ನ್ಯೂಸ್

‘ದೇವದಾಸ್​​‘ ಕ್ಲೈಮ್ಯಾಕ್ಸ್​ನಲ್ಲಿ ಶಾರೂಖ್​ ಮಾಡಿದ್ದು ಮಾತ್ರ..; ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಹೇಳಿದ್ದೇನು? | Vikramaditya Motwane

ಮುಂಬೈ: ಸಲ್ಮಾನ್​ ಖಾನ್​ ಅಭಿನಯದ ‘ಹಮ್ ದಿಲ್ ದೇ ಚುಕೆ ಸನಮ್’ ಮತ್ತು ಶಾರೂಖ್​​ ಖಾನ್​ ನಟನೆಯ ‘ದೇವದಾಸ್​​’ ಆ ಸಮಯದಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿಯವರ ನೆರವಿನೊಂದಿಗೆ ವಿಕ್ರಮಾದಿತ್ಯ ಮೋಟ್ವಾನೆ(Vikramaditya Motwane) ತನ್ನ ನಿರ್ದೇಶನದ ವೃತ್ತಿಜೀವನವನ್ನು ಪ್ರಾರಂಭಿಸಿದರು .

ಇತ್ತೀಚಿನ ಸಂದರ್ಶನವೊಂದರಲ್ಲಿ ವಿಕ್ರಮಾದಿತ್ಯ ಮೋಟ್ವಾನೆ ಅವರು ಬಾಲಿವುಡ್​​ ಕಿಂಗ್​​ ಖಾನ್​​​​​ ಅವರೊಂದಿಗಿನ ಕೆಲಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಶಾರೂಖ್​​ ಅವರ ಮನಸ್ಸು ಚಿತ್ರೀಕರಣದ ಸಮಯದಲ್ಲಿ ಎಂತಹ ಪರಿಸ್ಥಿಯಲ್ಲೆ ಇದ್ದರೂ ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

ಶಾರೂಖ್ ಖಾನ್ ಅವರು ಅದ್ಭುತ ನಟ ಎಂದು ಬಣ್ಣಿಸಿದ್ದಾರೆ. ನಾನು ನಿಮೆಗೆ ಒಂದು ಘಟನೆಯನ್ನು ಹೇಳುತ್ತೇನೆ. ನಾವು ದೇವದಾಸ್‌ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಶೂಟ್ ಮಾಡುತ್ತಿದ್ದೆವು. ಆ ಸಿನಿಮಾದಲ್ಲಿ ಶಾರೂಖ್​​​ ಪಾತ್ರವು ಸಾಯುತ್ತದೆ. ಐಶ್ವರ್ಯಾ ರೈ ಅವರು ದೇವದಾಸ್​​ ಬಳಿಗೆ ಓಡಿ ಬರುತ್ತಾರೆ. ಮರದ ಕೆಳಗೆ ಮಲಗಿದ್ದ ಶಾರೂಖ್​ಖಾನ್​ ಅವರು ಇದ್ದಕ್ಕಿದ್ದಂತೆ ಜೇನುತುಪ್ಪ ತರಬಹುದೇ ಎಂದು ಸಹಾಯಕರನ್ನು ಕೇಳಿದರು. ಏತಕ್ಕಾಗಿ ಎಂದು ನಮಗೆ ತಿಳಿದಿರಲಿಲ್ಲ, ಆದರೂ ಅವರಿಗೆ ಅದನ್ನು ನೀಡಿದೆವು.

ಬಳಿಕ ಅವರು ಜೇನುತುಪ್ಪವನ್ನು ಮುಖಕ್ಕೆ ಹಂಚಿಕೊಂಡರು. ಸಾಯುತ್ತಿರುವ ಮನುಷ್ಯನ ಮುಖದ ಮೇಲೆ ನೊಣಗಳು ಕುಳಿತಿರುವಂತೆ ತನ್ನ ಮುಖದ ಮೇಲೆ ನೊಣಗಳು ಕೂರಬೇಕು ಎಂದು ಬಳಿಕ ಅವರೇ ಉತ್ತರಿಸಿದರು. ಇದು ಸಂಪೂರ್ಣವಾಗಿ ಅವನ ಕಲ್ಪನೆಯಾಗಿತ್ತು. ಸಾಮಾನ್ಯವಾಗಿ ದೃಶ್ಯವನ್ನು ಉತ್ತಮಗೊಳಿಸುವ ವಿಷಯಗಳ ಬಗ್ಗೆ ಯೋಚಿಸುವುದು ನಿರ್ದೇಶಕನ ಕರ್ತವ್ಯವಾಗಿರುತ್ತದೆ ಎಂದು ಮೋಟ್ಟಾನೆ ಹೇಳಿದರು.

ಆದರೆ ಶಾರೂಖ್​​ ಖಾನ್​ ಸಿನಿಮಾಗಳಲ್ಲಿ​ ದೃಶ್ಯವನ್ನು ಉತ್ತಮಗೊಳಿಸಲು ಬದಲಾವಣೆಗಳನ್ನು ಮಾಡುವುದರಿಂದ ಎಂದಿಗೂ ದೂರವಿರುವುದಿಲ್ಲ. ಆ ಮನುಷ್ಯನ ಮನಸ್ಸು ನಿರಂತರವಾಗಿ ಈ ಕ್ಷಣವನ್ನು ಹೇಗೆ ಉತ್ತಮಗೊಳಿಸಬಹುದು ಎಂದು ಯೋಚಿಸುತ್ತಿರುತ್ತದೆ. ಶಾರೂಖ್​​ ಖಾನ್ ಅವರು ಚಲನಚಿತ್ರಗಳಲ್ಲಿ ಮಾಡುವ ಸಣ್ಣ ಬದಲಾವಣೆಯು ಸಿನಿಮಾದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಜತೆಗೆ ಅವರು ಎಲ್ಲರಿಗೂ ತುಂಬಾ ವಿಶೇಷ ಭಾವನೆ ಮೂಡಿಸುತ್ತಾರೆ ಎಂದು ಹೇಳಿದರು.(ಏಜೆನ್ಸೀಸ್​)