ಚಿಕ್ಕಮಕ್ಕಳು ಮುಗ್ದತೆಯಲ್ಲಿ ಏನೇ ಮಾಡಿದರು ನೋಡಲು ಮುದ್ದಾಗಿ ಇರುತ್ತದೆ. ಅವರು ಮಾಡುವ ಚೇಸ್ಟೆಗಳು ಒಂದೆರಡಲ್ಲ. ಸದ್ಯ ಚಿಕ್ಕ ಹುಡುಗಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ. ಸಾಮಾನ್ಯವಾಗಿ ಮಕ್ಕಳು ಕಪ್ಪೆ ನೋಡಿದರೆ ಹೆದರುತ್ತಾರೆ. ಆದರೆ ವಿಡಿಯೋದಲ್ಲಿ ಹುಡುಗಿಯು ಗೊಂದಲದಲ್ಲಿ ಕಪ್ಪೆಯನ್ನು ಟೇಸ್ಟ್ ಮಾಡಿದ್ದಾಳೆ. ನೆಟ್ಟಿಗರು ವಿಡಿಯೋ ನೋಡಿ ನಗು ತಡೆಯಲಾಗಲಿಲ್ಲ ಎನ್ನುತ್ತಿದ್ದಾರೆ.
ಇದನ್ನು ಓದಿ: ದುಬೈನ ದುಬಾರಿ ಚಹಾದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ; ಈ ‘ಟೀ’ಗೆ ಖರೀದಿಗೆ EMI ಮೊರೆ ಹೋಗಲೆಬೇಕು | Dubai
ವೈರಲ್ ವಿಡಿಯೋದಲ್ಲಿ ಹುಡುಗಿ ಒಂದು ಕೈಯಲ್ಲಿ ಐಸ್ ಕ್ರೀಮ್ ಅನ್ನು ಮತ್ತೊಂದು ಕೈಯಲ್ಲಿ ಕಪ್ಪೆ ಹಿಡಿದಿರುವುದನ್ನು ನೋಡಬಹುದು. ಆಕೆ ಐಸ್ ಕ್ರೀಮ್ ಎಂದು ಭಾವಿಸಿ ಐಸ್ ಕ್ರೀಮ್ ತಿನ್ನವಂತೆ ಕಪ್ಪೆಯನ್ನು ನೆಕ್ಕುವುದನ್ನು ಕಾಣಬಹುದು. ಬಳಿಕ ಆ ಚಿಕ್ಕ ಹುಡುಗಿಗೆ ಅಸಹ್ಯ ಅನಿಸಿತು. ಕಪ್ಪೆಯ ಮೇಲೆ ಉಗುಳುತ್ತಾಳೆ. ನಂತರ ಮತ್ತೆ ಐಸ್ ಕ್ರೀಮ್ ತಿನ್ನಲು ಪ್ರಾರಂಭಿಸಿದೆ. ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ಸದ್ಯಕ್ಕೆ ದೃಢಪಟ್ಟಿಲ್ಲ.
ವಿಡಿಯೋ ವೈರಲ್ ಆದಗಿನಿಂದ ಇಲ್ಲಿಯವರೆಗೂ 43 ಲಕ್ಷ ಮಂದಿ ವೀಕ್ಷಿಸಿದ್ದಾಋಎ. 92 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಹುಡುಗಿಯ ನಡೆ ವಿಚಿತ್ರ ಎನಿಸಿದರೆ, ಇನ್ನು ಕೆಲವರಿಗೆ ಆಕೆಯ ಸ್ಟೈಲ್ ನೋಡಿ ನಗು ತಡೆಯಲಾಗಲಿಲ್ಲ ಎಂದು ಹೇಳಿದ್ದಾರೆ. ಐಸ್ ಕ್ರೀಮ್ ಮತ್ತು ಕಪ್ಪೆ ಟಿಪಿಕಲ್ ಕಾಂಬೋ, ನೀವು ಕಪ್ಪೆಯನ್ನು ಟೇಸ್ಟ್ ಮಾಡಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.