆಂದರೆ ಈಗ ಈ ವಿಡಿಯೋ ಭಾರತವನ್ನು ತಲುಪಿದೆ, ಮಗ ಜುಗಾಡ್​​ನಲ್ಲಿ ಕಡಿಮೆಯಿಲ್ಲ, ಈಗ ಈ ತಂತ್ರಜ್ಞಾನ ಭಾರತಕ್ಕೂ ಬಂದಿದೆ, ಈಗ ಈ ತಂತ್ರಜ್ಞಾನ ನಾಸಾ ತಲುಪಲಿದೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)