ನ್ಯೂಸ್

ಭಿಕ್ಷೆ ಬೇಡುತ್ತಿದ್ದ ಮಗುವಿಗೆ ಕಿರುಕುಳ; VIral Video ನೋಡಿ ಪೊಲೀಸರು ಮಾಡಿದ್ದು ಮಾತ್ರ..

ಅಮರಾವತಿ: ಆಂಧ್ರಪ್ರದೇಶದ ಕರ್ನೂಲ್‌ನಿಂದ ನವೆಂಬರ್ 20ರಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೈರಲ್​ ವಿಡಿಯೋದಲ್ಲಿ ಪುಟ್ಟ ಮಗುವೊಂದು ಮೈಮೇಲೆ ಬಣ್ಣ ಬಳಿದುಕೊಂಡು ರಸ್ತೆಬದಿಯಲ್ಲಿ ಕುಳಿತು ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಹಂಚಿಕೊಂಡ ಬಳಕೆದಾರರು ಕರ್ನೂಲ್ ನಗರದ ಡ್ರೆಸ್ ಸರ್ಕಲ್ ಶಾಪಿಂಗ್ ಮಾಲ್ ಬಳಿ ಪುಟ್ಟ ಮಗುವಿಗೆ ಥಳಿಸಿದ್ದಾರೆ ಎಂದು ಹೇಳಿದ್ದಾರೆ.(VIral Video)

ಕರ್ನೂಲ್​​​ನಲ್ಲಿನ ಒಂದು ರಸ್ತೆಬದಿ ಕುಳಿತಿದ್ದ ಮಗುವಿಗೆ ಕೆಟ್ಟದಾಗಿ ಥಳಿಸಲಾಗಿದ್ದು, ಊಟವನ್ನೂ ನೀಡಿಲ್ಲ. ಆದಷ್ಟು ಬೇಗ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು ವಿಡಿಯೋ ಹಂಚಿಕೊಂಡವರು ಬರೆದುಕೊಂಡಿದ್ದಾರೆ.

ಘಟನೆಯನ್ನು ಗಮನದಲ್ಲಿಟ್ಟುಕೊಂಡು ಲೋಕೇಶ್ ನಾರಾ ಅವರು ತಮ್ಮ ತಂಡಕ್ಕೆ ಮಗುವಿಗೆ ತಕ್ಷಣ ಭದ್ರತೆ ಒದಗಿಸುವಂತೆ ಟ್ವೀಟ್ ಮಾಡಿದ್ದರು.

ಮಾನವ ಸಂಪನ್ಮೂಲ ಸಚಿವ ಲೋಕೇಶ್ ನಾರಾ ಅವರ ಪೋಸ್ಟ್ ನಂತರ ಸ್ಥಳೀಯ ಪೊಲೀಸರು ಈ ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ. ಕರ್ನೂಲ್ ಪೊಲೀಸರು ಕೂಡ ಈ ರೀತಿ ಭಿಕ್ಷೆ ಬೇಡುವ 9 ಮಂದಿ ಮಕ್ಕಳಿದ್ದಾರೆ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಆ ಪೈಕಿ ಒಂದು ಮಗುವಿನ ವಿಡಿಯೋ ವೈರಲ್ ಆಗುತ್ತಿದೆ. ಇದರ ಹಿಂದೆ ಯಾರ ಕೈವಾಡವಿದೆಯೋ ಅವರನ್ನು ಬಿಡುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿನ ಈ ವಿಡಿಯೋ ನೋಡಿದವರು ಇದು AI ರಚಿತ ಎಂದು ಹೇಳುತ್ತಿದ್ದರು. ರಸ್ತೆಬದಿಯಲ್ಲಿ ಬಕೆಟ್ ಹಿಡಿದು ಕುಳಿತಿದ್ದ ಹುಡುಗನ ಬಳಿ ವಾಹನಗಳು ಹಾದು ಹೋಗುತ್ತಿವೆ. ಮತ್ತು ಆ ಎಲ್ಲಾ ವಸ್ತುಗಳು 2 ನೆರಳುಗಳನ್ನು ಹೊಂದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅದರಲ್ಲಿ ಮೊದಲ ನೆರಳು ಎರಡನೆಯದಕ್ಕಿಂತ ಗಾಢವಾಗಿರುತ್ತದೆ. ಸಂಜೆ ವೇಳೆ ವಿಡಿಯೋ ರೆಕಾರ್ಡ್ ಆಗಿರಬಹುದು ಎಂದು ಇದು ಸೂಚಿಸುತ್ತದೆ. ಕ್ಲಿಪ್‌ನಲ್ಲಿ ಬೈಕ್ ಮುಂದೆ ಚಲಿಸುವಾಗ ಅದರ ನೆರಳು ಕೂಡ ಮುಂದಕ್ಕೆ ಚಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವೈರಲ್ ವಿಡಿಯೋವನ್ನು AI ಬಳಕೆಯಿಂದ ಮಾಡಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಇಂದಿಗೂ AI ಅಂತಹ ಪರಿಪೂರ್ಣತೆಯೊಂದಿಗೆ ಚಲಿಸುವ ವಸ್ತುಗಳ ನೆರಳುಗಳನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ತನಿಖೆ ಬಳಿಕ ವಿಡಿಯೋ ಕರ್ನೂಲ್‌ನಿಂದ ಬಂದಿದೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​​)