ನ್ಯೂಸ್

ಆಕೆ ಜೀವಂತ ಸಿಗುವುದು ಅನುಮಾನ... ಬಿಕಿನಿಯಲ್ಲೇ ಭಾರತೀಯ ವಿದ್ಯಾರ್ಥಿನಿ ನಾಪತ್ತೆ, ಸ್ಫೋಟಕ ಸಂಗತಿ ಬಯಲು! Sudiksha Konanki

Sudiksha Konanki : ಡೊಮಿನಿಕನ್ ಬೀಚ್‌ನಲ್ಲಿ ನಾಪತ್ತೆಯಾದ ಭಾರತೀಯ ಮೂಲದ ವಿದ್ಯಾರ್ಥಿನಿ ಸುದೀಕ್ಷಾ ಕೋನಂಕಿ ಎಲ್ಲಿದ್ದಾಳೆ ಎಂಬುದು ಈ ಕ್ಷಣದವರೆಗೂ ತಿಳಿದು ಬಂದಿಲ್ಲ. ಈ ಘಟನೆ ನಡೆದು ಒಂದು ವಾರವೇ ಕಳೆದಿದ್ದರೂ ಯಾವುದೇ ಸುಳಿವು ಪತ್ತೆಯಾಗದೇ ಈ ಪ್ರಕರಣ ನಿಗೂಢವಾಗಿಯೇ ಉಳಿದಿದೆ.

ಸುದೀಕ್ಷಾ ಕೋನಂಕಿ ಅಮೆರಿಕದ ವರ್ಜೀನಿಯಾದ ಸೌತ್ ರೈಡಿಂಗ್ ನಿವಾಸಿ. ಅವರು ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಿ-ಮೆಡಿಸಿನ್ ಓದುತ್ತಿದ್ದಾರೆ. ರಜೆಯ ಹಿನ್ನೆಲೆಯಲ್ಲಿ ಐವರು ಸ್ನೇಹಿತರೊಂದಿಗೆ ಕೆರಿಬಿಯನ್ ದೇಶ ಡೊಮಿನಿಕನ್ ರಿಪಬ್ಲಿಕ್‌ಗೆ ರಜೆಯ ಮೇಲೆ ತೆರಳಿದ್ದರು. ಅಲ್ಲಿನ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಂಟಾ ಕಾನಾದಲ್ಲಿರುವ ರಿಯು ರಿಪಬ್ಲಿಕಾ ರೆಸಾರ್ಟ್‌ನಲ್ಲಿ ಉಳಿದುಕೊಂಡು, ಬೀಚ್​ ಸೌಂದರ್ಯ ಆನಂದಿಸುತ್ತಾ, ಮೋಜು-ಮಸ್ತಿ ಮಾಡುತ್ತಿದ್ದರು. ಹೀಗಿರುವಾಗ ಆಕೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾಳೆ. ಆಕೆಯ ಸ್ನೇಹಿತರು ನೀಡಿದ ಮಾಹಿತಿಯ ಆಧಾರದ ಮೇಲೆ, ಅಧಿಕಾರಿಗಳು ಮಧ್ಯಪ್ರವೇಶಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಹುಡುಕಾಟ ನಡೆಸಲಾಗುತ್ತಿದೆ.

ಮಾರ್ಚ್ 4ರಂದು ಸುದೀಕ್ಷಾ ನಾಪತ್ತೆಯಾಗಿದ್ದಳು. ಸುಮಾರು ಒಂದು ವಾರದಿಂದ ಅವಳು ಪತ್ತೆಯಾಗಿಲ್ಲ. ಮತ್ತೊಂದೆಡೆ, ಆಕೆಯ ಪಾಲಕರು ತೀವ್ರ ಭಯಭೀತರಾಗಿದ್ದಾರೆ. ಆದಾಗ್ಯೂ, ಆಕೆಯ ಪಾಲಕರು ತಮ್ಮ ಮಗಳನ್ನು ಯಾರಾದರೂ ಅಪಹರಿಸಿರಬಹುದು ಎಂದು ಶಂಕಿಸಿದ್ದಾರೆ. ಮಾರ್ಚ್​ 4ರಂದು ಬೆಳಗಿನ ಜಾವ 3 ಗಂಟೆಗೆ ರೆಸಾರ್ಟ್ ಡಿಸ್ಕೋದಲ್ಲಿ ಪಾರ್ಟಿ ಮಾಡಿದರು. ಆ ಬಳಿಕ ಸುದೀಕ್ಷಾ ಬೆಳಿಗ್ಗೆ 4 ಗಂಟೆಗೆ ಬೀಚ್‌ಗೆ ಹೋದರು. ಬೆಳಿಗ್ಗೆ 5.50ಕ್ಕೆ ಆಕೆಯನ್ನು ಒಂಟಿಯಾಗಿ ಬಿಟ್ಟು ಸ್ನೇಹಿತರು ಹೊರಟುಹೋದರು. ಈ ವೇಳೆ ಸುದೀಕ್ಷಾ ಕಂಠಪೂರ್ತಿ ಕುಡಿದು ಬೀಚ್‌ನಲ್ಲಿ ಬಿದ್ದಿದ್ದರು. ಆ ಸಮಯದಲ್ಲಿ, ಒಬ್ಬ ವ್ಯಕ್ತಿ ಆಕೆಯನ್ನು ನೋಡಿದ್ದಾನೆ. ಆ ಸಮಯದಲ್ಲಿ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಇದಲ್ಲದೆ, ಆಕೆಯನ್ನು ನೋಡಿದ ವ್ಯಕ್ತಿ ಆಕೆ ವಾಂತಿ ಮಾಡಿದ್ದಳು ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದಾನೆ.

