ನ್ಯೂಸ್

ಟ್ರಾಫಿಕ್​ ಕ್ಲಿಯರ್​ ಮಾಡಲು ರೈಫಲ್​ ಹಿಡಿದು ಬಂದ ಆಸಾಮಿ; ಮುಂದೆನಾಯ್ತು ನೀವೇ ನೋಡಿ | Viral Video

ಲಖನೌ: ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವ ಜನರ ನಡುವಿನ ಜಗಳಗಳ ಎಷ್ಟೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ತಮ್ಮ ವಾಹನಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರಿಂದ ಜನರು ಸಣ್ಣ ವಿಷಯಗಳಿಗೂ ಜಗಳವಾಡುತ್ತಾರೆ. ಆದರೆ ವ್ಯಕ್ತಿಯೊಬ್ಬರು ರೈಫಲ್​​ ಹಿಡಿದು ಟ್ರಾಫಿಕ್ ಕ್ಲಿಯರ್ ಮಾಡಲು ರಸ್ತೆಗೆ ಬಂದಿದ್ದಾರೆ. ​​​ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗುತ್ತಿದೆ. ಈ ವಿಡಿಯೋ ಕಾನ್ಪುರದಿಂದ ಬಂದಿದೆ ಎನ್ನಲಾಗಿದೆ.

ವೈರಲ್​​​ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಹೂಗಳನ್ನು ಖರೀದಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಅಕ್ಕಪಕ್ಕದಲ್ಲಿ ನಿಂತಿದ್ದ ಜನರು ಟ್ರಾಫಿಕ್​ ಜಾಮ್​ ಆಗುತ್ತಿರುವುದರಿಂದ ವಾಹನ ತೆಗೆಯುವಂತೆ ಮನವಿ ಮಾಡಿದ್ದಾರೆ. ಆದರೆ ಇದ್ಯಾವುದನ್ನು ಕೇಳಿಸಿಕೊಳ್ಳದೆ ಅವರು ಯಾವುದೇ ಚಿಂತೆಯಿಲ್ಲದೆ ಶಾಪಿಂಗ್‌ನಲ್ಲಿ ನಿರತರಾಗಿದ್ದಾರೆ. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬರುತ್ತಾರೆ. ಆತನ ಕೈಯಲ್ಲಿ ರೈಫಲ್ ಹಿಡಿದಿರುವುದನ್ನು ನೋಡಬಹುದು. ಕೆಲವು ನಿಮಿಷಗಳ ವಾದದ ನಂತರ ಗಲಾಟೆ ಪ್ರಾರಂಭವಾಗುತ್ತದೆ. ತಕ್ಷಣವೇ ಅಲ್ಲಿದ್ದ ಜನರು ರೈಫಲ್​​ ಹಿಡಿದಿದ್ದವರನ್ನು ಸಮಾಧಾನ ಮಾಡಿ ಮನವೊಲಿಸಿ ಅಲ್ಲಿಂದ ಕಳುಹಿಸುತ್ತಾರೆ.

ಇದಲ್ಲದೇ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳು ಜಾಮ್‌ನಲ್ಲಿ ಸಿಲುಕಿಕೊಂಡಿರುವುದು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ವೈರಲ್​ ಆದಾಗಿನಿಂದ ಇದುವರೆಗೂ 4.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 3.5 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಅಲ್ಲಿ ಅಪಾಯಕಾರಿ ಜನರಿದ್ದಾರೆ, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು, ರೈಫಲ್‌ನೊಂದಿಗೆ ಹೂ ಖರೀದಿಸಲು ಹೋಗಿದ್ದರೆ ಹೂವುಗಳು ಸಹ ಉಚಿತವಾಗಿ ಲಭಿಸುತಿತ್ತು,ಇದು ಭಾರತ ಇಲ್ಲಿ ಎಲ್ಲರೂ ಪುಂಡರಾಗುತ್ತಾರೆ, ಈ ಜನರು ಕುಡಿದು ಗಲಾಟೆ ಮಾಡುತ್ತಾರೆ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)