ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಜನರು ಹೆಚ್ಚಾಗಿ ತಂಪು ಪಾನೀಯ ಹಾಗೂ ಐಸ್ಕ್ರೀಂ ಮೊರೆ ಹೋಗುತ್ತಿದ್ದಾರೆ. ಐಸ್ಕ್ರೀಂನಲ್ಲಿ ತರಹೇವಾರಿ ಫ್ಲೇವರ್ಗಳಿದ್ದು, ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ಐಸ್ಕ್ರೀಂಅನ್ನು ಎಂದಾದರು ನೀವು ಮೊಟ್ಟೆಯೊಂದಿಗೆ ಸೇವಿಸಿದ್ದೀರಾ ಅದು ಕೂಡ ಉಪ್ಪಿನ ಜೊತೆಗೆ ಎಂದರೆ ನೀವು ಶಾಕ್ ಆಗುವುದಂತು ಖಂಡಿತಾ.
ಈ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿ ಬಾತುಕೋಳಿಯ ಮೊಟ್ಟೆಗೆ ಉಪ್ಪನ್ನು ಸೇರಿಸಿ ಐಸ್ಕ್ರೀಂ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಆಶ್ಚರ್ಯಚಕಿತರಾಗಿದ್ದಾರೆ.
ತಮ್ಮ ಫುಡ್ಬ್ಲಾಗ್ ಹಾಗೂ ವಿಭಿನ್ನ ಪ್ರಯೋಗಗಳ ಮೂಲಕ ಹೆಸರುವಾಸಿಯಾಗಿರುವ ಕ್ಯಾಲ್ವಿನ್ ಲೀ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಐಸ್ಕ್ರೀಂ ಜೊತೆಗೆ ಬಾತುಕೋಳಿ ಮೊಟ್ಟೆಗಳನ್ನು ಸೇವಿಸುತ್ತಿರುವುದನ್ನು ನೋಡಬಹುದಾಗಿದೆ. ಸಾಲ್ಟೆಡ್ ಎಗ್ ಐಸ್ಕ್ರೀಂ ಖಾದ್ಯವನ್ನು ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕ್ಯಾಲ್ವಿನ್ ಲೀ ಮಾತ್ರತಮ್ಮ ಪ್ರಯೋಗವನ್ನು ಹಾಡಿ ಹೊಗಳಿದ್ದಾರೆ. ಮತ್ತು ಜನರಿಗೆ ಪ್ರಯತ್ನಿಸುವಂತೆ ಸಲಹೆ ನೀಡಿದ್ದಾರೆ.