ನ್ಯೂಸ್

VIDEO| ಪುನೀತ್​​ಗೆ ಬಿರಿಯಾನಿ, ಕೋಳಿ ಸಾರು ಎಡೆಯಿಟ್ಟ ಅಭಿಮಾನಿಗಳು; ಗ್ರಾಮಸ್ಥರಿಗೂ ವಿತರಣೆ

ರಾಮನಗರ: ನಟ ಪುನೀತ್ ರಾಜಕುಮಾರ್ 11ನೇ ದಿನದ ತಿಥಿ ಕಾರ್ಯ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆಯೇ ಈ ಗ್ರಾಮದಲ್ಲಿ ಅದ್ಧೂರಿ ತಿಥಿ ಕಾರ್ಯ ನೆರವೇರಿಸಲಾಯಿತು. ಪುನೀತ್ ಫೋಟೋ ಮುಂದೆ ಬಿರಿಯಾನಿ ಮತ್ತು ನಾಟಿ ಕೋಳಿ ಸಾರನ್ನು ಎಡೆಯಿಟ್ಟು ಪೂಜೆ ಮಾಡಿ, ಗ್ರಾಮಸ್ಥರಿಗೂ ಹಂಚಿ ಅಭಿಮಾನ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಾಲೆತೋಪು ಗ್ರಾಮದಲ್ಲಿ 'ಪವರ್ ಸ್ಟಾರ್ ಬ್ರಿಗೇಡ್‌'ನಿಂದ ಈ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೂಜೆ ಮಾಡಿ, ನಾಟಿಕೋಳಿ ಸಾರು ಮತ್ತು ಬಿರಿಯಾನಿಯನ್ನು ಗ್ರಾಮದ ಜನರಿಗೆ ಹಾಗೂ ಪುನೀತ್ ಅಭಿಮಾನಿಗಳಿಗೆ ವಿತರಣೆ ಮಾಡಿದರು.