ನ್ಯೂಸ್

ಆಸ್ಪತ್ರೆಗೆ ದಾಖಲಾದ ಹಿರಿಯ ನಟ ದಿಲೀಪ್​ಕುಮಾರ್

rashmirhebbur

ನವದೆಹಲಿ : ಉಸಿರಾಟದಲ್ಲಿ ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ಬಾಲಿವುಡ್​ ಹಿರಿಯ ನಟ ದಿಲೀಪ್​ ಕುಮಾರ್​ ಅವರನ್ನು ಇಂದು ಬೆಳಿಗ್ಗೆ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೊನೇತರ ಚಿಕಿತ್ಸಾ ವಿಭಾಗದಲ್ಲಿ ಅವರ ತಪಾಸಣೆ ನಡೆಯುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ನೀಡಿರುವ ಅವರ ಮ್ಯಾನೇಜರ್​, "ದಿಲೀಪ್​ ಸಾಹಬ್​ರನ್ನು ಹಿಂದೂಜಾ ಆಸ್ಪತ್ರೆಯ ನಾನ್​ಕೋವಿಡ್​ ಪಿಡಿಗೆ ಪರೀಕ್ಷೆ ಮತ್ತು ತಪಾಸಣೆಗಾಗಿ ದಾಖಲಿಸಲಾಗಿದೆ. ಅವರಿಗೆ ಆಗಾಗ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಹೃಯಯ ಡಾ. ನಿತಿನ್ ಗೋಖಲೆ ಅವರ ನೇತೃತ್ವದ ವೈದ್ಯರ ತಂಡ ಆರೈಕೆ ನೀಡುತ್ತಿದೆ" ಎಂದು ಹೇಳಿದ್ದಾರೆ.

ಹೃದ್ರೋಗ ತಜ್ಞ ಡಾ.ನಿತಿನ್ ಗೋಖಲೆ ಜೊತೆಗೆ ಶ್ವಾಸಕೋಶಶಾಸ್ತ್ರಜ್ಞ ಡಾ.ಜಲಿಲ್ ಪಾರ್ಕರ್ ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎನ್ನಲಾಗಿದೆ. 98 ವರ್ಷದ ದಿಲೀಪ್​ಕುಮಾರ್​ ಅವರನ್ನು ಕಳೆದ ತಿಂಗಳಷ್ಟೆ ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಎರಡು ದಿನಗಳ ನಂತರ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್)