uttarakhand : ಉತ್ತರಕಾಶಿಯಲ್ಲಿ ಸಂಭವಿಸಿದ ದುರಂತದಲ್ಲಿ ಹಾನಿಗೊಳಗಾದವರಿಗೆ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎರಡು ಮಹತ್ವದ ಘೋಷಣೆಗಳನ್ನು ಹೊರಡಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯ ಕುರಿತು ಹೊಸ ಬಾಂಬ್ ಸಿಡಿಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್! | Sharad Pawar
ಇತ್ತೀಚಿಗೆ ಸಂಭವಿಸಿದ ವಿಪತ್ತಿನಿಂದಾಗಿ ಉತ್ತರಕಾಶಿಯ ಧರಾಲಿ ಗ್ರಾಮವು ಭಾರಿ ನಷ್ಟವನ್ನು ಅನುಭವಿಸಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತ್ರಸ್ತರಿಗೆ ಪ್ರಮುಖ ಹೊರಡಿಸಿದ್ದು, ರಾಜ್ಯ ಸರ್ಕಾರವು ಪ್ರತಿಯೊಬ್ಬ ವಿಪತ್ತು ಸಂತ್ರಸ್ತರೊಂದಿಗೆ ನಿಂತಿದೆ ಮತ್ತು ಶೀಘ್ರದಲ್ಲೇ ಪರಿಹಾರವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಸಂತ್ರಸ್ತರ ಒಟ್ಟಾರೆ ಪುನರ್ವಸತಿ ಪುನಃಸ್ಥಾಪನೆ ಮತ್ತು ಸುಸ್ಥಿರ ಜೀವನೋಪಾಯವನ್ನು ಬಲಪಡಿಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗುವುದು. ಸಮಿತಿಯ ಅಧ್ಯಕ್ಷತೆಯನ್ನು ಕಂದಾಯ ಕಾರ್ಯದರ್ಶಿ ವಹಿಸಲಿದ್ದಾರೆ. ಸಮಿತಿಯು ಒಂದು ವಾರದೊಳಗೆ ಸರ್ಕಾರಕ್ಕೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸುತ್ತದೆ. ವರದಿಯ ಆಧಾರದ ಮೇಲೆ, ಧರಾಲಿ ಗ್ರಾಮದ ಭವಿಷ್ಯಕ್ಕಾಗಿ ದೀರ್ಘಾವಧಿಯ ಮತ್ತು ಪರಿಣಾಮಕಾರಿ ಯೋಜನೆಯನ್ನು ರೂಪಿಸಲಾಗುವುದು ಎಂದಿದ್ದಾರೆ.
ಮೊದಲ ಘೋಷಣೆಯಡಿಯಲ್ಲಿ, ಮನೆಗಳು ಸಂಪೂರ್ಣವಾಗಿ ನಾಶವಾದವರಿಗೆ ಪುನರ್ವಸತಿ ಮತ್ತು ಸ್ಥಳಾಂತರಕ್ಕಾಗಿ ರೂ.5 ಲಕ್ಷವನ್ನು ತಕ್ಷಣದ ಸಹಾಯವನ್ನು ನೀಡಲಾಗುತ್ತದೆ. ಇದರ ಜೊತೆಗೆ, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರೂ.500,000 ಆರ್ಥಿಕ ಸಹಾಯವನ್ನು ಸಹ ನೀಡಲಾಗುತ್ತದೆ ಎಂದಿದ್ದಾರೆ.
ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಂಭವಿಸಿದ ಮೇಘಸ್ಪೋಟದಿಂದ ಹಾನಿಗೀಡಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನದ ಮೇಳೆಗೆ 250 ಜನರನ್ನು ರಕ್ಷಿಸಲಾಗಿದ್ದು, ರಕ್ಷಿಸಲ್ಪಟ್ಟ ಒಟ್ಟು ಜನರ ಸಂಖ್ಯೆ 650ಕ್ಕೆ ಏರಿದೆ. ಭಾರತೀಯ ಸೇನೆ, ಐಟಿಬಿಪಿ, ಎನ್ಡಿಆರ್ಎಫ್ ಸೇರಿ ಹಲವು ರಕ್ಷಣಾ ತಂಡಗಳ 800ಕ್ಕೂ ಹೆಚ್ಚು ಜನರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಡ್ರೋನ್ಗಳು, ಶ್ವಾನದಳ ಬಳಸಿಕೊಂಡು ನಾಪತ್ತೆಯಾದವರಿಗಾಗಿ, ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನನ್ನ ಬಳೆ ಒಡೆದರು! ಇದಕ್ಕೆಲ್ಲ ಮಮತಾ ಬ್ಯಾನರ್ಜಿ ಪೊಲೀಸರೇ ಕಾರಣ; ಮೃತ ಟ್ರೈನಿ ವೈದ್ಯೆ ತಾಯಿ ಆರೋಪ | RG Kar Protest
(ಏಜೆನ್ಸೀಸ್)
ದುರಂತದಲ್ಲಿ ಭಾರತೀಯ ಸೇನೆಯ 9 ಜನರು ಮತ್ತು 7 ನಾಗರಿಕರು ಸೇರಿ 16 ಜನರು ಕಾಣೆಯಾಗಿದ್ದಾರೆ ಎಂದು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಧರಾಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಹೋಟೆಲ್ಗಳು ಮತ್ತು ಗೆಸ್ಟ್ ಹೌಸ್ಗಳಲ್ಲಿ ಬಿಹಾರ ಮತ್ತು ನೇಪಾಳ ಮೂಲದ ವಲಸೆ ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಗಂಗೋತ್ರಿಗೆ ಹೋಗುವ ಮಾರ್ಗದಲ್ಲಿ ಧರಾಲಿಯಲ್ಲಿ ಹೆಚ್ಚಿನ ಪ್ರವಾಸಿಗರು ಉಳಿದುಕೊಳ್ಳುತ್ತಿದ್ದರು. ದಿಢೀರ್ ಪ್ರವಾಹ ಸಂಭವಿಸಿದಾಗಲೂ ಹಾನಿಗೊಳದಾಗ ಹೋಟೆಲ್ಗಳಲ್ಲಿ ಸಾಕಷ್ಟು ಪ್ರವಾಸಿಗರು ತಂಗಿದ್ದರು. ಹಾಗಾಗಿ ನಾಪತ್ತೆಯಾಗಿರುವವರ ಸಂಖ್ಯೆ ಹೆಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.