ಸುದೀಕ್ಷಾ ಬೀಚ್‌ನಲ್ಲಿದ್ದಾಗ ಯಾವುದೇ ಬಟ್ಟೆ ಧರಿಸಿರಲಿಲ್ಲ ಎಂದು ಹೇಳಲಾಗಿದೆ. ಏಕೆಂದರೆ, ಅವಳ ಬಟ್ಟೆಗಳು ಬೀಚ್‌ನಲ್ಲಿ ಕಂಡುಬಂದಿವೆ. ಬಿಕಿನಿ ಮಾತ್ರ ಧರಿಸಿದ್ದಳು ಎಂದು ಹೇಳಲಾಗಿದೆ. ಅವಳನ್ನು ಕೊನೆಯದಾಗಿ ನೋಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತಮ್ಮ ಮಗಳನ್ನು ಅಪಹರಿಸಿದವನು ಅವನೇ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ, ಪೊಲೀಸರು ಅವನ ವಿರುದ್ಧ ಅಪಹರಣದ ಅನುಮಾನ ವ್ಯಕ್ತಪಡಿಸಿಲ್ಲ. ಆದರೆ, ಅವಳು ಬೀಚ್‌ನಲ್ಲಿದ್ದ ಕಾರಣ, ಒಂದು ದೊಡ್ಡ ಅಲೆ ಅವಳನ್ನು ಕೊಚ್ಚಿಕೊಂಡು ಹೋಗಿರಬೇಕು ಎಂದು ಶಂಕಿಸಿದ್ದಾರೆ. ಅವಳು ಬೀಚ್‌ಗೆ ಕೊಚ್ಚಿಕೊಂಡು ಹೋಗಿದ್ದರೆ, ಶವ ದಡಕ್ಕೆ ಬಂದು ಸೇರಬೇಕಿತ್ತು. ಆದರೆ, ಒಂದು ವಾರ ಕಳೆದರೂ ಶವ ಹೊರಬರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗಳು ವ್ಯಕ್ತವಾಗುತ್ತಿವೆ. ತಮ್ಮ ಮಗಳನ್ನು ಯಾರೋ ಅಪಹರಿಸಿರಬೇಕು ಎಂಬ ಅನುಮಾನಗಳನ್ನು ಪೋಷಕರು ವ್ಯಕ್ತಪಡಿಸುತ್ತಿದ್ದಾರೆ.

ಆಕೆ ಜೀವಂತವಾಗಿ ಸಿಗುವ ಸಾಧ್ಯತೆ ಕಡಿಮೆ ಎಂದು ಡೊಮಿನಿಕನ್ ರಿಪಬ್ಲಿಕ್ ನಾಗರಿಕ ರಕ್ಷಣಾ ನಿರ್ದೇಶಕ ಜುವಾನ್ ಸಲಾಸ್ ಹೇಳಿದ್ದಾರೆ. ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ದೋಣಿಗಳನ್ನು ಬಳಸಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಮಗಳು ಒಂದು ವಾರದಿಂದ ನಾಪತ್ತೆಯಾಗಿರುವ ಸುದ್ದಿಯನ್ನು ಕೇಳಿ, ಪಾಲಕರು ದುಃಖದ ಕಡಲಲ್ಲಿ ಮುಳುಗಿದ್ದಾರೆ. (ಏಜೆನ್ಸೀಸ್​)