ನ್ಯೂಸ್

ಲಾರಿಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಬೊಲೆರೊ ಕಾರು! ಸ್ಥಳದಲ್ಲೇ ಮೃತಪಟ್ಟ ಮಹಿಳೆ

ಉತ್ತರ ಕನ್ನಡ: ಬೊಲೆರೊ ಕಾರೊಂದಕ್ಕೆ ಎರಡು ಲಾರಿಗಳು ಒಂದೇ ಸಮಯದಲ್ಲಿ ಡಿಕ್ಕಿ ಹೊಡೆದಿರುವ ಭೀಕರ ಘಟನೆ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ. ಮಂಗಳವಾರ ನಡೆದ ಈ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಬಾಗಲಕೋಟೆಯ ಲೋಕಾಪುರದ 8 ಜನರು ಗೋಕರ್ಣಕ್ಕೆ ಬೊಲೆರೊ ಗಾಡಿಯಲ್ಲಿ ಹೋಗುತ್ತಿದ್ದರು. ನಾಲ್ಕು ಮಹಿಳೆಯರು, ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳಿದ್ದ ಗಾಡಿಯ ಹಿಂದಿನಿಂದ ಬಂದ ಲಾರಿಯಿಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎದುರಿನಿಂದ ಬರುತ್ತಿದ್ದ ಟಿಪ್ಪರ್​ಗೆ ಬೊಲೆರೊ ಡಿಕ್ಕಿ ಹೊಡೆದಿದೆ.

ಅಙಘಾತದಲ್ಲಿ ಬೊಲೆರೊ ಸಂಪೂರ್ಣವಾಗಿ ಜಖಂ ಆಗಿದೆ. ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.