ನ್ಯೂಸ್

ಮಗು ಹೆರಲಿಲ್ಲ ಎಂಬ ಕಾರಣಕ್ಕೆ ವಿಷ ಉಣಿಸಿ ಹತ್ಯೆ ಮಾಡಿದ ಕುಟುಂಬಸ್ಥರು!

ಲಖನೌ: ಮದುವೆಯಾಗಿ 18 ವರ್ಷಗಳಾದರೂ ಮಕ್ಕಳನ್ನು ಹೆರಲಿಲ್ಲ ಎಂಬ ಕಾರಣಕ್ಕೆ ಗಂಡನ ಮನೆಯವರಿಗೆ ಮಹಿಳೆಗೆ ವಿಷವುಣಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಘಟನನೆಯೂ ಕೌಶಂಬಿ ಜಿಲ್ಲೆಯ ಗ್ರಾಮ ಒಂದರಲ್ಲಿ ನಡೆದಿದ್ದು ಪ್ರಕರಣದ ಸಂಬಂಧ ಮೃತ ಮಹಿಳೆಯ ಪತಿ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಷವುಣಿಸಿ ಹತ್ಯೆ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಭಾನುವಾರ ಸಂಜೆ ಘಟನೆ ನಡೆದಿದ್ದು ಮಗು ಆಗಗಲಿಲ್ಲ ಎಂಬ ಕಾರಣಕ್ಕೆ ಮೃತ ಮಹಿಳೆಯ ಗಂಡನ ಮನೆಯವರು ಆಕೆಯನ್ನು ದೂಷಿಸಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮೃತ ಮಹಿಳೆಯ ಅತ್ತೆ ಸಾಲಿ ಬೇಗಂ ಆಕೆಗೆ ಬಲವಂತವಾಗಿ ವಿಷವುಣಿಸಿದ್ದಾರೆ.

ಸಹೋದರನಿಗೆ ಕರೆ

ಮೃತ ಮಹಿಳೆ ತನ್ನಗೆ ವಿಷ ಕುಡಿಸಿ ಕುಟುಂಬಸ್ಥರು ಹತ್ಯೆ ಮಾಡಲು ಮುಂದಾಗಿರುವ ಕುರಿತು ಮಹಿಳೆ ತನ್ನ ಸಹೋದರ ಗೌಸ್​ ಮೊಹಮ್ಮದ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಕೂಡಲ್ಲೇ ಸ್ಥಳಕ್ಕೆ ದೌಡಾಯಿಸಿದ ಗೌಸ್​ ತನ್ನ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ.

ಪರಾರಿ

ಮಹಿಳೆಯೆ ವಿಷವುಣಿಸಿ ಹತ್ಯೆ ಮಾಡಿದ ಆರೋಪಿಗಳು ಪರಾರಿಯಾಗಿದ್ದು ಅವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಆರೋಪಿಗಳಿಗೆ ಕಠಿಣ ಕಾನೂನು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಜಿಲ್ಲಾ ಉಪ ಪೊಲೀಸ್​ ವರಿಷ್ಠಾಧಿಕಾರಿ ಸಮರ್​ ಬಹದ್ದೂರ್​ ಸಿಂಗ್​ ತಿಳಿಸಿದ್ದಾರೆ.