ನ್ಯೂಸ್

ವಿಜಯವಾಣಿ ವತಿಯಿಂದ ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ಆ್ಯಂಡ್ ಇಂಟೀರಿಯರ್ಸ್ ಎಕ್ಸ್​ಪೋ

ಹುಬ್ಬಳ್ಳಿ: ಕನ್ನಡದ ನಂ. ೧ ದಿನಪತ್ರಿಕೆ ವಿಜಯವಾಣಿಯಿಂದ ಹುಬ್ಬಳ್ಳಿಯ ರಾಯ್ಕರ್ ಗ್ರೌಂಡ್​ನಲ್ಲಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಆ್ಯಂಡ್ ಇಂಟೀರಿಯರ್ಸ್ ಎಕ್ಸಪೋ ಅನ್ನು ವಿಜಯಾನಂದ ಟ್ರಾವೆಲ್ಸ್ ಪ್ರೈವೆಟ್​ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕರಾದ ಶಿವ ಸಂಕೇಶ್ವರ ಉದ್ಘಾಟಿಸಿದರು.

ಸ್ಕೈಟೌನ್ ಗ್ರೂಪ್ ಎಂಡಿ ಚೇತನ ಪವಾರ, ಮ್ಯಾನೇಜಿಂಗ್ ಪಾರ್ಟ್​ನರ್ ಸಾಯಿಪ್ರಸಾದ ಕಲಬುರ್ಗಿ, ಸ್ವರ್ಣ ಗ್ರೂಪ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಶ್ರೀ ದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಎಂಡಿ ವೀರೇಶ ಉಂಡಿ, ಶ್ರೀ ದತ್ತ ಇನ್ಪ್ರಾಟೆಕ್ ಪ್ರೈ.ಲಿ. ಎಂಡಿ ಪ್ರಕಾಶ ಜೋಶಿ ಹಾಗೂ ಇತರರು ಉಪಸ್ಥಿತರಿದ್ದರು.


ಮೇ‌ 3, 4 ಮತ್ತು 5ರಂದು ನಡೆಯಲಿರುವ ಈ ಪ್ರಾಪರ್ಟಿ ಎಕ್ಸ್​ಪೋನಲ್ಲಿ ಹಲವಾರು ಬಿಲ್ಡರ್ ಹಾಗೂ ಡೆವಲಪರ್ಸ್ ಭಾಗವಹಿಸಿದ್ದಾರೆ. ಹತ್ತಾರು ಬ್ಯಾಂಕ್​ಗಳು ಪಾಲ್ಗೊಂಡಿವೆ. ಗ್ರಾಹಕರಿಗೆ ಒಂದೇ ವೇದಿಕೆಯಲ್ಲಿ ನಿವೇಶನ, ಅಪಾರ್ಟ್​ಮೆಂಟ್​, ಮನೆಯ ಒಳವಿನ್ಯಾಸ, ಸಾಲ ಸೌಲಭ್ಯ ಸೇರಿದಂತೆ ಇತರ ಮಾಹಿತಿ ದೊರೆಯಲಿದೆ.