Tvk Vijay: ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ, ನಟ ವಿಜಯ್, ತಮ್ಮ ಪಕ್ಷಕ್ಕೆ ಸಂಬಂಧಿಸಿದ ರಾಜಕೀಯ ಸಭೆಗಳಿಗೆ ಷರತ್ತುಗಳನ್ನು ವಿಧಿಸಿದ್ದಾರೆಂದು ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗರಿ| Mohanlal
ಪುತ್ತೂರಿನಲ್ಲಿ ನಡೆದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯ್, ನಾನು ಮುಕ್ತವಾಗಿ ಸಂಚಾರ ನಡೆಸಲು ಷರತ್ತಿನ ನೆಪದಲ್ಲಿ ನಿರ್ಬಂಧ ಹೇರುವ ಮೂಲಕ ಜನರನ್ನು ಭೇಟಿಯಾಗುವುದನ್ನು ತಪ್ಪಿಸುತ್ತಿದೆ. ಮುಖ್ಯಮಂತ್ರಿ ಸರ್, ನೀವು ಪ್ರಧಾನಿ ಮತ್ತು ಗೃಹ ಸಚಿವರ ಭೇಟಿಯ ಸಮಯದಲ್ಲಿ ಇದೇ ರೀತಿಯ ಷರತ್ತುಗಳನ್ನು ವಿಧಿಸುತ್ತೀರಾ ಅಥವಾ ಟಿವಿಕೆಗೆ ಮಾಡಿದಂತೆ ವಿದ್ಯುತ್ ಅಡ್ಡಿಪಡಿಸುತ್ತೀರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಪಾಳುಬಾವಿಗೆ ಬಿದ್ದಿದ್ದ ವ್ಯಕ್ತಿ ರಕ್ಷಣೆ
ಇದೇ ರೀತಿ ಪ್ರಧಾನಿ ಅಥವಾ ಗೃಹ ಸಚಿವರ ವಿಷಯದಲ್ಲಿ ಇಂತಹ ತಂತ್ರಗಳನ್ನು ಬಳಸಿದರೆ ತೊಂದರೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದು ಡಿಎಂಕೆ ಸರ್ಕಾರಕ್ಕೆ ತಿಳಿದಿದೆ, ಆದ್ದರಿಂದ ನನ್ನ ಮೇಲೆ ಇದನ್ನೆಲ್ಲಾ ಪ್ರಯೋಗಿಸುತ್ತಿದ್ದಾರೆ.ಮುಂಬರುವ 2026 ಚುನಾವಣೆ ಟಿವಿಕೆ ಮತ್ತು ಡಿಎಂಕೆ ನಡುವೆ ನಡೆಯಲಿದೆ,ಇಂತಹ ಬೆದರಿಕೆಗಳಿಗೆ ಟಿವಿಕೆ ಹೆದರುವುದಿಲ್ಲ, ನನಗೆ ರಾಜ್ಯದ ಜನರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ ಎಂದರು.(ಏಜೆನ್ಸೀಸ್)