ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಬಿಗ್ಬಾಸ್ ಮನೆಯಿಂದಲೇ ಬಂಧನವಾಗಿದ್ದ ವರ್ತೂರು ಸಂತೋಷ್ಗೆ ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ ಇಂದು ಜಾಮೀನು ನೀಡಿದೆ. ಸಂತೋಷ್ ಜೈಲಿನಿಂದ ರಿಲೀಸ್ ಆಗಿದ್ದೇ ತಡ ಅವರ ಊರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಜಾಮೀನು ಪಡೆದ ನಂತರ ಇದೀಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ವರ್ತೂರು ಸಂತೋಷ್ ಮತ್ತೆ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುತ್ತಾರಾ ಅಥವಾ ಹೋಗದೆ ಹೊರ ಉಳಿಯುತ್ತಾರ ಎಂಬುದು. ಸದ್ಯ ಈ ವಿಷಯ ಇದೀಗ ತೀವ್ರ ಚರ್ಚೆಯಾಗುತ್ತಿದೆ.
ಸಂತೋಷ್ ಅವರಿಗೆ 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಇದಾದ ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಸಂತೋಷ್ ಬಿಡುಗಡೆ ಮಾಡಲಾಯಿತು. ಜೈಲಿನ ಹೊರಗಡೆ ಅವರನ್ನು ಕರೆದುಕೊಂಡು ಹೋಗಲು ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ಕಾರೊಂದು ಜೈಲಿನ ಬಳಿ ನಿಂತಿದ್ದು, ಸಂತೋಷ್ ಮತ್ತೆ ಬಿಗ್ಬಾಸ್ ಮನೆ ತಲುಪುದು ಖಚಿತವಾಗಿದೆ.
ಈ ಬಗ್ಗೆ ಬಿಗ್ ಬಾಸ್ ತಂಡ ಹೇಳುವುದೇನು? ಹೊರಡಿಸಲಿರುವ ಅಧಿಕೃತ ಘೋಷಣೆಗೆ ನಿರೀಕ್ಷಿಸಬೇಕಿದೆ.