ಬೆಂಗಳೂರು: ಇಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್ ಮೇಲೆ 300 ಕಿ.ಮೀ. ವೇಗದಲ್ಲಿ ಬೈಕ್ ಚಲಾಯಿಸಿದ ನಂತರ ಸ್ಪೀಡೋ ಮೀಟರ್ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಾಕಿ ವೈರಲ್ ಮಾಡಿದ್ದವ, ಅಷ್ಟೇ ವೇಗದಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಅತಿವೇಗದ ಚಾಲನೆ ಮಾಡಿದಾತನ ಹೆಸರು ಮುನಿಯಪ್ಪ. ವಯಸ್ಸು 29. ಲಾಕ್ಡೌನ್ ಇದ್ದಾಗ ಬೈಕ್ ಚಲಾಯಿಸಿ ದುಸ್ಸಾಹಸ ತೋರಿದ್ದ. ಆತ ಓಡಿಸಿದ ಬೈಕ್ 1000 ಸಿಸಿ ಸಾಮರ್ಥ್ಯ ಯಮಹಾ. ಆ ಬೈಕ್ ಅನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಅಮ್ಮಾ…. ಒಮ್ಮೆ ನಿನ್ನ ಕಣ್ತುಂಬಿಕೊಂಡು ಬಿಡುವೆ: ಐಸಿಯು ಕಿಟಕಿ ಬಳಿ ಕುಳಿತ ಪ್ಯಾಲೆಸ್ತೈನ್ ಯುವಕನ ಕಣ್ಣೀರ ಕಥೆ
ಸಿಸಿಬಿ ಪೊಲೀಸರು ವೈರಲ್ ವಿಡಿಯೋ ನೋಡಿ ಕೂಡಲೇ ಕಾರ್ಯಪ್ರವೃತ್ತರಾಗಿದ್ದು ಮುನಿಯಪ್ಪನನ್ನು ಬಂಧಿಸಿ ಸಂಚಾರಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.