ನ್ಯೂಸ್

VIRAL VIDEO: ನಡುರಸ್ತೆಯಲ್ಲೇ ಕಾರಿನ ರೂಫ್‌ ತೆರೆದ ಪ್ರೇಮಿಗಳು ಪರಸ್ಪರ ಚುಂಬನ; ತರಾಟೆಗೆ ತೆಗೆದುಕೊಂಡ ನೆಟ್ಟಿಗರು!

ತೆಲಂಗಾಣ: ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರೇಮಿಗಳು ಹೆದ್ದಾರಿಯ ಮಧ್ಯೆ ಕಾರಿನ ರೂಫ್​ ತೆರೆದು ಬಹಿರಂಗವಾಗಿ ಪರಸ್ಪರ ಚುಂಬಿಸಿದ ದೃಶ್ಯವನ್ನು ಹಿಂಬದಿಯಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಸದ್ಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಪ್ರೇಮಿಗಳುನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಶನಿವಾರ (ಅ.14) ತೆಲಂಗಾಣದ ಹೈದರಾಬಾದ್‌ನ ಪಿ.ವಿ. ನರಸಿಂಹರಾವ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಜನನಿಬಿಡ ರಸ್ತೆಯಲ್ಲಿ ತಮ್ಮ ಕಾರಿನ ಸನ್​ ರೂಫ್​ ತೆರೆದ ಪ್ರೇಮಿಗಳು ಪರಸ್ಪರ ಚುಂಬಿಸುತ್ತಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣವನ್ನು ಸುತ್ತುವರಿದಿದ್ದು, ವಿಡಿಯೋ ನಗರದ ಪೊಲೀಸ್ ಅಧಿಕಾರಿಗಳ ಗಮನಕ್ಕೆ ನೀಡಲಾಗಿದೆ. ದೃಶ್ಯ ನೋಡಿದ ನೆಟ್ಟಿಗರು, ರಸ್ತೆ ಸುರಕ್ಷತೆಯನ್ನು ಉಲ್ಲಂಘನೆ ಮಾಡುವವರ ವಿರುದ್ಧ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ವಿನಂತಿಸಿದ್ದಾರೆ,(ಏಜೆನ್ಸೀಸ್).