ನ್ಯೂಸ್

ಅಮೆರಿಕದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಎಚ್ಚರಿಕೆ ನೀಡಿದ ಸರ್ಕಾರ!

ಅಲಾಸ್ಕಾ: ಅಮೆರಿಕದ ರಾಜ್ಯವಾದ ಅಲಾಸ್ಕಾದಲ್ಲಿ ಭೀಕರ ಭೂಕಂಪನ ಉಂಟಾಗಿದ್ದು ಅದರ ತೀವ್ರತೆ ಸರಿಸುಮಾರು 7.4ರಷ್ಟಿತ್ತು. ಈ ರಾಜ್ಯ ಸಮುದ್ರ ತೀರದಲ್ಲಿರುವುದರಿಂದ ಸಂಭವನೀಯ ಸುನಾಮಿಯ ಎಚ್ಚರಿಕೆ ನೀಡಲಾಗಿದೆ.

ಈ ಕುರಿತಾಗಿ ಅಮೆರಿಕದ ಭೂ ವೈಜ್ಞಾನಿಕ ಸಮೀಕ್ಷೆ ಇಂದು (ಜು.16) ಮಾಹಿತಿ ಬಿಡುಗಡೆ ಮಾಡಿದೆ. ದಕ್ಷಿಣ ಅಲಕ್ಸಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.  ಅಲಾಸ್ಕಾದ ಪಾಮರ್‍ ಎಂಬಲ್ಲಿರುವ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ "ಉತ್ತರ ಅಮೆರಿಕದ ಇತರ ಅಮೆರಿಕ ಮತ್ತು ಕೆನಡಿಯನ್ ಪೆಸಿಫಿಕ್ ಕರಾವಳಿಗಳಿಗೆ ಇರುವ ಸುನಾಮಿ ಅಪಾಯದ ಮಟ್ಟವನ್ನು ಮೌಲ್ಯಮಾಪನ ಮಾಡಲಾಗುತ್ತಿದೆ" ಎಂದು ಅದು ಹೇಳಿದೆ.

ಅಲಾಸ್ಕನ್ ಪರ್ಯಾಯ ದ್ವೀಪದಿಂದ 13 ಮೈಲಿ (21 ಕಿಲೋಮೀಟರ್) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಅಲಾಸ್ಕಾ ಜ್ವಾಲಾಮುಖಿ ವೀಕ್ಷಣಾಲಯವು ಶಿಶಾಲ್ಡಿನ್ ಜ್ವಾಲಾಮುಖಿ ಸ್ಫೋಟಗೊಳ್ಳಲು ಭೂಕಂಪವೂ ಒಂದು ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.

"ಶಿಶಾಲ್ಡಿನ್ ಜ್ವಾಲಾಮುಖಿ ಸ್ಫೋಟ ತೀವ್ರಗೊಂಡಿದ್ದು ಸಮುದ್ರ ಮಟ್ಟದಿಂದ 15,000 ಅಡಿ (4.6 ಕಿ.ಮೀ) ಎತ್ತರದ ಬೂದಿ ಮೋಡ ಮತ್ತು ಎಸ್ಎಸ್ಇಗೆ ಚಲಿಸುವುದನ್ನು ರಾತ್ರಿ 9:00 ಗಂಟೆಗೆ ಎಕೆಡಿಟಿಯಿಂದ ಪ್ರಾರಂಭವಾಗುವ ಉಪಗ್ರಹ ದತ್ತಾಂಶದಲ್ಲಿ ಗಮನಿಸಲಾಗಿದೆ" ಎಂದು ಜ್ವಾಲಾಮುಖಿಯನ್ನು ಗಮನಿಸುವ ಏಜೆನ್ಸೀ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಅಲಾಸ್ಕಾ ಸಕ್ರಿಯ ಭೂಕಂಪನದ ತಾಣವಾಗಿದ್ದು ಪೆಸಿಫಿಕ್ ಸಾಗರದ “ರಿಂಗ್ ಆಫ್ ಫೈರ್”ನ ಭಾಗವಾಗಿದೆ. ಅಲಾಸ್ಕಾದಲ್ಲಿ 9ರ ಮಾರ್ಚ್ನಲ್ಲಿ 2.1964 ತೀವ್ರತೆಯ ಭೂಕಂಪ ಸಂಭವಿಸಿತ್ತು. ೀ ಭೂಕಂಪನ ಸುನಾಮಿಯೊಂದನ್ನು ಸೃಷ್ಟಿದ್ದು, ಅದು ಆಂಕೋರೇಜ್ ಅನ್ನು ನಾಶಪಡಿಸಿ ಗಲ್ಫ್ ಆಫ್ ಅಲಾಸ್ಕಾ, ಅಮೆರಿಕದ ಪಶ್ಚಿಮ ಕರಾವಳಿ ಮತ್ತು ಹವಾಯಿ ದ್ವೀಪವನ್ನು ಅಪ್ಪಳಿಸಿತ್ತು. (ಏಜೆನ್ಸೀಸ್)