Meat Ban:ಭಾರತದಲ್ಲಿ ಮಾಂಸಹಾರವನ್ನು ನಿಷೇಧಿಸಬೇಕು ಎಂದು ಬಾಲಿವುಡ್ ಹಿರಿಯ ನಟ ಹಾಗೂ ಟಿಎಂಸಿ ನಾಯಕ ಶತ್ರುಘ್ನ ಸಿನ್ಹಾ ಬುಧವಾರ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮಗಳ ಜತೆ ಮಾತನಾಡಿದ ಸಿನ್ಹಾ, ದೇಶದಲ್ಲಿ ಹಲವು ಭಾಗಗಳಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ. ದೇಶದಲ್ಲಿ ಗೋಮಾಂಸವನ್ನು ಮಾತ್ರವಲ್ಲ ಮಾಂಸಹಾರವನ್ನು ನಿಷೇಧಿಸಬೇಕು ಎಂದು ನಾನು ಭಾವಿಸುತ್ತೇನೆ. ಅದಗ್ಯೂ, ದೇಶದ ಈಶಾನ್ಯ ಭಾಗಗಳು ಸೇರಿದಂತೆ ಇತರ ಕಡೆಗಳಲ್ಲಿ ಗೋಮಾಂಸ ತಿನ್ನುವುದು ಕಾನೂನು ಬದ್ಧವಾಗಿದೆ. ಅಲ್ಲಿ ಗೋಮಾಂಸ ತಿಂದು ವ್ಹಾ! ಎನ್ನಬಹುದು. ಆದರೆ, ಉತ್ತರ ಭಾರತದಲ್ಲಿ ಗೋವು ಮಾತೆ ಸಮಾನ ಎಂದು ಹೇಳಿದ್ದಾರೆ.
ದೇಶದಲ್ಲಿ ಏಕರೂಪ ಕಾನೂನು ಸಂಹಿತೆ ಅನುಷ್ಠಾನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇಳೆ ಗೋಮಾಂಸದ ಬಗ್ಗೆ ಮಾತನಾಡಿದ್ದಾರೆ.(ಏಜೆನ್ಸೀಸ್)