ರೋಗಿಗಳ ಸೇವೆಯಲ್ಲಿ ನಿರತರಾಗಿದ್ದ 646 ವೈದ್ಯರು ಕರೊನಾಗೆ ಬಲಿ

doctors
Published on

ನವದೆಹಲಿ : ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ, ಭಾರತದಲ್ಲಿ ರೋಗಿಗಳ ಸೇವೆಯಲ್ಲಿ ತೊಡಗಿದ್ದ 646 ವೈದ್ಯರು, ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಹೇಳಿದೆ. ಮೊದಲ ಅಲೆಯ ಸಂದರ್ಭದಲ್ಲಿ ಕಳೆದ ವರ್ಷವಿಡೀ 748 ಜನ ವೈದ್ಯರು ಕರೊನಾಕ್ಕೆ ಬಲಿಯಾಗಿದ್ದರು. ಎರಡನೇ ಅಲೆಯಲ್ಲಿ ಕಡಿಮೆ ಅವಧಿಯಲ್ಲೇ ಹೆಚ್ಚು ವೈದ್ಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, 109 ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ. ಬಿಹಾರದಲ್ಲಿ 96 ವೈದ್ಯರು ಮೃತಪಟ್ಟಿದ್ದರೆ, ಉತ್ತರಪ್ರದೇಶದಲ್ಲಿ 79 ವೈದ್ಯರು ಮೃತಪಟ್ಟಿದ್ದಾರೆ. ರಾಜಸ್ಥಾನ(43), ಝಾರ್ಕಂಡ್​(39), ಗುಜರಾತ್(37), ಆಂಧ್ರಪ್ರದೇಶ(35), ತೆಲಂಗಾಣ(34), ತಮಿಳುನಾಡು(32) ಮತ್ತು ಪಶ್ಚಿಮ ಬಂಗಾಳ(30)ಗಳಲ್ಲೂ ಅಧಿಕ ಸಾವುಗಳು ಸಂಭವಿಸಿವೆ. ಕರ್ನಾಟಕದಲ್ಲಿ 9 ವೈದ್ಯರು ಮರಣ ಹೊಂದಿದ್ದಾರೆ ಎಂದು ಐಎಂಎ ಕೋವಿಡ್​ 19 ರಿಜಿಸ್ಟ್ರಿಯ ಜೂನ್ 2 ರವರೆಗಿನ ಮಾಹಿತಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net