ನ್ಯೂಸ್

ಪತ್ರಕರ್ತ ವಿಕ್ರಮ್ ಜೋಶಿ ಶೂಟೌಟ್ ಪ್ರಕರಣ: ಕೊನೆಯ ಆರೋಪಿ ಬಂಧನ

sspmiracle1982

ಘಾಜಿಯಾಬಾದ್: ಪತ್ರಕರ್ತ ವಿಕ್ರಮ್ ಜೋಶಿ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ಗಾಜಿಯಾಬಾದ್ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಜೋಶಿ (35), ಜುಲೈ 20 ರ ರಾತ್ರಿ ವಿಜಯ್ ನಗರದ ಮಾತಾ ಕಾಲೋನಿಯಲ್ಲಿರುವ ತನ್ನ ಮನೆಯ ಬಳಿ ತನ್ನ ಇಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಗೂಂಡಾಗಳು ತಲೆಗೆ ಗುಂಡು ಹಾರಿಸಿದ್ದರು.

ಗಂಭೀರ ಗಾಯಗೊಂಡಿದ್ದ ಜೋಶಿ ಜುಲೈ 22 ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವಿಗೀಡಾಗಿದ್ದರು.

"ಘಟನೆಯ ನಂತರವಷ್ಟೇ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಓರ್ವ ಆರೋಪಿ ಆಕಾಶ್ ಬಿಹಾರಿ ಪರಾರಿಯಾಗಿದ್ದ ಮತ್ತು ಆತನಿಗೆ ಶೋಧ ಕಾರ್ಯ ನಡೆಸಲಾಗಿತ್ತು.

ಆ ಕೊನೆಯ ಆರೋಪಿಯನ್ನು ಹುಡುಕಿಕೊಟ್ಟವರಿಗೆ 25 ಸಾವಿರ ರೂ.ಗಳ ಬಹುಮಾನವನ್ನೂ ಘೋಷಿಸಲಾಗಿತ್ತು. ಆಕಾಶ್‌ನನ್ನು ಬುಧವಾರ ಮುಂಜಾನೆ ಬಂಧಿಸಲಾಗಿದೆ

ಗಾಜಿಯಾಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.

ಈ ಹಿಂದೆ ದುಷ್ಕರ್ಮಿಗಳ ವಿರುದ್ಧ ನೀಡಿದ ದೂರುಗಳ ಬಗ್ಗೆ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೋಶಿಯ ಕುಟುಂಬ ಆರೋಪಿಸಿತ್ತು.

ಈ ಪ್ರಕರಣದ ಎಲ್ಲ ಆರೋಪಿಗಳನ್ನು ಈಗ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಜುಲೈ 16 ರಂದು ಆರೋಪಿಗಳು ಮತ್ತು ಜೋಶಿ ಮಧ್ಯೆ ಜಗಳವಾಗಿದ್ದು.ಆಗ ಆರೋಪಿಗಳಲ್ಲಿ ಒಬ್ಬ ಗಾಯಗೊಂಡಿದ್ದ..

ಜೋಶಿಯನ್ನು ಗುಂಡಿಕ್ಕಿ ಕೊಂದಾಗ ಆ ಪ್ರದೇಶದ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಯನ್ನು ಗಾಜಿಯಾಬಾದ್ ಪೊಲೀಸರು ಅಮಾನತುಗೊಳಿಸಿದ್ದರು. ಪ್ರಕರಣದ ತನಿಖೆಯನ್ನು ಸ್ಥಳೀಯ ವಿಜಯ್ ನಗರ ಪೊಲೀಸ್ ಠಾಣೆಯಿಂದ ಕೊಟ್ವಾಲಿ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.