ನ್ಯೂಸ್

ಮದುವೆಗೆ ಮುನ್ನ ವಿಯೆಟ್ನಾಂಗೆ ಹಾರಿದ ರಶ್ಮಿಕಾ-ವಿಜಯ್ ದೇವರಕೊಂಡ..ಫ್ಯಾನ್ಸ್​ ಏನಂತಿದ್ದಾರೆ ನೋಡಿ..

ಹೈದರಾಬಾದ್​: ಡೇಟಿಂಗ್​ನಲ್ಲಿದ್ದ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ದೇವರಕೊಂಡ ನಿಶ್ಚಿತಾರ್ಥ ಫೆಬ್ರವರಿ ಎರಡನೇ ವಾರದಲ್ಲಿ ನಡೆಯಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಈ ಜೋಡಿ ವಿಯೆಟ್ನಾಂಗೆ ಹಾರಿದ್ದಾರೆ ಎನ್ನಲಾಗುತ್ತಿದೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆಗೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದು, ಇದರ ಬಳಿಕ ಇದೀಗ ಇವರಿಬ್ಬರೂ ವಿಯೆಟ್ನಾಂಗೆ ಪ್ರವಾಸ ಕೈಗೊಂಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ವಿಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಬೀದಿ ಆಹಾರ ತಿಂದು ನಗೆ ಬೀರಿದ್ದಾರೆ. ಮತ್ತೊಂದೆಡೆ ರಶ್ಮಿಕಾ ಕೂಡ ಕೆಲವು ಫೋಟೋ ಶೇರ್​ಮಾಡಿಕೊಂಡಿದ್ದಾರೆ. ಟೋಪಿ ಧರಿಸಿರುವ ರಶ್ಮಿಕಾ ಈ ಟೋಪಿ ನನಗೆ ತುಂಬಾ ಇಷ್ಟವಾಯಿತು. ಇದನ್ನು ಮನೆಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಜೋಡಿಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೆಟ್ಟಿಗರು ಇದು ಪ್ರೀ ಹನಿಮೂನಾ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ಗುಡ್​ನ್ಯೂಸ್​ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.

ರಶ್ಮಿಕಾ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಆ ನಂತರ ಟಾಲಿವುಡ್​ನಲ್ಲಿ ಬ್ಯೂಸಿಯಾದರು. ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಕನ್ನಡದ ನಾಯಕ ರಕ್ಷಿತ್ ಶೆಟ್ಟಿ ಅವರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಸಂಬಂಧ ಮುರಿದು ಬಿದ್ದು, ತೆಲುಗಿಗೆ ಹಾರಿದ್ದರು.