ಕೇರಳ: ಕೇರಳದಲ್ಲಿ ಪತ್ತೆಯಾದ JN.1 ಕೋವಿಡ್ 19 ಸಬ್ ವೇರಿಯಂಟ್ ಸೋಂಕಿಗೆ ಕುರಿತಂತೆ ಮಾತನಾಡಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, ತೀವ್ರ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ, "ಆತಂಕ ಪಡುವಂತ ಅಗತ್ಯವಿಲ್ಲ. ಅದು ಸಬ್ ವೇರಿಯಂಟ್ ಆಗಿದೆ, ಈಗ ಪತ್ತೆಯಾಗಿದೆ. ಎರಡು-ಮೂರು ತಿಂಗಳ ಹಿಂದೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಭಾರತೀಯರಲ್ಲಿ ಪರೀಕ್ಷೆ ನಡೆಸಿದಾಗ ಇದು ಪತ್ತೆಯಾಗಿತ್ತು. ಇದು ಭಾರತದ ಇತರ ಭಾಗಗಳಲ್ಲಿ ಅಸ್ತಿತ್ವದಲ್ಲಿದೆ. ಈ ಸೋಂಕನ್ನು ಕೇರಳ ಪತ್ತೆಹಚ್ಚಿದೆ" ಎಂದರು.
"ಕೇರಳದ ಆರೋಗ್ಯ ವ್ಯವಸ್ಥೆಯು ತುಂಬಾ ಉತ್ತಮವಾಗಿರುವುದರಿಂದ, ನಾವು ಜೀನೋಮಿಕ್ ಸೀಕ್ವೆನ್ಸಿಂಗ್ ಮೂಲಕ ಅದನ್ನು ಪತ್ತೆಹಚ್ಚಬಹುದು. ಹಾಗಾಗಿ ಹೆಚ್ಚು ಚಿಂತಿಸಬೇಕಾಗಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ
ಡಿಸೆಂಬರ್ 8 ರಂದು ಕೇರಳದ ತಿರುವನಂತಪುರಂ ಜಿಲ್ಲೆಯ ಕರಕುಲಂನಿಂದ ಆರ್‌ಟಿ-ಪಿಸಿಆರ್ ಪಾಸಿಟಿವ್ ಮಾದರಿಯಲ್ಲಿ ಮೊದಲ ಕೋವಿಡ್ 19 ಸಬ್ ವೇರಿಯಂಟ್ ಜೆಎನ್. 1 ಪ್ರಕರಣ ಪತ್ತೆಯಾಯಿತು ಎಂದು ಐಸಿಎಂಆರ್‌ನ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ,(ಏಜೆನ್ಸೀಸ್).